ಪ್ರೇಕ್ಷಕರ ಮನ ಗೆದ್ದ ಪುಷ್ಪಕ ವಿಮಾನ

ಪುಷ್ಪಕ ವಿಮಾನ ಚಿತ್ರಕ್ಕೆ ಸಿನಿ ಪ್ರಿಯರಿಂದ ಒಳ್ಳೆ ರೆಸ್ಪಾನ್ಸ್​ ಸಿಕ್ಕಿದೆ. ಅಪ್ಪ ಮಗಳ ಬಾಂಧವ್ಯದ ಜೊತೆಗೆ ಕಾಮಿಡಿ ಪಂಚ್​ ಕೂಡ ಸಿನಿ ಪ್ರೇಕ್ಷಕರ ಮನ ಗೆದ್ದಿದೆ. ಪುಷ್ಪಕ ವಿಮಾನದ ಚಿತ್ರದ ಕಥೆಯೂ ಕೂಡ ಬಹಳ ವಿಭಿನ್ನವಾಗಿ ಮೂಡಿ ಬಂದಿದೆ.

ಚಿತ್ರದಲ್ಲಿ ರಮೇಶ್ ಅವ್ರದ್ದು ಬುದ್ಧಿ ಮಾಂದ್ಯ ತಂದೆಯ ಪಾತ್ರ. ಬಾಲನಟಿ ಯುವಿನಾ ಇಲ್ಲಿ ರಮೇಶ್​ರ ಪುಟ್ಟ ಮಗಳಾಗಿ ಅಭಿನಯಿಸಿದ್ರೆ, ದೊಡ್ಡವಳಾದ ನಂತ್ರ ಮಗಳ ಪಾತ್ರವನ್ನ ಡಿಂಪಲ್ ಕ್ವೀನ್ ರಚಿತಾ ರಾಮ್ ನಿಭಾಯಿಸಿದ್ದಾರೆ. ಡಿಂಪಲ್​ ರಾಣಿಯ ಕೆಲವೊಂದು ಭಾವುಕತೆಯ ಸನ್ನಿವೇಶ ನಿಜಕ್ಕೂ ನೋಡುಗರಲ್ಲಿ ಕಣ್ಣೀರು ಸುರಿಸುತ್ತೆ.
ಇತ್ತೀಚಿನ ದಿನಗಳಲ್ಲಿ ನಾಯಕ, ನಾಯಕಿಯ ಸುತ್ತ ಸುತ್ತೋ ಸಿನಿಮಾಗಳ ಹಾವಳಿ ನಡುವೆ, ಪುಷ್ಪಕ ವಿಮಾನ ವಿಭಿನ್ನ ಚಿತ್ರವಾಗಿ ಮೂಡಿ ಬಂದಿದೆ. ಇನ್ನು ಚಿತ್ರದ ಹಾಡುಗಳು ಬಹಳ ಸೊಗಸಾಗಿ ಮೂಡಿಬಂದಿವೆ. ಚಿತ್ರದ ಮತ್ತೊಂದು ವಿಶೇಷ ಅಂದ್ರೆ ಬಾಲಿವುಡ್ ನಟಿ ಜೂಹಿ ಚಾವ್ಲಾ ವಿಶೇಷ ಪಾತ್ರದ ಮೂಲಕ ಕನ್ನಡಕ್ಕೆ ಮತ್ತೊಮ್ಮೆ ಎಂಟ್ರಿ ಕೊಟ್ಟಿದ್ದಾರೆ . ಒಟ್ಟಿನಲ್ಲಿ ವರ್ಷದ ಆರಂಭದಲ್ಲೇ ಬಿಡುಗಡೆಯಾಗಿರುವ ಪುಷ್ಪಕ ವಿಮಾನ ಚಿತ್ರ ಕನ್ನಡ ಚಿತ್ರರಸಿಕರ ಮನ ಗೆಲ್ಲಲು ಸಫಲವಾಗಿದೆ.

0

Leave a Reply

Your email address will not be published. Required fields are marked *