ಪ್ರಧಾನಿ ವಿರುದ್ಧ ರಾಹುಲ್​ ಗಾಂಧಿ ವಾಗ್ದಾಳಿ

ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಜನಾಶೀರ್ವಾದ ಯಾತ್ರೆ ಮೂರನೇ ದಿನಕ್ಕೆ ಕಾಲಿಟ್ಟಿದೆ.. ಇಂದು ಬೆಳಗ್ಗೆ ಬೆಳಗಾವಿಯ ರಾಮದುರ್ಗಾದಲ್ಲಿ ರಾಹುಲ್​ ಗಾಂಧಿ ಸಾರ್ವಜನಿಕ ಸಭೆಯಲ್ಲಿ ಭಾಗಿಯಾಗಿದ್ದರು. ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ರಾಹುಲ್​ ಗಾಂಧಿ,ಪ್ರಧಾನಿ ಮೋದಿ ಕೊಟ್ಟ ಮಾತನ್ನು ತಪ್ಪಿದ್ದಾರೆ.ಬಡ ರೈತರನ್ನು ಬ್ಯಾಂಕ್​ಮುಂದೆ ಸಾಲಾಗಿ ನಿಲ್ಲುವಂತೆ ಮಾಡಿದ್ದಾರೆ. ಮತ್ತೆ ಜಿಎಸ್​ಟಿ ಕುರಿತು ಉಲ್ಲೇಖಿಸಿದ ರಾಹುಲ್​ ಗಾಂಧಿ ಎಂದಿನಂತೆ ಜಿಎಸ್​ಟಿಯನ್ನು ಗಬ್ಬರ್​ ಸಿಂಗ್​ ಟ್ಯಾಕ್ಸ್​ ಎಂದು ಪುನರುಚ್ಛಿಸಿದ್ರು.

0

Leave a Reply

Your email address will not be published. Required fields are marked *