ರಾಷ್ಟ್ರಪತಿ ಆಯ್ಕೆಗೆ ಮತದಾನ ಪ್ರಕ್ರಿಯೆ ಆರಂಭವಾಗಿದೆ..

ರಾಷ್ಟ್ರಪತಿ ಆಯ್ಕೆಗೆ ಮತದಾನ ಪ್ರಕ್ರಿಯೆ ಆರಂಭವಾಗಿದೆ.. ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್​ ಶಾ, ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್, ಬಿಎಸ್​ಪಿ ಮುಖ್ಯಸ್ಥೆ ಮಾಯಾವತಿ ಸೇರಿದಂತೆ ಹಲವರು​ ಮತ ಚಲಾಯಿಸಿದ್ದಾರೆ.. ಆಡಳಿತರೂಢ ಎನ್‌ಡಿಎ ಮೈತ್ರಿಕೂಟದಿಂದ ರಾಮನಾಥ್ ಕೊವಿಂದ್ ಹಾಗೂ ಯುಪಿಎ ಒಕ್ಕೂಟದಿಂದ ಮೀರಾ ಕುಮಾರ್ ಪ್ರಬಲ ಅಭ್ಯರ್ಥಿಗಳಾಗಿದ್ದಾರೆ.. ಈ ಇಬ್ಬರು ಅಭ್ಯರ್ಥಿಗಳು ದಲಿತ ಸಮುದಾಯದಿಂದ ಬಂದವರಾಗಿದ್ದು ಈ ಬಾರಿಯ ಚುನಾವಣೆ ಸಾಕಷ್ಟು ಕುತೂಹಲ ಮೂಡಿಸಿದೆ.. ದಲಿತ ವರ್ಸಸ್ ದಲಿತ ಜುಗಲ್ ಬಂದಿಯಲ್ಲಿ ಗೆಲ್ಲೋಕೆ ರಾಜಕೀಯ ಪಕ್ಷಗಳು ರಣತಂತ್ರ ಹೆಣೆಯುತ್ತಿವೆ…ಹೆಚ್ಚು ಮತಗಳನ್ನು ಹೊಂದಿರುವ ಎನ್‌ಡಿಎ ಗೆ ಗೆಲವಿನ ನಗೆ ಬೀರಲು ಕೇವಲ 11,828 ಮತಗಳು ಮಾತ್ರಬೇಕು.. ಈಗಾಗಲೇ ಶಿವಸೇನೆ, ಎಐಎಡಿಎಂಕೆ, ಅಕಾಲಿದಳ, ಸಿಪಿಜೆ ಸೇರಿದಂತೆ ಹದಿನಾಲ್ಕು ಮಿತ್ರ ಪಕ್ಷಗಳು ಬೆಂಬಲ ಘೋಷಿಸಿವೆ..ಯುಪಿಎ ಒಕ್ಕೂಟಕ್ಕೆ 1,47,212 ಮತಗಳು ಬೇಕಾಗಿದ್ದು ಟಿಎಂಸಿ, ಬಿಎಸ್ಪಿ, ಆರ್‌‌‌ಜೆಡಿ, ಜೆಡಿಎಸ್ ಸೇರಿದಂತೆ ಹದಿನೇಳು ಮಿತ್ರಪಕ್ಷಗಳ ಬೆಂಬಲ ನೀಡಿವೆ.. ಇದರ ಜೊತೆಗೆ ಆಪ್, ಬಿಜೆಡಿ, ಟಿಎಸ್‌ಆರ್, ವೈಎಸ್‌ಆರ್ ನಿರ್ಣಾಯಕ ಸ್ಥಾನದಲ್ಲಿವೆ..

0

Leave a Reply

Your email address will not be published. Required fields are marked *