ಬಡ್ತಿಯಲ್ಲಿ ಅನ್ಯಾಯ: ಅಹಿಂಸಾ ಸಂಘಟನೆಯಿಂದ ಆಕ್ರೋಶ

ಬಡ್ತಿಯಲ್ಲಿ ನಮಗೆ ಅನ್ಯಾಯವಾಗ್ತಿದೆ ಅಂತ ಅಹಿಂಸಾ ಸಂಘಟನೆ ಇಂದು ಸುದ್ದಿಗೋಷ್ಟಿ ನಡೆಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಬಡ್ತಿ ವಿಚಾರ ಇಂದು ನಿನ್ನೆಯದ್ದಲ್ಲ ಸುಮಾರು 25 ವರ್ಷದಿಂದ ಹೋರಾಟಗಳು ನಡೆಯುತ್ತಲೇ ಇವೆ. ಮೀಸಲಾತಿಯಡಿ ಬಡ್ತಿ ಪಡೆದಿರುವ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಸರ್ಕಾರಿ ನೌಕರರಿಗೆ ಸಾಂದರ್ಭಿಕ ಹಿರಿತನ ನೀಡುವ ಅವಕಾಶವನ್ನು ಕಲ್ಪಿಸಲೆಂದು ಹಾಗೂ 1978ರ ಏಪ್ರಿಲ್ 27ರಿಂದ ನೀಡಲಾಗಿರುವ ಸಾಂದರ್ಭಿಕ ಸೇವಾ ಹಿರಿತನವನ್ನು ಕಾಪಾಡುವ ಉದ್ದೇಶದಿಂದ ರಾಜ್ಯ ಸರ್ಕಾರವು ‘ಸರ್ಕಾರಿ ನೌಕರರ ಮೀಸಲಾತಿ ಆಧರಿತ ಬಡ್ತಿ ನೌಕರರ ಜ್ಯೇಷ್ಠತೆ ನಿರ್ಣಯ ಕಾಯ್ದೆ– 2002’ ರೂಪಿಸಿತ್ತು. ಈ ಕಾಯ್ದೆಯ ಸಿಂಧುತ್ವವನ್ನು ಪ್ರಶ್ನಿಸಿ ಎಂ.ನಾಗರಾಜ್ ಮತ್ತಿತರರು 2002ರಲ್ಲೇ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಜ್ಯೇಷ್ಠತೆಯನ್ನ ಸರಿಪಡಿಸಿ ಸಾಮಾನ್ಯ ಪಟ್ಟಿಯಲ್ಲಿ ಬರೊ ಬಡ್ತಿ ನೀಡಬೇಕೆಂದು ಹೇಳಲಾಗಿತ್ತು.

0

Leave a Reply

Your email address will not be published. Required fields are marked *