ಹಾಲಿ ಸಿಎಂ – ಮಾಜಿ ಸಿಎಂಗಳ ಮಧ್ಯೆ ವಾಕ್ಸಮರ

ಯಡಿಯೂರಪ್ಪರಿಂದ ನಮ್ಮ ಸರ್ಕಾರ ಬೀಳಿಸಲು ಕಸರತ್ತು ನಡೆದಿದೆ ಎಂದು ಎಂದು ಸಿಎಂ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು ನಮ್ಮ 18 ಶಾಸಕರನ್ನು ಕರೆದುಕೊಂಡು ಮುಂಬೈಗೆ ಹೊರಟ್ಟಿದ್ದಾರಂತೆ. ನಿನ್ನೆ ನಾಗಮಂಗಲ ಶಾಸಕ ಸುರೇಶ್ ಗೌಡರಿಗೆ ಬಿಜೆಪಿ ಕರೆ ಮಾಡಿದೆ, ಬಿಜೆಪಿಗೆ ಬಂದ್ರೆ 5 ಕೋಟಿ ರೂ ನೀಡುವುದಾಗಿ ಆಮಿಷ್ ಒಡ್ಡಿದೆ, ಆದ್ರೆ ನಮ್ಮ ಸರ್ಕಾರ ಉರುಳಿಸಲು ಅವರಿಂದ ಸಾಧ್ಯವಿಲ್ಲ ಎಂದು ಹೇಳಿದ್ರು. ಶಿವರಾಂ ಕಾರಂತ್ ಬಡಾವಣೆ ವಿಚಾರ ಇಲ್ಲಿ‌ ಎಲ್ಲರಿಗೂ ಗೊತ್ತು, ಎಲ್ಲಿ‌ಗೆ ಎಷ್ಟೆಷ್ಟು ಹೋಗಿದು ಅನ್ನೋದು ಕೂಡ ಗೊತ್ತು, ವಾಸ್ತವದಲ್ಲಿ ಬಿಎಸ್‌ವೈ ಪರ್ಸೆಂಟೇಜ್‌ನ ಪಿತಾಮಹ, ಗಾಜಿನ ಮನೆಯೊಳಗೆ ಕೂತು ಮಾತನಾಡೋದು ಬೇಡ ಎಂದು ತಾಕೀತು ಮಾಡಿದರು.

ಸರ್ಕಾರಕ್ಕೆ ಇದೇ ರೀತಿ ತೊಂದರೆ ನೀಡುತ್ತಿದ್ದರೆ ಸುಮ್ಮನಿರಲ್ಲ. ನಾಡಿನ ಜನರಿಗೆ ಬಿಜೆಪಿ ವಿರುದ್ಧ ದಂಗೆ ಏಳುವಂತೆ ಕರೆ ಕೊಡುತ್ತೇನೆ ಎಂದು ಸಿಎಂ ಕುಮಾರಸ್ವಾಮಿ ಬಿಎಸ್‌ವೈ ಎಚ್ಚರಿಕೆ ನೀಡಿದ್ದಾರೆ. ಹಾಸನದ ಹಿರಿಸಾವೆಯಲ್ಲಿ ಮಾತನಾಡಿದ ಸಿಎಂ ಕುಮಾರಸ್ವಾಮಿ, ಇನ್ನು ಯಡಿಯೂರಪ್ಪ ಅವರಿಗೆ ಎಲ್ಲೋ ಬುದ್ಧಿ ಭ್ರಮಣೆಯಾಗಿದೆ. ಸರ್ಕಾರದ ವಿಷಯದಲ್ಲಿ ಬಿಜೆಪಿಯವರು ಹುಡುಗಾಟ ನಿಲ್ಲಿಸಬೇಕು. ಯಾಕೆ ಅವರೊಬ್ಬರೇ ಅಧಿಕಾರದಲ್ಲಿ ಇರಬೇಕೇ ಎಂದು ಬಿಎಸ್‌ವೈ ವಿರುದ್ಧ ಕಿಡಿಕಾರಿದರು.

ಹಾಲಿ ಸಿಎಂ -ಮಾಜಿ ಸಿಎಂಗಳ ಮಧ್ಯೆ ವಾಕ್ಸಮರ ತಾರಕಕ್ಕೇರಿದೆ. ಕುಮಾರಸ್ವಾಮಿ ಸೇಡಿನ ರಾಜಕಾರಣ ಮಾಡ್ತಿದ್ದಾರೆ, ಅವರ ಎಲ್ಲಾ ಹಗರಣಗಳು ಬಯಲಾಗುತ್ತೆ ಕಾದು ನೋಡಿ ಎಂದು ಮಾಜಿ ಸಿಎಂ ಬಿ.ಎಸ್​ ಯಡಿಯೂರಪ್ಪ ಹೊಸ ಬಾಂಬ್ ಸಿಡಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವ್ರು ನಿಮ್ಮದೇ ಸರ್ಕಾರ ಇದೆ, ನನ್ನ ಬಗ್ಗೆ ಇರುವ ಆರೋಪಗಳನ್ನು ತನಿಖೆ ಮಾಡಿಸಿ, ಇಂಥ ಬೆದರಿಕೆಗಳಿಗೆ ಹೆದರುವವನಲ್ಲ ಈ ಯಡಿಯೂರಪ್ಪ ಎಂದು ಕುಮಾರಸ್ವಾಮಿಗೆ ಸವಾಲ್​ ಹಾಕಿದ್ದಾರೆ. ಈ ಸಂಬಂಧ ಇಂದು ಸಂಜೆ 4 ಗಂಟೆಗೆ ತುರ್ತು ಸುದ್ದಿಗೋಷ್ಠಿ ಕರೆದಿದ್ದಾರೆ.

0

Leave a Reply

Your email address will not be published. Required fields are marked *