ಬೆಂಗಳೂರಿನಲ್ಲಿ ಪ್ರವಾಸಿ ದಿವಸ್ ಸಮ್ಮೇಳನಕ್ಕೆ ಚಾಲನೆ

ಬೆಂಗಳೂರಿನಲ್ಲಿ ೧೪ನೇ ಭಾರತೀಯ ಪ್ರವಾಸಿ ದಿವಾಸ್ ಸಮ್ಮೇಳನಕ್ಕೆ ಕೇಂದ್ರ ಯುವ ಜನ ಖಾತೆ ಸಚಿವ ವಿಜಯ್​ ಗೋಯಲ್ ಚಾಲನೆ ನೀಡಿದ್ರು. ಬೆಂಗಳೂರಿನ ಹೊರವಲಯದಲ್ಲಿರುವ ಅಂತಾರಾಷ್ಟ್ರೀಯ ವಸ್ತು ಪ್ರದರ್ಶನದಲ್ಲಿ ಇಂದಿನಿಂದ ಮೂರು ದಿನಗಳ ಕಾಲ ಪ್ರವಾಸ್​ ದಿವಸ್​ ಸಮ್ಮೇಳನ ನಡೆಯಲಿದೆ. 14 ರಾಜ್ಯಗಳ ಪ್ರತಿನಿಧಿಗಳು ಸೇರಿದಂತೆ ದೇಶ ವಿದೇಶಗಳಿಂದ ಸಾವಿರಾರು ಗಣ್ಯರು ಭಾಗವಹಿಸಲಿದ್ದಾರೆ. ಕೇಂದ್ರ ಸಚಿವರಾದ ವಿ.ಕೆ. ಸಿಂಗ್​, ಕೈಗಾರಿಕಾ ಸಚಿವ ಆರ್​.ವಿ. ದೇಶಪಾಂಡೆ, ಪ್ರವಾಸೋದ್ಯಮ ಸಚಿವ ಪ್ರಿಯಾಂಕ್ ಖರ್ಗೆ ಉಪಸ್ಥಿತರಿದ್ರು. ನಾಳೆ ಪ್ರಧಾನಿ ನರೇಂದ್ರ ಮೋದಿ, ಸಿಎಂ ಸಿದ್ದರಾಮಯ್ಯ ಭಾಗವಹಿಸಲಿದ್ದಾರೆ. ಇಂದಿನ ಪ್ರವಾಸ್​ ದಿವಸ್ ಸಮ್ಮೇಳನದಲ್ಲಿ 14 ರಾಜ್ಯಗಳ ಕಲಾ ತಂಡಗಳು ತಮ್ಮ ರಾಜ್ಯಗಳ ಸಂಸ್ಕೃತಿಯನ್ನು ಅನಾವರಣಗೊಳಿಸಲಿವೆ..

0

Leave a Reply

Your email address will not be published. Required fields are marked *