ಬಿಜೆಪಿ ಕಚೇರಿ ಎದುರು ರೈಲ್ವೇ ಉದ್ಯೋಗಿಗಳಿಂದ ಪ್ರತಿಭಟನೆ…

ಬೆಂಗಳೂರಿನ ಮಲ್ಲೇಶ್ವರಂ ಬಿಜೆಪಿ ಕಚೇರಿ ಮುಂದೆ ರೈಲ್ವೆಯ ಆಲ್ ಇಂಡಿಯಾ ಆ್ಯಕ್ಟ್ ಅಪ್ರೆಂಟಿಸ್ ಉದ್ಯೋಗಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ.. ರೈಲ್ವೆ ಇಲಾಖೆಯಲ್ಲಿ ಕನ್ನಡಿಗರ ವಿರುದ್ಧದ ಮಲತಾಯಿ ಧೋರಣೆ ಖಂಡಿಸಿ, ನ್ಯಾಯ ಒಡಗಿಸುವಂತೆ ಆಗ್ರಹಿಸಿ ರೈಲ್ವೆ ಉದ್ಯೋಗಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ದೇಶದಲ್ಲಿ 21 ಸಾವಿರ ಉದ್ಯೋಗಿಗಗಳು ರೈಲ್ವೆ ಇಲಾಖೆಯಲ್ಲಿ ಟ್ರೈನಿಂಗ್ ಪಡೆದಿದ್ದಾರೆ. ರಾಜ್ಯದಲ್ಲಿ 1500 ಮಂದಿ ಟ್ರೈನಿಂಗ್ ಮುಗಿಸಿದ್ದಾರೆ. ಅದರಲ್ಲಿ ಮಹಾರಾಷ್ಟ್ರದ ಟ್ರೈನಿಗಳನ್ನ ಖಾಯಂ ಮಾಡಿಕೊಳ್ಳಲಾಗಿದೆ. ಆದ್ರೆ ಎಷ್ಟೇ ಬೇಡಿಕೆ ಇಟ್ಟರೂ ರಾಜ್ಯದ ಉದ್ಯೋಗಿಗಳನ್ನು ಖಾಯಂ ಮಾಡಿಕೊಂಡಿಲ್ಲ ಎಂದು ಬಿಜೆಪಿ ಕಚೇರಿ ಎದುರು ಪ್ರತಿಭಟನೆ ನಡೆಸಿದ್ರು.. ರಾಜ್ಯದ ಸಂಸದರು ಕೇಂದ್ರ ಸರ್ಕಾರದ ಗಮನಕ್ಕೆ ತಂದು ನ್ಯಾಯ ಒದಗಿಸಿ ಎಂದು ಆಗ್ರಹಿಸಿದ್ರು.

0

Leave a Reply

Your email address will not be published. Required fields are marked *