ವೈಯಕ್ತಿಕ ಜೆಟ್‍ ಮೂಲಕ ಮಗು ರವಾನೆ: ಮಾನವೀಯತೆ ಮೆರೆದ ಪ್ರಿಯಾಂಕ ಗಾಂಧಿ

ದೆಹಲಿ: ಉತ್ತರಪ್ರದೇಶದ ಪ್ರಯಾಗ್ ರಾಜ್‍ನ ಕಮಲಾ ನೆಹರು ಆಸ್ಪತ್ರೆಯಲ್ಲಿ ಅನಾರೋಗ್ಯಕ್ಕೆ ಚಿಕಿತ್ಸೆ ಪಡೆಯುತ್ತಿದ್ದ 2.5 ವರ್ಷದ ಬಾಲಕಿಗೆ ವೈಯಕ್ತಿಕ ಜೆಟ್ ಮೂಲಕ, ದೆಹಲಿ ಏಮ್ಸ್‍ಗೆ ಪ್ರಯಾಣಿಸಲು ಅವಕಾಶ ಮಾಡಿಕೊಡುವ ಮೂಲಕ ಪ್ರಿಯಾಂಕ ಗಾಂಧಿ ಮಾನವೀಯತೆ ಮೆರೆದಿದ್ದಾರೆ. ಪ್ರಯಾಗ್‍ರಾಜ್‍ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಾಲಕಿಗೆ ಹೆಚ್ಚಿನ ಚಿಕಿತ್ಸೆಯ ಅಗತ್ಯವಿದೆ. ಅವಳನ್ನು ದೆಹಲಿ ಏಮ್ಸ್‍ಗೆ ವರ್ಗಾಯಿಸಬೇಕು ಎಂದು ವೈದ್ಯರು ಸೂಚಿಸಿದ್ದರು.

ಪ್ರಯಾಗ್‍್ರಾಜ್‍ನಲ್ಲಿ ಕಾಂಗ್ರೆಸ್ ಪರವಾಗಿ ಪ್ರಚಾರ ಮಾಡುತ್ತಿದ್ದ ರಾಜೀವ್ ಶುಕ್ಲಾ ಅವರಿಗೆ ಈ ವಿಚಾರ ತಿಳಿಯಿತು. ತಕ್ಷಣ ಅವರು ಪ್ರಿಯಾಂಕ ಅವರ ಗಮನ  ಸೆಳೆದರು. ಶುಕ್ಲಾ ಅವರ ಮನವಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸಿದ ಪ್ರಿಯಾಂಕ ತಮ್ಮ ವೈಯಕ್ತಿಕ ಜೆಟ್‍ನಲ್ಲಿ ಬಾಲಕಿಯನ್ನು ದೆಹಲಿಯ ಏಮ್ಸ್‍ಗೆ ವರ್ಗಾಯಿಸಲು ಅವಕಾಶ ಮಾಡಿಕೊಟ್ಟಿದ್ದಾರೆ. ಈ ಘಟನೆ ಶುಕ್ರವಾರ ಸಂಜೆ ನಡೆದಿದ್ದು, ತಡವಾಗಿ ವರದಿಯಾಗಿದೆ.

0

Leave a Reply

Your email address will not be published. Required fields are marked *