ದಾಖಲೆಗಳ ಸಮೇತ ಬಂದರೂ ಚರ್ಚೆಗೆ ಅವಕಾಶ ನೀಡಲಿಲ್ಲ ಅಂತ ರಾಮದಾಸ್ ಆಕ್ರೋಶ

ವಿಧಾನಸಭೆಯಲ್ಲಿ ಇಂದಿರಾ ಕ್ಯಾಂಟೀನ್ ಭ್ರಷ್ಟಾಚಾರ ಕುರಿತ ಚರ್ಚೆಗೆ ನಿಯಮ 69ರ ಅಡಿಯಲ್ಲಿ ಅವಕಾಶ ನೀಡಬೇಕೆಂದು ಬಿಜೆಪಿ ಶಾಸಕ ರಾಮದಾಸ್ ಒತ್ತಾಯಿಸಿದ್ರು. ಈ ವೇಳೆ ಬಿಜೆಪಿ ಶಾಸಕರು ರಾಮದಾಸ್ ಗೆ ಸಾಥ್ ನೀಡಿದ್ರು. ಆದ್ರೆ, ಸದನ ಕಲಾಪವನ್ನು ಹಾಳುಗೆಡುವುತ್ತಿದ್ದಾರೆಂದು ರಾಮದಾಸ್ ವಿರುದ್ಧ ಉಪಸಭಾಧ್ಯಕ್ಷ ಕೃಷ್ಣಾರೆಡ್ಡಿ ಹಾಗೂ ಸಚಿವ ಕೃಷ್ಣಭೈರೇಗೌಡ ಆಕ್ಷೇಪ ವ್ಯಕ್ತಪಡಿಸಿದ್ರು. ಈ ವೇಳೆ, ತಮಗೆ ಇಂದಿರಾಕ್ಯಾಂಟೀನ್ ಅವ್ಯವಹಾರ ಪ್ರಕರಣ ಪ್ರಸ್ತಾಪಿಸಲು ಅವಕಾಶ ನೀಡದಿರುವುದನ್ನು ಪ್ರತಿಭಟಿಸಿ ರಾಮದಾಸ್ ಸಭಾತ್ಯಾಗ ಮಾಡಿದ್ರು. ಬಳಿಕ ಮಾತನಾಡಿದ ರಾಮದಾಸ್, ಬಜೆಟ್ ಅಧಿವೇಶನದಲ್ಲಿ ಆ ಬಗ್ಗೆ ಪ್ರಸ್ತಾಪ ಮಾಡಿದ್ದೆ. ಸರ್ಕಾರ ದಾಖಲೆಗಳ ಸಮೇತ ಆರೋಪ ಮಾಡಿ ಎಂದು ಹೇಳಿದ್ರು. ಅದನ್ನ ಚಾಲೆಂಜ್ ಆಗಿ ತೆಗೆದುಕೊಂಡು ನಾನು ದಾಖಲೆಗಳ ಸಮೇತ ಬಂದೆ. ಆದ್ರೆ, ಸಭಾಧ್ಯಕ್ಷರು ಚರ್ಚೆಗೆ ಅವಕಾಶ ನೀಡಲಿಲ್ಲ. ಹಿಟ್ ಅಂಡ್ ರನ್ ಅಂತ ಆಡಳಿತ ಪಕ್ಷದವರು ಹೇಳಿದ್ರು. ಆದ್ರೆ ಹಿಟ್ ಅಂಡ್ ರನ್ ಅಲ್ಲ ಇದು ಹಿಟ್ ಅಂಡ್ ಕ್ಯಾಚ್, ದಾಖಲೆಗಳ ಸಮೇತ ನಾನು ಬಯಲು ಮಾಡೋದಕ್ಕೆ ಮುಂದಾಗಿದ್ದು, ಹೈಕೋರ್ಟ್ ನಲ್ಲಿ ಪ್ರಕರಣ ದಾಖಲಿಸುವುದಾಗಿ ತಿಳಿಸಿದ್ರು…

0

Leave a Reply

Your email address will not be published. Required fields are marked *