ನೋಟ್​ ಬ್ಯಾನ್​ಗೆ ಜನರೇ ಪಾಠ ಕಲಿಸ್ತಾರೆ – ಖರ್ಗೆ

ಪ್ರಧಾನಿ ನರೇಂದ್ರ ಮೋದಿಯವರ ನೋಟ್ ಬ್ಯಾನ್ ಎಫೆಕ್ಟ್ ಪಂಚರಾಜ್ಯ ಚುನಾವಣೆಗಳ ಮೇಲೆ ಬೀಳಲಿದ್ದು, ಜನ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಕಾಂಗ್ರೆಸ್​  ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಭವಿಷ್ಯ ನುಡಿದಿದ್ದಾರೆ. ಕಲಬುರಗಿಯಲ್ಲಿ ಮಾತನಾಡಿದ ಅವರು, ಮೋದಿ ನೋಟ್ ಬ್ಯಾನ್ ನಿಂದ ಸಾಕಷ್ಟು ಜನಸಾಮಾನ್ಯರು, ಕೂಲಿ ಕಾರ್ಮಿಕರು, ಅಸಂಘಟಿತ ಕಾರ್ಮಿಕರು, ರೈತರು ತೊಂದರೆ ಅನುಭವಿಸಿದ್ದಾರೆ. ಅವರೆಲ್ಲರೂ ಈ ಪಂಚರಾಜ್ಯ ಚುನಾವಣೆಗಳಲ್ಲಿ ತಕ್ಕ ಪಾಠ ಕಲಿಸ್ತಾರೆ. ಜನ ನಿರೀಕ್ಷೆ ಇಟ್ಟುಕೊಂಡಷ್ಟು ಮೋದಿ ನೋಟ್ ಬ್ಯಾನ್ ಸಾಧನೆ ಮಾಡಲಿಲ್ಲ ಎಂದು ಖರ್ಗೆ, ಮೋದಿ ವಿರುದ್ದ ವಾಗ್ದಾಳಿ ನಡೆಸಿದ್ರು. 

0

Leave a Reply

Your email address will not be published. Required fields are marked *