ಗುಜರಾತ್ ಮಾದರಿ ಪ್ರಣಾಳಿಕೆ ರಚಿಸಲು ರಾಹುಲ್ ಗಾಂಧಿ ಸೂಚನೆ

ರಾಜ್ಯದಲ್ಲಿ ಗುಜರಾತ್ ಮಾದರಿ ಪ್ರಣಾಳಿಕೆ ರಚಿಸಲು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಸೂಚನೆ ನೀಡಿದ್ದಾರೆ. ಗುಜರಾತ್ ಚುನಾವಣೆಗೂ ಮೊದಲು ಶ್ಯಾಮ್ ಪಿತ್ರೋಡಾ ಮೂಲಕ ಅಹಮದಾಬಾದ್, ವಡೋದರಾ, ಸೂರತ್, ಜಾಮ್ನಗರ ಸೇರಿದಂತೆ ಪ್ರಮುಖ ನಗರಗಳಲ್ಲಿ ಸಾರ್ವಜನಿಕ ಅಭಿಪ್ರಾಯ ಸಂಗ್ರಹಿಸಿ ಅವರ ಅಭಿಪ್ರಾಯದಂತೆ ಪ್ರಣಾಳಿಕೆ ರಚಿಸಲಾಗಿತ್ತು. ಇದೀಗ ರಾಜ್ಯದಲ್ಲೂ ಅದೇ ಮಾದರಿ ಅನುಸರಿಸಲು ರಾಹುಲ್ ಮುಂದಾಗಿದ್ದಾರೆ. ವೀರಪ್ಪ ಮೋಯ್ಲಿ ನೇತೃತ್ವದ ಕಾಂಗ್ರೆಸ್ ಚುನಾವಣಾ ಸಮಿತಿಗೆ ಈ ಜವಾಬ್ದಾರಿಯನ್ನು ನೀಡಲಾಗಿದೆ. ಈ ಸಂಬಂಧ ಈಗಾಗಲೇ ಕಲಬುರಗಿ, ಹುಬ್ಬಳ್ಳಿ, ಮೈಸೂರು, ಚಿತ್ರದುರ್ಗ, ಶಿವಮೊಗ್ಗ, ಮಂಗಳೂರು ಸೇರಿದಂತೆ ಏಳು ನಗರಗಳಲ್ಲಿ ಸಮಿತಿ ಸಭೆ ನಡೆಸಿದೆ. ಇನ್ನು ಬೆಂಗಳೂರಿನಲ್ಲಿ ನಿನ್ನೆ ಶಿಕ್ಷಣ ತಜ್ಞರು ಮತ್ತು ಉದ್ಯಮಿಗಳೋಂದಿಗೆ ಸಮಿತಿ ಸಭೆ ನಡೆಸಿದ್ದು, ಫೆಬ್ರವರಿ ಅಂತ್ಯದಲ್ಲಿ ವರದಿಯನ್ನು ಸಲ್ಲಿಸುವ ಸಾಧ್ಯತೆ ಇದೆ.

0

Leave a Reply

Your email address will not be published. Required fields are marked *