ಬಹುಭಾಷಾ ನಟ ಪ್ರಕಾಶ್ ರೈ ಈ ಗ್ರಾಮವನ್ನ ದತ್ತು ಪಡೆಯಲು ಮುಂದಾಗಿದ್ದಾರೆ…

ಆ ಊರು ಫ್ಲೋರೈಡ್ ನೀರನಿಂದ ಬಳಲಿ ಬೆಂಡಾಗಿತ್ತು. ಹಳ್ಳಿಯ ಜನರು ಒಂದಲ್ಲಾ ಒಂದು ರೀತಿಯಲ್ಲಿ ನೀರಿನ ಭಾದೆಗೆ ಸಿಲುಕಿ ನರಳುತ್ತಿದ್ರು. ಆದ್ರೆ ಅದಕ್ಕೆ ಪರಿಹಾರ ನೀಡಲು ಬಂದಿದ್ದಾರೆ ಬಹುಭಾಷಾ ನಟ ಒಬ್ರು.ಚಿತ್ರದುರ್ಗದ ಹಿರಿಯೂರಿನ ಬಂಡ್ಲಾರಹಟ್ಟಿ ಕುಗ್ರಾಮ ಸಂಪೂರ್ಣ ಫ್ಲೋರೈಡ್ ನೀರು ಭಾದಿತ ಪ್ರದೇಶ. ಇಲ್ಲಿಯ ನೀರು ಕುಡಿಯುವುದಕ್ಕೆ ಮಾತ್ರ ಯೋಗ್ಯವಲ್ಲದೇ ನೀರಾವರಿ, ದಿನ ಬಳಕೆಗೂ ಕೂಡ ಯೋಗ್ಯವಲ್ಲ. ಇದನ್ನ ಅರಿತ ಬಹುಭಾಷಾ ನಟ ಪ್ರಕಾಶ್ ರೈ ಈ ಗ್ರಾಮವನ್ನ ದತ್ತು ಪಡೆಯಲು ಮುಂದಾಗಿದ್ದಾರೆ. ಸದಾ ವಿವಾದದ ಸುಳಿಯಲ್ಲಿರುವ ಪ್ರಕಾಶ್ ರೈ ಈ ಗ್ರಾಮವನ್ನು ಮಾದರಿ ಗ್ರಾಮ ಮಾಡವು ಕೈಂಕರ್ಯಕ್ಕೆ ಮುಂದಾಗಿದ್ದಾರೆ. ಇನ್ನು ಇದೇ ಸಂದರ್ಭದಲ್ಲಿ ಮಾತ್ನಾಡಿದ ಪ್ರಕಾಶ್ ರೈ. ಸ್ವಲ್ಪ ದಿನಾ ಸಮಯ ಕೊಡಿ. ನಿಮ್ಮ ಸಹಕಾರ ನನಗೆ ನೀಡಿ. ಈ ಗ್ರಾಮವನ್ನ ಮಾದರಿ ಗ್ರಾಮ ಮಾಡೋಣ. ಅಂತಾ ಗ್ರಾಮದ ಜನರಿಗೆ ಮನವರಿಕೆ ಮಾಡಿದ್ದಾರೆ.

ಇನ್ನು ಪ್ರಕಾಶ್ ರೈ ಆಗಮನದ ಭರವಸೆಯ ಮಾತುಗಳಿಂದ ಕತ್ತಲೆಯಲ್ಲಿದ್ದ ಜನರಿಗೆ ಬೆಳಕು ಬಂದಂಗಾಗಿದೆ.ಹಳ್ಳಿಗೆ ಅಂಟಿರುವ ಫ್ಲೋರೈಡ್ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗುವುದಾದರೆ ಪ್ರಕಾಶ್ ರೈ ಅವರಿಗೆ ಬೆಂಬಲ ನೀಡಲು ಸದಾ ಸಿದ್ದ ಅಂದಿದ್ದಾರೆ. ಅಷ್ಟೇ ಅಲ್ಲದೆ ನಟ ರೈ ಅವರ ಇಂತ ಸಾಮಾಜಿಕ ಸೇವೆಗೆ ಸಮಾಜ ಕಲ್ಯಾಣ ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.ಒಟ್ಟಾರೆ ಸಂಸದರು ದತ್ತು ಗ್ರಾಮ ಪಡೆದು ಗ್ರಾಮಗಳತ್ತ ಚಿತ್ತ ಹರಿಸದೇ ಇರುವ ಕಾಲಘಟ್ಟದಲ್ಲಿ, ನಟರಾಗಿ ಇದ್ದುಕೊಂಡು ಪ್ರಕಾಶ್ ರೈ ಮಾದರಿ ಗ್ರಾಮ ಮಾಡಲು ಹೊರಟಿರುವುದು ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಸತೀಶ್.ಕೆ. ಸುದ್ದಿ ಟಿವಿ ಚಿತ್ರದುರ್ಗ

0

Leave a Reply

Your email address will not be published. Required fields are marked *