ರಾಹುಲ್​ ಗಾಂಧಿ ಮೂರನೇ ಹಂತದ ಜನಾಶೀರ್ವಾದ ಯಾತ್ರೆ..

ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಮೂರನೇ ಹಂತದ ಜನಶೀರ್ವಾದ ಯಾತ್ರೆಗಾಗಿ ಮತ್ತೊಮ್ಮೆ ರಾಜ್ಯ ಪ್ರವಾಸ ಮಾಡಲಿದ್ದಾರೆ. ಇದೇ ತಿಂಗಳ 20 ಹಾಗೂ 21ರಂದು ಎರಡು ದಿನಗಳ ಕಾಲ ರಾಹುಲ್ ಗಾಂಧಿ ಕರಾವಳಿ ಜಿಲ್ಲೆಗಳಲ್ಲಿ ಪ್ರವಾಸ ಮಾಡಲಿದ್ದಾರೆ.ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರು ರಾಜ್ಯದಲ್ಲಿ ನಡೆಸಿದ್ದ ಎರಡೂ ಹಂತದ ಜನಾಶೀರ್ವಾದ ಯಾತ್ರೆಗಳು ದೊಡ್ಡ ಮಟ್ಟದಲ್ಲಿ ಯಶಸ್ವಿಯಾಗಿದ್ದವು. ಈ ಬೆನ್ನಲ್ಲೇ ರಾಹುಲ್ ಗಾಂಧಿ ಇದೇ ಮಾ.20 ರಿಂದ ಮೂರನೇ ಹಂತದ ಪ್ರವಾಸ ಮಾಡಲಿದ್ದಾರೆ. ಈ ಬಾರಿ ಕಾಂಗ್ರೆಸ್​​ ಅಧ್ಯಕ್ಷ ರಾಹುಲ್ ಗಾಂಧಿಯವರ ಜನಾಶೀರ್ವಾದ ಯಾತ್ರೆ ಕರಾವಳಿ ಜಿಲ್ಲೆಗಳಲ್ಲಿ ಸಾಗಲಿದೆ. ಮಾ.20, 21 ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಹಾಸನದಲ್ಲಿ ರಾಹುಲ್ ಗಾಂಧಿ ಯಾತ್ರೆ ನಡೆಸಲಿದ್ದಾರೆ. ಈ ಯಾತ್ರೆಯಲ್ಲೂ ರಾಹುಲ್ ಸಾರ್ವಜನಿಕ ಸಭೆಗಳು, ರೋಡ್ ಶೋಗಳನ್ನು ನಡೆಸುವುದಲ್ಲದೇ ಪುಣ್ಯ ಕ್ಷೇತ್ರಗಳಿಗೂ ಭೇಟಿ ಕೊಡಲಿದ್ದಾರೆ.

ಮಾರ್ಚ್ 20ರಂದು ಕುಂದಾಪುರ ಅಥವಾ ಬೈಂದೂರಿನಲ್ಲಿ ಮೂರನೇಯ ಜನಾಶೀರ್ವಾದ ಯಾತ್ರೆ ಆರಂಭವಾಗಲಿದೆ. ವಿಶೇಷ ಬಸ್​ನಲ್ಲಿ ಯಾತ್ರೆ ಶುರು ಮಾಡುವ ರಾಹುಲ್ ಗಾಂಧಿ, ಉಡುಪಿ, ಕಾಪು, ಮೂಲ್ಕಿ, ದಕ್ಷಿಣ ಕನ್ನಡಗಳಿಗೆ ಭೇಟಿ ಕೊಡಲಿದ್ದಾರೆ. ಬಳಿಕ ಸುರತ್ಕಲ್​ನಲ್ಲಿ ಸಾರ್ವಜನಿಕ ಸಭೆಯಲ್ಲಿ ರಾಹುಲ್ ಪಾಲ್ಗೊಳ್ಳಲಿದ್ದಾರೆ. ಆ ತರುವಾಯ ಅದೇ ದಿನ ನಂತೂರು, ಪಂಪ್ ವೆಲ್, ಕಂಕನಾಡಿ, ಜ್ಯೋತಿ ವೃತ್ತದಲ್ಲಿ ರೋಡ್​ ಶೋಗಳನ್ನು ನಡೆಸಲಿದ್ದಾರೆ. ಅದೇ ದಿನ ಸಂಜೆ ಮಂಗಳೂರಿನ ನೆಹರೂ ಮೈದಾನದಲ್ಲಿ ಬೃಹತ್ ಸಾರ್ವಜನಿಕ ಸಮಾವೇಶ ನಡೆಯಲಿದೆ. ಆ ದಿನ ರಾಹುಲ್ ಗಾಂಧಿ ಮಂಗಳೂರಿನಲ್ಲಿ ವಾಸ್ತವ್ಯ ಹೂಡಲಿದ್ದಾರೆ..

ಇನ್ನು ಮಾರ್ಚ್ 21ರಂದು ಉಡುಪಿ, ಚಿಕ್ಕಮಗಳೂರು, ಹಾಸನದಲ್ಲಿ ರಾಹುಲ್​​​ ಯಾತ್ರೆ ಮುಂದುವರೆಯಲಿದೆ.ಈ ವೇಳೆ ಮೀನುಗಾರರ ಜೊತೆ ರಾಹುಲ್​ ಸಂವಾದ ನಡೆಸಲಿದ್ಧಾರೆ. ಬಳಿಕ ಶೃಂಗೇರಿಗೆ ತೆರಳಿ ಮಾತೆ ಶಾರದೆಯ ದರ್ಶನ ಪಡೆಯಲಿದ್ದಾರೆ. ದೇವರ ದರ್ಶನ ಬಳಿಕ ಶೃಂಗೇರಿ ಬ್ಲಾಕ್ ಕಾಂಗ್ರೆಸ್ ಕಚೇರಿ ಉದ್ಘಾಟನೆ ಕಾರ್ಯಕ್ರಮದಲ್ಲಿ ರಾಹುಲ್ ಪಾಲ್ಗೊಳ್ಳಲಿದ್ದಾರೆ. ಅದೇ ದಿನ ಮಧ್ಯಾಹ್ನ ಚಿಕ್ಕಮಗಳೂರಿನಲ್ಲಿ ಬೃಹತ್ ಸಾರ್ವಜನಿಕ ಸಮಾವೇಶ ನಡೆಯಲಿದೆ. ಈ ಸಮಾವೇಶ ಮುಗಿಸಿಕೊಂಡು ರಾಹುಲ್ ಗಾಂಧಿ ಅದೇ ದಿನ ಸಂಜೆ ಹಾಸನದಲ್ಲಿ ಜನಾಶೀರ್ವಾದ ಯಾತ್ರೆ, ರ್ಯಾಲಿ ನಡೆಸಲಿದ್ದಾರೆ. ಅದೇ ದಿನ ರಾತ್ರಿ ರಾಹುಲ್ ಗಾಂಧಿ ದೆಹಲಿಗೆ ವಾಪಸಾಗಲಿದ್ದಾರೆ..ಇನ್ನು ಈ ಬಾರಿ ಜನಾಶೀರ್ವಾದ ಯಾತ್ರೆ ವೇಳೆಯಲ್ಲಿ ರಾಷ್ಟ್ರ, ರಾಜ್ಯ ಮಟ್ಟದ ಕಾಂಗ್ರೆಸ್ ನಾಯಕರು ರಾಹುಲ್ ಗಾಂಧಿಗೆ ಸಾಥ್ ಕೊಡಲಿದ್ದಾರೆ. ಸಿಎಂ ಸಿದದರಾಮಯ್ಯ, ಜಿ.ಪರಮೇಶ್ವರ್, ಬಿ.ಕೆ.ಹರಿಪ್ರಸಾದ್, ಮಲ್ಲಿಕಾರ್ಜುನ ಖರ್ಗೆ, ಕೆ.ಎಚ್.ಮುನಿಯಪ್ಪ, ವೀರಪ್ಪ ಮೊಯಲಿ, ರಮಾನಥ್ ರೈ, ಯು.ಟಿ.ಖಾದರ್ ಸೇರಿದಂತೆ ಕರಾವಳಿ ಭಾಗದ ಕಾಂಗ್ರೆಸ್ ಮುಖಂಡರು ಇರಲಿದ್ದಾರೆ. ಯಾತ್ರೆಯ ಸಂದರ್ಭದಲ್ಲೇ ಕರಾವಳಿ ಜಿಲ್ಲೆಗಳಲ್ಲಿ ಬಿಜೆಪಿ ಪ್ರಭಾವ ತಗ್ಗಿಸುವಂತೆ ಕಾಂಗ್ರೆಸ್ ನಾಯಕರಿಗೆ ರಾಹುಲ್ ಗಾಂಧಿ ಕಿವಿಮಾತು ಹೇಳಲಿದ್ದಾರೆ..

ಮಸೂದ್ ದೊಡ್ಡೇಬಾಗಿಲು, ಸುದ್ದಿ ಟಿವಿ, ಬೆಂಗಳೂರು.

0

Leave a Reply

Your email address will not be published. Required fields are marked *