ಲಿಮಿಟೆಡ್​ ಫಾರ್ಮೆಟ್​ನಲ್ಲಿ ರಾಹುಲ್ ಬ್ಯಾಟಿಂಗ್ ಸೂಪರ್​

ಟೀಮ್ ಇಂಡಿಯಾದ ಕೆಲ ಪಿಚ್​ ಯಾವುದೇ ಬ್ಯಾಟ್ಸ್​ಮನ್ಸ್​ ಲಿಮಿಟೆಡ್​ ಓವರ್​ ಫಾರ್ಮೆಟ್​ನಲ್ಲಿ ಅಬ್ಬರಿಸುತ್ತಾರೆ. ಆದ್ರೆ ವೈಟ್​ ಜೆರ್ಸಿಯಲ್ಲಿ ಮಾತ್ರ ರನ್​ ಕಲೆಹಾಕಲಿ ಪರದಾಡ್ತಿದಾರೆ.ಅದರಲ್ಲೂ ಉಪಖಂಡಗಾಳಚೆ ನಡೆಯುವ ಟೆಸ್ಟ್​ಗಳಲ್ಲಿ ಕನಿಷ್ಠ ರನ್​ ಗಳಿಸಲು ವಿಫಲರಾಗುತ್ತಿದ್ದಾರೆ. ಪ್ರಸ್ತುವ ವಿರಾಟ್​ ಪಡೆಯ ಈ ಬ್ಯಾಟ್ಸ್​​ಮನ್​ರದ್ದು ಅದೇ ಕಥೆಯಾಗಿದೆ. ಯಾರು ಆ ಬ್ಯಾಟ್ಸ್​​ಮನ್​ ಅಂತಾ ನಾವು ತೋರಿಸ್ತೀವಿ ನೋಡಿ.

ಕೆಎಲ್ ರಾಹುಲ್​. ಟೀಮ್ ಇಂಡಿಯಾದ ಪ್ರತಿಭಾವಂತ ಬ್ಯಾಟ್ಸ್​ಮನ್​. ಕರ್ನಾಟದ ಕುವರನ ಕ್ಲಾಸ್ ಆಟಕ್ಕೆ ಎಂತಹವರೂ ಆಗಲೆಬೇಕು ಸ್ಟನ್. ಮೈದಾನದಲ್ಲಿ ಸಿಡಿದು ನಿಂತರೆ ಸುಲಭವಾಗಿ ಹರಿದು ಬರುತ್ತೆ ರನ್​, ಯಾವುದೇ ಪಿಚ್ ಆದ್ರೂ ಈತನ ಬ್ಯಾಟಿಂಗ್ ಕಾಮನ್​.

 ರಾಹುಲ್ ಆಟದ ಖದರ್ರೇ ಬೇರೆ. ಆತನ ಆಟಕ್ಕೆ ಮನಸೋಲದವರೇ ಇಲ್ಲ.. ರಾಹುಲ್​ ಮೈದಾನದಲ್ಲಿ ರನ್​ ಚಿತ್ತಾರವನ್ನು ಬಿಡಿಸುತ್ತಾ, ತಂಡಕ್ಕೆ ಗೆಲುವಿನ ಮಾಲೆ ತೊಡಿಸುವ ಹೋರಾಟಗಾರ. ಪ್ರಸಕ್ತ ಸಾಲಿನ ಐಪಿಎಲ್​​ನಲ್ಲಿನ ರಾಹುಲ್ ಬ್ಯಾಟಿಂಗ್​ ಅವರ ಬ್ಯಾಟಿಂಗ್​ ಪ್ರತಿಭೆಯ ಅನಾವರಣಗೊಳಿಸಿತ್ತು. ಅವರ ಬ್ಯಾಟಿಂಗ್ ಪ್ರತಾಪಕ್ಕೆ ಕ್ರಿಕೆಟ್ ಪಂಡಿತರು ಬೋಲ್ಡ್​ ಆಗಿದ್ರು.

ಐಪಿಎಲ್​ ಅಷ್ಟೇ ಅಲ್ಲ. ಇತ್ತೀಚಿಗೆ ಐರ್ಲೆಂಡ್​ ಹಾಗೂ ಇಂಗ್ಲೆಂಡ್ ವಿರುದ್ಧದ ಟಿ-20 ಸರಣಿಗಳಲ್ಲೂ ರಾಹುಲ್​ ಮಿಂಚಿದ್ದರು. ಅದ್ರಲ್ಲೂ ಇಂಗ್ಲೆಂಡ್​ ವಿರುದ್ಧ ಮೊದಲ ಚುಟುಕು ಪಂದ್ಯದಲ್ಲಿ ಅಬ್ಬರದ ಶತಕ ದಾಖಲಿಸಿ ತಂಡದ ಜಯದಲ್ಲಿ ಮಹತ್ವದ ಪಾತ್ರ ವಹಿಸಿದ್ರು.ರಾಹುಲ್​ ಲಿಮಿಟೆಡ್​ ಓವರ್ ಫಾರ್ಮೆಟ್​ನಲ್ಲಿ ಮಾತ್ರ ಅಲ್ಲ. ಟೆಸ್ಟ್ ಫಾರ್ಮೆಟ್​ನಲ್ಲೂ ರಾಹುಲ್​ ವಿರಾಟ್ ಪಡೆಯ ಸದಸ್ಯರಾಗಿದ್ದಾರೆ. ಆರಂಭಿಕರಾಗಿ, ಒನ್​ಡೌನ್ ಬ್ಯಾಟ್ಸ್​ಮನ್​ ಆಗಿ ಹಲವು ಪಂದ್ಯಗಳಲ್ಲಿ ತಮ್ಮ ಬ್ಯಾಟಿಂಗ್ ಸಾಮರ್ಥ್ಯವನ್ನ ಸಾಬೀತುಪಡಿಸಿದ್ದಾರೆ. ಅದ್ರಲ್ಲೂ ಆರಂಭಿಕರಾಗಿ ರಾಹುಲ್ ಹೆಚ್ಚಿನ ಯಶಸ್ಸು ಕಂಡಿದ್ದಾರೆ.

ರಾಹುಲ್​ರ ಈ ಟೆಸ್ಟ್​ ಬ್ಯಾಟಿಂಗ್​ ದಾಖಲೆ, ಆತನ ಪ್ರತಿಭೆ, ಹಾಗೂ ಆಂಗ್ಲರ ವಿರುದ್ದದ ಸೀಮಿತ ಓವರ್ ಸರಣಿಗಳಲ್ಲಿ ನೀಡಿದ್ದ ಉತ್ತಮ ಪ್ರದರ್ಶನ. ಆತನಿಗೆ ಪ್ರಸ್ತುತ ಇಂಗ್ಲೆಂಡ್ರ ವಿರುದ್ಧ ನಡೆಯುತ್ತಿರುವ ಟೆಸ್ಟ್​ ಸರಣಿಯಲ್ಲಿ ಸ್ಥಾನ ಸಿಗುವಂತೆ ಮಾಡಿತ್ತು.

ಆಂಗ್ಲರ ವಿರುದ್ಧ ಬ್ಲೂ ಜೆರ್ಸಿಯಲ್ಲಿ ಅದ್ಭುತ ಪ್ರದರ್ಶ ನೀಡಿದ್ದ ರಾಹುಲ್​ ವೈಟ್​ ಜೆರ್ಸಿಯಲ್ಲಿ ಮಾತ್ರ ಸತತ ವೈಫಲ್ಯ ಕಾಣುತ್ತಿದ್ದಾರೆ. ಸತತ ಮೂರು ಇನ್ನಿಂಗ್ಸ್​ಗಳಲ್ಲೂ ರನ್​ಕಲೆಹಾಕುವಲ್ಲಿ ಎಡವಿದ್ದಾರೆ. ಎಡ್ಸ್​ಬಸ್ಟನ್​ನಲ್ಲಿ ನಡೆದ ಮೊದಲ ಟೆಸ್ಟ್​ನಲ್ಲಿ ಟೆಸ್ಟ್​ ಸ್ಪೆಷಲಿಸ್ಟ್​ ಚೇತೇಶ್ವರ್​ ಪೂಜಾರನ್ನ ಬದಿಗೊತ್ತಿ. ವಿರಾಟ್ ರಾಹುಲ್​ರನ್ನ ಕಣಕ್ಕಿಳಿಸಿದ್ರು.

ಆದ್ರೆ ನಾಯಕನ ತಮ್ಮ ಮೇಲಿಟ್ಟಿದ್ದ ನಂಬಿಕೆಯನ್ನ ಉಳಿಸಿಕೊಳ್ಳುವಲ್ಲಿ ರಾಹುಲ್ ವಿಫಲರಾದ್ರು. ಪಂದ್ಯದ ಎರಡೂ ಇನ್ನಿಂಗ್ಸ್​ಗಳಲ್ಲೂ ತಂಡಕ್ಕೆ ಆಸರೆಯಾಗದೇ ತಂಡದ ಸೋಲಿಗೆ ತಾವೂ ಕಾರಣರಾದ್ರು. ಅ ಪಂದ್ಯದಲ್ಲಿ ರಾಹುಲ್​ ಎರಡೂ ಇನ್ನಿಂಗ್ಸ್​ಗಳಿಂದ ಕೇವಲ 17 ರನ್ ಮಾತ್ರ ಗಳಿಸಿದ್ರು. ಇನ್ನೂ ನಿನ್ನೆಯಿಂದ ಲಾರ್ಡ್ಸ್​ನಲ್ಲಿ ಆರಂಭವಾಗಿರುವ ದ್ವಿತೀಯ ಟೆಸ್ಟ್​ನಲ್ಲೂ ರಾಹುಲ್​ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ್ದಾರೆ. ಧವನ್ ಬದಲು ಆರಂಭಿಕರಾಗಿ ತಂಡದಲ್ಲಿ ಸ್ಥಾನ ಪಡೆದ ರಾಹುಲ್​ ಕೇವಲ 8 ರನ್​ಗಳಿಗೆ ತಮ್ಮ ಆಟ ಕೊನೆಗಳಿಸಿದ್ರು.

ಎರಡು ಬೌಂಡರಿ ಬಾರಿಸಿ ಭರವಸೆ ಮೂಡಿಸಿದ್ದ ರಾಹುಲ್​, ಆ್ಯಂಡರ್​ಸನ್​ಗೆ ವಿಕೆಟ್​ ಓಪ್ಪಿಸಿದ್ರು. ಔಟ್​ ಸ್ಟಂಪ್​ನಿಂದ ಹೊರ ಹೋಗುತ್ತಿದ್ದ ಬಾಲ್​ನ ಕೆಣಕಿದ ರಾಹುಲ್ ಕೀಪರ್​ ಬೇರ್​ಸ್ಟೋಗೆ ಕ್ಯಾಚ್​ ನೀಡಿದ್ರು. ಅದೇನೆ ಇರಲಿ, ರಾಹುಲ್ ಸಿಕ್ಕ ಅವಕಾಶಗಳನ್ನ ಹೀಗೆ ಕೈ ಚೆಲ್ಲುತ್ತಾ ಹೋದ್ರೆ, ಮತ್ತೊಬ್ಬರಿಗೆ ತಮ್ಮ ಸ್ಥಾನ ಬಿಟ್ಟು ಕೊಡಬೇಕಾಗಿಬರಬಹುದು. ಆದ್ರೆ ಹಾಗೆ ಆಗದೆ ರಾಹುಲ್ ಮತ್ತೆ ತಮ್ಮ ಬ್ಯಾಟಿಂಗ್ ಲಯ ಕಂಡುಕೊಳ್ಳಲಿ ಅನ್ನೋದು ಅಭಿಮಾನಿಗಳ ಆಶಯ.

0

Leave a Reply

Your email address will not be published. Required fields are marked *