ರಿಲೀಸ್​ ಆಯ್ತು ರೋಬೋ 2.O ಚಿತ್ರದ ಮೇಕಿಂಗ್

ಭಾರತೀಯ​ ಚಿತ್ರರಂಗದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡ್ತಿರುವ ಸಿನಿಮಾ ರೋಬೋ 2.0. ಫಸ್ಟ್​ ಲುಕ್ ಮೂಲಕವೇ ಪ್ರೇಕ್ಷಕರನ್ನ ಸಖತ್​ ಅಟ್ರಾಕ್ಟ್​ ಮಾಡಿರುವ ಚಿತ್ರದ ಮೇಕಿಂಗ್​ ಇದೀಗ ಬಿಡುಗಡೆಯಾಗಿದೆ. ಸಖತ್​ ಹೈ ಬಜೆಟ್​ ಚಿತ್ರದ ಮೇಕಿಂಗ್​ ವಿಡೀಯೋ ಹೇಗಿದೆ ಗೊತ್ತಾ?

ರೋಬೋ 2.O ಪ್ರತಿಯೊಬ್ಬ ಪ್ರೇಕ್ಷಕನ ಮನದಲ್ಲಿಯೂ ಸಿಕ್ಕಾಪಟ್ಟೆ ಕುತೂಹಲ ಮೂಡಿಸಿರುವ ಸಿನಮಾ.. ಅದರಲ್ಲೂ ಸೂಪರ್ ಸ್ಟಾರ್​ ರಜಿನಿಕಾಂತ್​ ಮತ್ತು ಅಕ್ಷಯ್​ಕುಮಾರ್​, ಆಮಿಜಾಕ್ಸನ್​ ನಂತಹ ಸ್ಟಾರ ನಟರ ಜೊತೆ ಸ್ಟಾರ್​ಡೈರೆಕ್ಟರ್​ ಶಂಕರ್​ ನಿರ್ದೇಶನದ ಚಿತ್ರ. ಇದೀಗ ಈ ಬಹುನಿರೀಕ್ಷಿತ ಚಿತ್ರದ ಮೇಕಿಂಗ್​ ರಿಲೀಸ್ ಆಗಿದೆ.

ಇಷ್ಟು ದಿನಗಳ ಕಾಲ ಭಾರತೀಯ ಸಿನಿಮಾ ರಂಗದ ಎಲ್ಲಾ ಚಿತ್ರಗಳು 2ಡಿ ರೂಪದಲ್ಲಿ ಪ್ರೇಕ್ಷಕನಿಗೆ ಮನರಂಜನೆ ನೀಡಿದ್ದವು. ಇದೀಗ ಶಂಕರ್​ ನಿರ್ದೇಶನದ ರೋಬೋ2.O ಸಿನಿಮಾ ತ್ರೀಡಿಯಲ್ಲಿ ಬರಲಿದೆ. ಬಿಡುಗಡೆಯಾಗಿರುವ ಮೇಕಿಂಗ್​ನಲ್ಲಿ ತ್ರೀಡಿ ಟೆಕ್ನಾಲಜಿಯಲ್ಲಿ ಶೂಟಿಂಗ್​ ಹೇಗಿರಲಿದೆ ಎಂಬುದು ಗೊತ್ತಾಗುತ್ತದೆ.

ಬೃಹದಾಕಾರದ ಸೆಟ್​ಗಳು, ಅಂತರಾಷ್ಟ್ರೀಯ ಖ್ಯಾತಿ ಗಳಿಸಿರುವ ಟೆಕ್ನೀಷಿಯನ್​ಗಳು, ಹೆವಿ ಬಜೆಟ್​, ಇಂಟರ್​ನ್ಯಾಷನಲ್​ ಟೆಕ್ನಾಲಜಿ, ಹಾಲಿವುಡ್​ ಸಿನಿಮಾಗಳನ್ನು ಮೀರಿಸುವ ರೀತಿಯ ಕೆಲಸ ಇವೆಲ್ಲವು ಮೇಕಿಂಗ್​ನಲ್ಲಿದ್ದು, ಪ್ರತಿಯೊಂದ ಅಂಶವೂ ನೋಡುಗನ ಕಣ್ಣಿಗೆ ಹಬ್ಬದಂತಿದೆ..

ಇಡೀ ಚಿತ್ರ ತ್ರೀಡಿ ಟೆಕ್ನಾಲಜಿಯಲ್ಲಿ ಶೂಟ್​ ಆಗಿದ್ದು, ಸ್ಕ್ರಿಪ್ಟ್​ ಡಿಮ್ಯಾಂಡ್​ ಮಾಡಿದ್ದಕ್ಕಾಗಿ ತ್ರೀಡಿಯಲ್ಲಿ ಶೂಟ್​ ಮಾಡಲಾಗಿದೆಯಂತೆ.. ಭಾರತೀಯ ಸಿನಿಮಾರಂಗದಲ್ಲಿ ಇಷ್ಟು ದೊಡ್ಡ ಬಜೆಟ್ಟಿನಲ್ಲಿ ಸಂಪೂರ್ಣ ತ್ರೀಡಿ ಟೆಕ್ನಾಲಜಿಯಲ್ಲಿ ಬರುತ್ತಿರುವ ಮೊದಲ ಸಿನಿಮಾ. ನಿರ್ದೇಶಕ ಶಂಕರ್​ ಅವರು ಚಿತ್ರದ ಸ್ಕ್ರಿಪ್ಟ್ ಬರೆಯುವಾಗಲೇ ತ್ರೀಡಿ ಟೆಕ್ನಾಲಜಿಯನ್ನು ಮೈಂಡ್​ನಲ್ಲಿ ಇಟ್ಟುಕೊಂಡೇ ಬರೆದಿದ್ದಾರಂತೆ. ಇಂದೀಗೂ ಹಾಲಿವುಡ್​ನಲ್ಲಿ ಸಾಕಷ್ಟು ಸಿನಿಮಾಗಳನ್ನು 2ಡಿಯಲ್ಲಿ ಶೂಟ್​ ಮಾಡಿ ಪೋಸ್ಟ್​ ಪ್ರೊಡಕ್ಷನ್​ನಲ್ಲಿ ತ್ರೀಡಿಗೆ ಕನ್ವರ್ಟ್ ಮಾಡುತ್ತಾರೆ. ಆದರೆ 2.O ಡೈರೆಕ್ಟ್​ ತ್ರೀಡಿ ಕ್ಯಾಮರಾ ಮೂಲಕ ಶೂಟ್​ ಮಾಡಲಾಗಿದೆ.

ರೋಬೋ 2.0 ಸಿನಿಮಾದಲ್ಲೂ ಇನ್ನೂ ಹೆಚ್ಚು ಗ್ರಾಫಿಕ್ಸ್​ ಬಳಸಿದ್ದು, ಬರೋಬ್ಬರಿ 350 ಕೋಟಿ ಬಜೆಟ್​ನಲ್ಲಿ ಈ ಚಿತ್ರ ತಯಾಗ್ತಿರೋದು ವಿಶೇಷ. ಮೇಕ್‌ ಇನ್‌ ಇಂಡಿಯಾ ಪ್ರೇರಣೆಯೊಂದಿಗೆ ಸಂಪೂರ್ಣ ಚಿತ್ರವನ್ನು ಭಾರತದಲ್ಲೇ ಚಿತ್ರೀಕರಿಸಲಾಗಿದ್ದು, ಚಿತ್ರದ ಪ್ರಮುಖ ಫೈಟಿಂಗ್‌ ಸನ್ನಿವೇಶಗಳನ್ನು ದೆಹಲಿಯ ಜವಾಹರ್‌ ಲಾಲ್ ನೆಹರೂ ಕ್ರೀಡಾಂಗಣ ಮತ್ತು ಚೆನ್ನೈನ ಇವಿಪಿ ಫಿಲ್ಮ್ ಸಿಟಿಯಲ್ಲಿ ಚಿತ್ರೀಕರಿಸಲಾಗಿದೆ. ರೋಬೋ2.0 ಚಿತ್ರ 2ಡಿ, 3ಡಿಯಷ್ಟೇ ಅಲ್ಲದೆ, ಐಮ್ಯಾಕ್ಸ್ 3ಡಿ, ಐಮ್ಯಾಕ್ಸ್ ರಿಯಲ್ 3ಡಿ ತಂತ್ರಜ್ಞಾನದಲ್ಲಿ 2018ರ ಜನವರಿ 25ಕ್ಕೆ ತೆರೆಮೇಲೆ ಬರಲಿದೆ.

ಹರೀಶ್​ ಕೆ ಗೌಡ.ಫಿಲ್ಮ್​ ಬ್ಯೂರೋ
ಸುದ್ದಿ ಟಿವಿ

 

0

Leave a Reply

Your email address will not be published. Required fields are marked *