ಇಂಧನ ದರ ಏರಿಕೆ: ಸುಳ್ಳು ಹೇಳಿದರೇ ಗೃಹ ಸಚಿವ ರಾಜನಾಥ್ ಸಿಂಗ್

ಭೋಪಾಲ್: ದೇಶದಲ್ಲಿ ಏರುತ್ತಿರುವ ಇಂಧನ ಬೆಲೆ ಏರಿಕೆ ಕುರಿತು ಗೃಹ ಸಚಿವ ರಾಜನಾಥ್ ಸಿಂಗ್ ಪ್ರತಿಕ್ರಿಯಿಸಿದ್ದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ತೈಲ ಬೆಲೆಯಲ್ಲಿ ಏರಿಕೆಯಾಗಿದೆ. ಆದ್ದರಿಂದ ದೇಶದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಾಗಿದೆ ಎಂದಿದ್ದಾರೆ. ಅಲ್ಲದೇ, ಇಂಧನ ಬೆಲೆ ಏರಿಕೆಯಾದರೂ ದೇಶದ ಆರ್ಥಿಕತೆಯ ಮೇಲೆ ಯಾವುದೇ ಪರಿಣಾಮವಾಗಿಲ್ಲ. ಜನರಿಗೆ ತೊಂದರೆಯಾಗದಂತೆ ಸರ್ಕಾರ ಕ್ರಮ ಕೈಗೊಳ್ಳಲು ಯತ್ನಿಸುತ್ತಿದೆ ಎಂದಿದ್ದಾರೆ. ಮಧ್ಯಪ್ರದೇಶದ ಭೋಪಾಲ್​ನಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ.

ಆದರೆ, ಅವರ ಹೇಳಿಕೆ ತಪ್ಪು ಎನ್ನುವುದು 2012ರಿಂದ ಇದುವರೆಗಿನ ಬೆಲೆ ಏರಿಳಿಕೆಯ ಇತಿಹಾಸವನ್ನು ಗಮನಿಸಿದರೆ ಅರಿವಾಗಲಿದೆ.

ಇಸವಿ                ದರ (ಪ್ರತಿ ಬ್ಯಾರಲ್​​ಗೆ ಡಾಲರ್​ಗಳಲ್ಲಿ)
2012                               92.20
2013                               95.79
2014                               88.47
2015                               52.32
2016                               43.74
2017                               54.15
2018                               68.36

ಇಂದು ದೆಹಲಿಯಲ್ಲಿ ಪೆಟ್ರೋಲ್ ದರ 78.35 ರೂ. ಮತ್ತು ಡೀಸೆಲ್ ದರ 68.25ಕ್ಕೆ ಏರಿದೆ. ಕೊಲ್ಕೊತ್ತಾದಲ್ಲಿ 80.98 ರೂ., ಮುಂಬೈನಲ್ಲಿ 86.16 ರೂ., ಚೆನ್ನೈನಲ್ಲಿ 81.35ಕ್ಕೆ ಪೆಟ್ರೋಲ್ ದರ ಏರಿಕೆಯಾದರೆ, ಡೀಸೆಲ್ ದರ ಕೊಲ್ಕೊತ್ತಾದಲ್ಲಿ 71.80 ರೂ., ಮುಂಬೈನಲ್ಲಿ 73.73 ರೂ., ಚೆನ್ನೈನಲ್ಲಿ 73.12ಕ್ಕೆ ಏರಿಕೆಯಾಗಿದೆ. ಸತತ 16 ದಿನಗಳ ನಂತರ ನಿನ್ನೆ ಒಂದು ಪೈಸೆ ದರ ಇಳಿಕೆಯಾಗಿತ್ತು. ಆದರೆ, ಇಂದು ಮತ್ತೆ ಇಂಧನ ದರ ಏರಿಕೆಯಾಗಿದೆ.

0

Leave a Reply

Your email address will not be published. Required fields are marked *