ಸ್ಪಿನ್​ ಮಾಂತ್ರಿಕ್​ ಅಶ್ವಿನ್​ ಫಿಟ್​ ಯೋ ಯೋ ಟೆಸ್ಟ್​ ಪಾಸ್​​

ಒಂದು ಕಡೆಯಲ್ಲಿ ಟೀಮ್​ ಇಂಡಿಯಾದಲ್ಲಿ ಯುವ ಸ್ಪಿನ್​ ಬೌಲರ್​​ಗಳ ಅಬ್ಬರ.. ಇನ್ನೊಂದೆಡೆ ತಂಡ ಸೇರಲು ಅನುಭವಿ ಸ್ಪಿನ್​ ಬೌಲರ್​​ ಕಸರತ್ತು.. ಮುಂದಿನ ಸರಣಿಗೆ ತಾನೂ ಫಿಟ್​ ಎಂಬುದನ್ನು, ಫಿರ್ಕಿ ಸ್ಪೆಷಲಿಸ್ಟ್​​ ಪ್ರೂ ಮಾಡಿದ್ದಾರೆ.

ಟೀಮ್​ ಇಂಡಿಯಾದ ಪರ ಶ್ರೇಷ್ಠ ಪ್ರದರ್ಶನವನ್ನು ನೀಡುತ್ತಿರುವ ಆಟಗಾರ, ಆರ್​ ಅಶ್ವಿನ್​.. ಟೆಸ್ಟ್​​ ಪಂದ್ಯಗಳಲ್ಲಿ ತಂಡದ ಪರ ಭರ್ಜರಿ ಪ್ರದರ್ಶನವನ್ನು ನೀಡಿ, ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ ಆಟಗಾರ.

ಹಂತ ಹಂತವಾಗಿ ಸಾಧನೆಯ ಹಾದಿಯನ್ನು ಕ್ರಮಿಸಿರುವ ಅಶ್ವಿನ್​ ನಡೆದು ಬಂದ ದಾರಿ ನಿಜಕ್ಕೂ ಯುವ ಆಟಗಾರರಿಗೆ ಮಾದರಿ. ಇತ್ತೀಚಿಗೆ ಇಂಗ್ಲೆಂಡ್​ನಲ್ಲಿ ಕೌಂಟಿ ಕ್ರಿಕೆಟ್ ಆಡಿ ಸೈಎನಿಸಿಕೊಂಡಿರುವ ಚೈನ್ನೈನ ಸ್ಟಾರ್​ ಬೌಲರ್​. ಸದ್ಯ ಟೀಮ್​ ಇಂಡಿಯಾಕ್ಕೆ ಎಂಟ್ರಿ ನೀಡಲು ಕಾತುರರಾಗಿದ್ದಾರೆ.

ಟೀಮ್​ ಇಂಡಿಯಾದ ಸ್ಟಾರ್​ ಆಲ್​ರೌಂಡರ್​ ಆರ್​.ಅಶ್ವಿನ್​, ಮತ್ತೆ ತಂಡ ಸೇರೋಕೆ ಬೇಕಾದ ತಯಾರಿ ಮಾಡಿಕೊಂಡಿದ್ದಾರೆ. ಅಂದಹಾಗೆ ಇತ್ತೀಚಿಗಷ್ಟೇ ಬೆಂಗಳೂರಿನಲ್ಲಿ ಅಶ್ವಿನ್​​ ಫಿಟ್​​ ನೆಸ್​​ ಪರೀಕ್ಷೆಯನ್ನು ಎದುರಿಸಿದ್ರು. ಅಲ್ಲದೆ ಈ ಬಗ್ಗೆ ಟ್ವಿಟರ್​ನಲ್ಲಿ ಈ ಬಗ್ಗೆ ಬರೆದುಕೊಂಡಿದ್ದಾರೆ. ಬೆಂಗಳೂರುನ ಪ್ರಯಾಣ ಉತ್ತಮವಾಗಿತ್ತು. ಯೋ ಯೋ ಪರೀಕ್ಷೆಯಲ್ಲಿ ಪಾಸಾಗಿದ್ದಾಗಿ ಅಶ್ವಿನ್​ ತಿಳಿಸಿದ್ದಾರೆ.

ಇನ್ನು ಆರ್​.ಅಶ್ವಿನ್​ ಚೆನ್ನೈನಲ್ಲಿ ತಮಿಳು ನಾಡು ತಂಡದ ಪರ ಪ್ರಸಕ್ತ ಸಾಲಿನ ರಣಜಿ ಟ್ರೋಫಿಯ ಮೊದಲ ಪಂದ್ಯದಲ್ಲಿ ಕಣಕ್ಕೆ ಇಳಿಯಲ್ಲಿದ್ದಾರೆ. ಇನ್ನು ಇದಕ್ಕೂ ಮುನ್ನ ಮಾತನಾಡಿದ್ದ ಅಶ್ವಿನ್​ ಮನಸ್ಸಿನ ಮೇಲೆ ನಿಯಂತ್ರಣ ವಿದ್ದು, ಸಾಧಿಸ ಬೇಕೆಂದದನ್ನು ಸಾಧಿಸುವೇ ಎಂದು ತಿಳಿಸಿದ್ದರು.

ಅಲ್ಲದೆ ಯೋ ಯೋ ಟೆಸ್ಟ್​​ಗೆ ಹೋದಾಗ ಸುರೇಶ್​ ರೈನಾ, ಯುವರಾಜ್​ ಸಿಂಗ್​ ಸಹ ಇದ್ರು. ಅವರು ಈ ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿದ್ದಾರೆ ಎಂದು ಅಶ್ವಿನ್​ ಹೇಳಿದ್ದಾರೆ.

ರಣಜಿ ಟ್ರೋಫಿ ಕ್ರಿಕೆಟ್​ ಪಂದ್ಯಗಳಲ್ಲಿ ಮಿಂಚಿನ ಪ್ರದರ್ಶನ ನೀಡಿ, ಮತ್ತೆ ಟೀಮ್​ ಇಂಡಿಯಾಕ್ಕೆ ಮರಳಿ ಎದುರಾಳಿಗಳ ವಿರುದ್ಧ ಸ್ಪಿನ್​ ಮೋಡಿ ನಡೆಸಲಿ ಎಂಬುದೇ ಅಭಿಮಾನಿಗಳ ಆಶಯ.

ವಿನಾಯಕ ಲಿಮಯೆ, ಸ್ಪೋರ್ಟ್ಸ್​​ ಬ್ಯೂರೋ, ಸುದ್ದಿ ಟಿವಿ

0

Leave a Reply

Your email address will not be published. Required fields are marked *