ರಾಮನೂ ಅನುಮಾನದಿಂದ ಹೆಂಡತಿಯನ್ನು ಬಿಟ್ಟಿದ್ದ: ಹೇಳಿಕೆ ನೀಡಿ ಕ್ಷಮೆ ಕೋರಿದ ಹುಸೇನ್

ದೆಹಲಿ: ಯಾವ ಧರ್ಮಗಳಲ್ಲೂ ಮಹಿಳೆಯರಿಗೆ ನ್ಯಾಯ ಸಿಕ್ಕಿಲ್ಲ ಎಂದು ಕಾಂಗ್ರೆಸ್ ನಾಯಕ ಹುಸೇನ್ ದಳವಾಯಿ ಅಭಿಪ್ರಾಯಪಟ್ಟಿದ್ದಾರೆ. ಮುಸ್ಲಿಂ, ಹಿಂದೂ, ಕ್ರಿಶ್ಚಿಯನ್, ಸಿಖ್ಖ್ ಮೊದಲಾದ ಯಾವ ಧರ್ಮಗಳಲ್ಲೂ ಮಹಿಳೆಯರಿಗೆ ನ್ಯಾಯ ಸಿಕ್ಕಿಲ್ಲ. ಎಲ್ಲ ಸಮಾಜಗಳಲ್ಲಿ ಪುರುಷ ಪ್ರಾಬಲ್ಯವಿದೆ ಎಂದಿರುವ ಅವರು, ಶ್ರೀರಾಮ ಕೂಡ ಅನುಮಾನದಿಂದ ಸೀತೆಯನ್ನು ಬಿಟ್ಟಿದ್ದ. ಎಲ್ಲೆಡೆ ಬದಲಾವಣೆಯಾಗಬೇಕು ಎಂದಿದ್ದಾರೆ. ಆದರೆ, ಈ ಹೇಳಿಕೆ ವಿವಾದದ ಸ್ವರೂಪ ಪಡೆಯಿತು. ಕಾಂಗ್ರೆಸ್ ನಾಯಕ ಕೊಟ್ಟ ಹೇಳಿಕೆಯಿಂದಾಗಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರ ಕ್ಷಮೆಗೆ ಒತ್ತಾಯ ಕೇಳಿಬಂದಿತು. ಇದರಿಂದ ತಮ್ಮ ಹೇಳಿಕೆ ಕುರಿತು ಹುಸೇನ್ ಕ್ಷಮೆ ಕೋರಿದರು. ನಾನು ಹೇಳಿರುವುದು ತಪ್ಪು. ಅದಕ್ಕಾಗಿ ಕ್ಷಮೆ ಕೇಳಿದ್ದೇನೆ. ಯಾರ ಭಾವನೆಗಳಿಗೂ ನೋವುಂಟು ಮಾಡುವುದು ನನ್ನ ಉದ್ದೇಶವಲ್ಲ. ಈ ವಿಷಯಕ್ಕೆ ಉದ್ದೇಶಪೂರ್ವಕವಾಗಿ ರಾಜಕೀಯ ಬಣ್ಣ ಬಳಿಯಲಾಗಿದೆ ಎಂದರು. ಅಲ್ಲದೇ, ನಾನು ಕೊಟ್ಟ ಹೇಳಿಕೆಗೆ ರಾಹುಲ್ ಗಾಂಧಿಯವರು ಏಕೆ ಕ್ಷಮೆ ಕೋರಬೇಕು ಎಂದು ಕೂಡ ಅವರು ಪ್ರಶ್ನಿಸಿದರು.

0

Leave a Reply

Your email address will not be published. Required fields are marked *