ರವಿಬೆಳಗೆರೆ ಅರೆಸ್ಟ್​.!

ರವಿಬೆಳಗೆರೆ ಸಹೋದ್ಯೋಗಿ ಪತ್ರಕರ್ತ ಸುನೀಲ್​ ಹೆಗ್ಗರವಳ್ಳಿ ಕೊಲೆಗೆ ಸುಪಾರಿ ನೀಡಿದ ಆರೋಪದಡಿ ಹಾಯ್​ ಬೆಂಗಳೂರು ಸಂಪಾದಕ ರವಿ ಬೆಳೆಗೆರೆಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಸಹೋದ್ಯೋಗಿ ಸುನೀಲ್ ಹೆಗ್ಗರವಳ್ಳಿ‌ಯ ಮೇಲಿದ್ದ ಹಳೆ ದ್ವೇಶದ ಹಿನ್ನೆಲೆಯಲ್ಲಿ ಮೂರು ತಿಂಗಳ ಹಿಂದೆ ಕೊಲೆಗೆ ವಿಜಯಪುರ ಮೂಲದ ಇಬ್ಬರು ಶಾರ್ಪ್​ ಶೂಟರ್​ಗಳಿಗೆ 30 ಲಕ್ಷಕ್ಕೆ ಬೆಳಗೆರೆ ಸುಪಾರಿ ನೀಡಿದ್ದರು ಎಂಬ ಸ್ಫೋಟಕ ಮಾಹಿತಿ ಹೊರಬಿದ್ದಿದೆ. ರವಿ ಬೆಳೆಗೆರೆಯ ಎರಡನೇ ಪತ್ನಿ ಜೊತೆ ಸುನೀಲ್ ಅಕ್ರಮ ಸಂಬಂಧ ಹೊಂದಿದ್ದ ಎಂಬ ಆರೋಪದ ಹಿನ್ನೆಲೆ ಆತನನ್ನು ಕೊಲೆ ಮಾಡಲು ಸುಪಾರಿ ನೀಡಲಾಗಿತ್ತು ಎಂಬ ಮಾಹಿತಿ ಹೊರ ಬಿದ್ದಿದೆ. ಎರಡು ದಿನಗಳ ಹಿಂದೆ ಶಾರ್ಪ್​ ಶೂಟರ್​ ತಾಹಿರ್ ಹುಸೇನ್ ಎಂಬ ಪಿಸ್ತೂಲ್ ಏಜೆಂಟ್ ಬಂಧನವಾಗಿತ್ತು. ಈತನ ಮೂಲಕ ಪಿಸ್ತೂಲ್ ಖರೀದಿ ಮಾಡಿದ್ದ ಶಶಿಧರ್ ಮುಂಡೆವಾಡಿಯನ್ನು ವಿಚಾರಣೆ ಮಾಡುವಾಗ ರವಿಬೆಳೆಗೆರೆಯ ಸುಪಾರಿ ಡೀಲ್ ಹೊರಬಿದ್ದಿದೆ.

0

Leave a Reply

Your email address will not be published. Required fields are marked *