2017ರ ವಿಂಬಲ್ಡನ್ ಗರಿ ರೋಜರ್ ಫೆಡರರ್ ಮುಡಿಗೇರಿದೆ. ಟೂರ್ನಿಯುದ್ದಕ್ಕೂ ಅಮೋಘ ಆಟವಾಡಿದ್ದ ಫೆಡರರ್ ಫೈನಲ್ನಲ್ಲಿ ಮರೇನ್ ಸಿಲಿಕ್ ಅವರನ್ನ ಎದುರಿಸಿದ್ರು. ರೋಚಕ ಕಾದಾಟದಲ್ಲಿ ಫೆಡರರ್ ಸಿಲಿಕ್ ಮಣ್ಣು ಮುಕ್ಕಿಸಿದ್ರು.ಅಲ್ದೇ.. ವಿಂಬಲ್ಡನ್ ಟ್ರೋಫಿಯನ್ನನು ಎತ್ತಿ ಹಿಡಿದ್ರು.. ತಾಳ್ಮೆಯ ಆಟ.. ನಾಜೂಕಿನ ಪ್ಲೇಸ್ಮೆಂಟ್.ವೇಗವಾದ ಹೊಡೆತ.ಅಷ್ಟೇ ಅದ್ಭುತವಾದ ಸರ್ವ್ಗಳು.. ಈ ತರಹದ ಆಟವನ್ನ ಮತ್ತೊಮ್ಮೆ ಹೊರಹಾಕಿದ ಸ್ವಿಸ್ನ ರೋಜರ್ ಫೆಡರರ್ ಇದೀಗ ಮತ್ತೊಮ್ಮೆ ವಿಂಬಲ್ಡನ್ ಪ್ರಶಸ್ತಿಗೆ ಮುತ್ತಿಟ್ಟಿದ್ದಾರೆ. ಹೌದು.. ಭಾನುವಾರ ನಡೆದ ವಿಂಬಲ್ಡನ್ ಗ್ರ್ಯಾಂಡ್ ಸ್ಲ್ಯಾಮ್ ಟೂರ್ನಿಯ ಫೈನಲ್ನಲ್ಲಿ ಮರೇನ್ ಸಿಲಿಕ್ ವಿರುದ್ಧ ಅಬ್ಬರಿಸಿದ ಫೆಡರರ್ 8ನೇ ಬಾರಿಗೆ ವಿಂಬಲ್ಡನ್ ಗರಿಯನ್ನ ಮುಡಿಗೇರಿಸಿಕೊಂಡಿದ್ದಾರೆ.
ಆಸ್ಟ್ರೇಲಿಯನ್ ಓಪನ್ ಗೆದ್ದು ವಿಶ್ವಾಸದಲ್ಲಿದ್ದ ಫೆಡರರ್.. ಫ್ರೆಂಚ್ ಓಪನ್ನಿಂದ ದೂರ ಸರಿದಿದ್ರು.. ಗಾಯದ ಬಳಿಕ ಫೆಡರರ್ ಆಟ ಮೊನಚಾಗಿರ್ಲಿಲ್ಲ. ಹೀಗಾಗಿಯೇ ಕಪ್ ಗೆಲ್ಲುವ ನಿರೀಕ್ಷೆಯೂ ಇರ್ಲಿಲ್ಲ.. ಯಾವಾಗ ಸ್ಟಾರ್ ಆಟಗಾರರು ವಿಂಬಲ್ಡನ್ನಿಂದ ಹೊರನಡೆದ್ರೋ ಆಗಲೇ ಮತ್ತೊಂದು ದಾಖಲೆಯ ಕನಸಿನ ಬೀಜ ಮೊಳಕೆ ಒಡೆಯಿತು. ಇದಕ್ಕೆ ಪುಷ್ಠಿ ಎಂಬಂತೆ ಆಡಿದ 35 ವರ್ಷದ ಫೆಡರರ್ ಹಂತ ಹಂತವಾಗಿ ಫೈನಲ್ ಪ್ರವೇಶಿಸಿದ್ರು. ಎಲ್ಲರೂ ಅಂದುಕೊಂಡಿದ್ದ ಹಾಗೆ ಫೈನಲ್ ಪಂದ್ಯ ಏಕ ಪಕ್ಷೀಯವಾಗಿಯೇ ಇತ್ತು..
ಫೈನಲ್ನಲ್ಲಿ ಫೆಡರರ್ ಎದುರಾಳಿಯಾಗಿದ್ದು ಜೆಕ್ ಗಣರಾಜ್ಯದ ಮರೇನ್ ಸಿಲಿಕ್.. ಬಹಳ ಕುತೂಹಲ ಕೆರಳಿಸಿದ ಈ ಪಂದ್ಯದಲ್ಲಿ ಉಭಯ ಆಟಗಾರರು ಕೂಡ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿದ್ರು. ಅಂತಯೇ ಅಂತಿಮ ಹಣಾಹಣಿ ಕೂಡ ಆರಂಭಗೊಂಡ್ತು. ಎಲ್ಲರ ಚಿತ್ತ ಕೂಡ ಮೈದಾನದ ಮಧ್ಯ ಭಾಗಕ್ಕೆ ನೆಟ್ಟಿತು.. ನಾನು ಸೋಲಲ್ಲ ಅನ್ನೋ ಹಾವಾಭಾವದಿಂದ ಇಬ್ಬರು ಕೂಡ ಜಿದ್ದಾಜಿದ್ದಿನ ಹೋರಾಟಕ್ಕೆ ಬಿದ್ರು. ಆದ್ರೆ ತನ್ನ ಪವರ್ ಶಾಟ್ಗಳ ಮೂಲಕ ಫೆಡರರ್ ಮೊದಲ ಸೆಟ್ ಗೆದ್ದು ಮುನ್ನಡೆ ಸಾಧಿಸಿದ್ರು.
ಹೀಗಾಗಿ 2ನೇ ಸುತ್ತಿನಲ್ಲಿ ಗೆಲ್ಲಲೇ ಬೇಕಾದ ಒತ್ತಡ ಸಿಲಿಕ್ ಮೇಲಿತ್ತು. ಈ ಸೆಟ್ನಲ್ಲಿ ಸಿಲಿಕ್ ತಮ್ಮ ನೈಜ ಆಟವಾಡದೆ ಕೈ ಸುಟ್ಟುಕೊಂಡರು. ಅಲ್ದೇ, ಹಲವು ಬಾರಿ ಸರ್ವ್ ಬ್ರೇಕ್ ಮುಖಭಂಗಕ್ಕೂ ಒಳಗಾದ್ರು. ಎದುರಾಳಿಯ ವೀಕ್ನೆಸ್ ಅರಿತು ಆಡಿದ ಫೆಡರರ್ ಅಂಕಗಳನ್ನ ಏರಿಸಿತ್ತಾ ಸಾಗಿ ಸೆಟ್ ಗೆದ್ರು. ಮೂರನೇ ಹಾಗೂ ನಿರ್ಣಾಯಕ ಸೆಟ್ನಲ್ಲಿ ಸಿಲಿಕ್ ಒತ್ತಡವನ್ನು ಮೆಟ್ಟಿ ನಿಲ್ಲುವಲ್ಲಿ ವಿಫಲರಾದ್ರು.. ಒಂದು ಹಂತದಲ್ಲಿ ಈ ಸೆಟ್ನಲ್ಲಾದ್ರೂ ಸಿಲಿಕ್ ಫೆಡರರ್ಗೆ ಶಾಕ್ ನೀಡ್ತಾರೆ ಎಂಬ ಲೆಕ್ಕಾಚಾರ ಫಲಿಸಲಿಲ್ಲ.. ಪರಿಣಾಮ ಫೆಡರರ್ ತಮ್ಮ ಅನುಭವದ ಸಂಪೂರ್ಣ ಲಾಭ ಪಡೆದು ಆಡಿ, ಸೆಟ್ ಗೆದ್ದು ಪ್ರಶಸ್ತಿಗೆ ಮುತ್ತಿಟ್ಟರು… ಇನ್ನು ಫೈನಲ್ ಪಂದ್ಯದಲ್ಲಿ ರೋಜರ್ ಫೆಡರರ್ 2 ಡಬಲ್ ಫಾಲ್ಟ್ಸ್ ಪಾಯಿಂಟ್.. 8 ಏಸ್ ಪಾಯಿಂಟ್.. 8ರಲ್ಲಿ 6 ನೆಟ್ ಪಾಯಿಂಟ್.. ಹೀಗೆ ಒಟ್ಟಾರೆಯಾಗಿ 96 ಅಂಕಗಳನ್ನ ಕಲೆಹಾಕಿ ಸಿಲಿಕ್ಗೆ ಮಣ್ಣು ಮುಕ್ಕಿಸಿದ್ರು.. ಅಲ್ದೇ ತನ್ನ ವೃತ್ತಿ ಬದುಕಿನ 19ನೇ ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿಯನ್ನ ಎತ್ತಿ ಹಿಡಿದ್ರು. ಅಷ್ಟಲ್ದೇ ಅಮೆರಿಕಾದ ಟೆನಿಸ್ ದಿಗ್ಗಜ ಪೀಟ್ ಸಾಂಪ್ರಾಸ್ ದಾಖಲೆಯನ್ನೂ ಮುರಿದ್ರು..
ಒಟ್ಟಾರೆಯಾಗಿ ರೋಜರ್ ಫೇಡರರ್ ವೃತ್ತಿ ಬದುಕು ಅಂಚಿನಲ್ಲಿದೆ ಎಂದವರೆಗೆ ವಿಂಬಲ್ಡನ್ ಟ್ರೋಫಿ ಎತ್ತಿ ಹಿಡಿಯುವ ಮೂಲಕ ಉತ್ತರಿಸಿದ್ದಾರೆ. ತಾನಿನ್ನೂ ಹಲವು ಗ್ರ್ಯಾಂಡ್ಸ್ಲ್ಯಾಮ್ ಟ್ರೋಫಿ ಗೆಲ್ಲೋದಿದೆ ಅನ್ನೋ ಭರವಸೆಯನ್ನ ಮೂಡಿಸಿದ್ದಾರೆ. ಟೆನಿಸ್ ಲೋಕದಲ್ಲಿ ಫೆಡರರ್ ಪಾರುಪತ್ಯ ಹೀಗೆ ಮುಂದುವರೆಯಲಿ ಅನ್ನೋದೆ ಅಭಿಮಾನಿಗಳ ಆಶಯ….
ಆಶಿಕ್ ಮುಲ್ಕಿ.. ಸ್ಪೋರ್ಟ್ಸ್ ಬ್ಯೂರೋ, ಸುದ್ದಿ ಟಿವಿ