ಜಮೀನಿನ ಮೇಲೆ ಗಬ್ಬರ್ ಸಿಂಗ್ ಹೊಡೆತ ಏಕೆ?: ರಾಹುಲ್ ಗಾಂಧಿ ಪ್ರಶ್ನೆ

ನವದೆಹಲಿ: 22 ವರ್ಷಗಳ ಕಾಲ ಗುಜರಾತ್ ಅನ್ನು ಆಳಿರುವ ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿಯವರಿಗೆ ಪ್ರಶ್ನೆಯ ಸರಣಿಯನ್ನು ರಾಹುಲ್ ಗಾಂಧಿ ಮುಂದುವರೆಸಿದ್ದು, ಇಂದು 9ನೇ ಪ್ರಶ್ನೆಯನ್ನು ಕೇಳಿದ್ದಾರೆ. ಸಾಲಮನ್ನಾ ಮಾಡಿಲ್ಲ, ಬೆಳೆಗಳಿಗೆ ಸೂಕ್ತ ಬೆಲೆ ನೀಡಿಲ್ಲ. ಬೆಳೆ ವಿಮೆ ಕೂಡ ಸಿಕ್ಕಿಲ್ಲ ಎಂದು ಟ್ವೀಟ್ ಮಾಡಿರುವ ಅವರು, ಕೊಳವೆಬಾವಿಗಳನ್ನು ಕೊರೆಸುವ ಭರವಸೆಯೂ ಈಡೇರಿಲ್ಲ ಎಂದು ಆರೋಪಿಸಿದ್ದಾರೆ. ಅಲ್ಲದೇ, ಕೇಣಿ ಜಮೀನುಗಳ ಮೇಲೆ ಗಬ್ಬರ್ ಸಿಂಗ್​​ ಹೊಡೆತ ಬಿದ್ದಿದೆ. ಭೂಮಿಯನ್ನು ಕಸಿದುಕೊಂಡು ಅನ್ನದಾತರನ್ನು ಹಿಂಸಿಸಲಾಗಿದೆ. ಪಿಎಂ ಸಾಹೇಬರೇ ಹೇಳಿ, ರೈತರೊಂದಿಗೆ ಇಂಥ ಆಟವೇಕೆ? ಎಂದು ಕಿಡಿಕಾರಿದ್ದಾರೆ.

ಈ ಮೂಲಕ ಪ್ರಧಾನಿ ನರೇಂದ್ರ ಮೋದಿಯವರು ಗುಜರಾತ್​​ನಲ್ಲಿ ಸಿಎಂ ಆಗಿ ಅಧಿಕಾರದಲ್ಲಿದ್ದ ಅವಧಿಯಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ ಎಂದು ಪರೋಕ್ಷವಾಗಿ ಪ್ರತಿಪಾದಿಸಿದ್ದಾರೆ. 22 ವರ್ಷದ ಆಡಳಿತದ ಲೆಕ್ಕವನ್ನು ಗುಜರಾತ್​ನ ಜನತೆ ಕೇಳುತ್ತಿದ್ದಾರೆ ಸರಣಿಯನ್ನು ಮುಂದುವರೆಸಿದ್ದಾರೆ. ಗುಜರಾತ್ ಚುನಾವಣೆ ಮುಗಿಯುವವರೆಗೆ ಅವರು ಈ ಪ್ರಶ್ನೆಗಳ ಸರಣಿಯನ್ನು ಮುಂದುವರೆಸಲಿದ್ದಾರೆ.

0

Leave a Reply

Your email address will not be published. Required fields are marked *