‘ಅನುಮತಿ ನಿರಾಕರಣೆ ಸುಳ್ಳು’…

ಮರ್ಸೆಲ್ ತೆಲುಗು ಅವತರಣಿಕೆ ಬಿಡುಗಡೆಗೆ ನಿನ್ನೆ ನಿರ್ಬಂಧ ವಿಧಿಸಿದ್ದ ಸೆನ್ಸಾರ್ ಮಂಡಳಿ ಇಂದು ಯೂಟರ್ನ್​ ತೆಗೆದುಕೊಂಡಿದೆ. ಈ ಮೂಲಕ ಚಿತ್ರ ಬಿಡುಗಡೆಗೆ ಇದ್ದ ಅಡ್ಡಿ ನಿವಾರಣೆಯಾಗಿದೆ. ತಮಿಳು ಚಿತ್ರದಲ್ಲಿ ಕೇಂದ್ರ ಸರ್ಕಾರದ ಜಿಎಸ್​ಟಿಯನ್ನು ವಿಮರ್ಶಿಸಿಲಾಗಿತ್ತು. ಈ ದೃಶ್ಯಕ್ಕೆ ಕತ್ತರಿ ಹಾಕಿದ್ದನ್ನು ವಿರೋಧಿಸಿ ವ್ಯಾಪಕ ಖಂಡನೆ ವ್ಯಕ್ತವಾಗಿತ್ತು. ಈ ನಡುವೆ ತಮಿಳು ಅವತರಣಿಕೆಗೆ ಅನುಮತಿ ನಿರಾಕರಿಸಲಾಗಿತ್ತು. ಕೇಂದ್ರ ಸರ್ಕಾರ ಸರ್ಕಾರಿ ಸಂಸ್ಥೆಗಳಲ್ಲಿ ಹಸ್ತಕ್ಷೇಪ ನಡೆಸುತ್ತಿದೆ ಎಂಬ ಆರೋಪ ಕೇಳಿಬಂದಿತ್ತು. ಇಂದು ಈ ಕುರಿತು ಪ್ರತಿಕ್ರಿಯಿಸಿರುವ ಸೆನ್ಸಾರ್ ಮಂಡಳಿ ಅಧಿಕಾರಿಗಳು ಅನುಮತಿ ನಿರಾಕರರಣೆಯ ವರದಿಯನ್ನು ತಳ್ಳಿಹಾಕಿದ್ದಾರೆ. ಅಲ್ಲದೇ, ಅನುಮತಿ ನಿರಾಕರಣೆ ಸುಳ್ಳು ಸುದ್ದಿ ಎಂದಿದ್ದಾರೆ.

0

Leave a Reply

Your email address will not be published. Required fields are marked *