ಗೌರಿಯನ್ನು ನಾವು ಸಮಾಧಿ ಮಾಡಿಲ್ಲ, ಬಿತ್ತಿದ್ದೇವೆ: ಪ್ರಕಾಶ್ ರೈ

ಬೆಂಗಳೂರು: ಜಗತ್ತಿನ ಯಾವುದೇ ಫ್ಯಾಸಿಸ್ಟ್ ವ್ಯವಸ್ಥೆ ಹೆಚ್ಚು ಕಾಲ ಉಳಿಯೋದಿಲ್ಲ. ಹೆಚ್ಚು ಅಂದರೆ 5 ವರ್ಷ ಇರ್ತಾರೆ, ಆಮೇಲೆ ಹೋಗಲೇಬೇಕು. ಇವರ ಶಕ್ತಿಯನ್ನು ನಾವು ತಡೆಗಟ್ಟಲೇಬೇಕೆಂದು ನಟ ಪ್ರಕಾಶ್ ರೈ ಬಲಪಂಥೀಯರಿಗೆ ಮಾತಿನ ಪೆಟ್ಟು ನೀಡಿದ್ದಾರೆ. ಬೆಂಗಳೂರಿನ ಟೌನ್​ಹಾಲ್​ನಲ್ಲಿ ನಡೆದ ಗೌರಿ ಲಂಕೇಶ್ ಜನ್ಮದಿನ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಕಾಶ್ ರೈ, ಫ್ಯಾಸಿಸ್ಟ್ ಶಕ್ತಿಗಳು ಹೆಚ್ಚು ದಿನ ಉಳಿಯೋದಿಲ್ಲ, ನಾವು ಸ್ವಲ್ಪ ದಿನ ಸುಮ್ಮನಿದ್ದೆವು. ಅದಕ್ಕಾಗಿ ಫ್ಯಾಸಿಸ್ಟ್ ಶಕ್ತಿಗಳು ದೊಡ್ಡಮಟ್ಟದಲ್ಲಿ ವಿಜೃಂಭಿಸಿವೆ ಎಂದು ಕಿಡಿಕಾರಿದರು. ಇದೇ ವೇಳೆ, ಗೌರಿ ಸಾವಿನ ಧ್ವನಿ ಇನ್ನೂ ದೊಡ್ಡದಾಗತ್ತೆ. ಗೌರಿ ಅಪ್ಪನ ಬಗ್ಗೆ ನೆನೆದಾಗಲೆಲ್ಲ ನಾನು ಕಿಚಾಯಿಸುತ್ತಿದ್ದೆ. ನಾವೂ ಕೂಡ ಲಂಕೇಶ್ ವಾರಸುದಾರರು ಅನ್ನುತ್ತಿದ್ದೆ. ಲಂಕೇಶ್​​ಗಿಂತ ಅಪಾರ ಹೆಸರು ಗೌರಿ ಮಾಡಿದ್ಲು ಅನಿಸುತ್ತದೆ. ಬದುಕಿದ್ದಾಗ ಜನಪರವಾಗಿ ಸಮಾಜದ ಒಳಿತಿಗೆ ಅನ್ಯಾಯದ ವಿರುದ್ದ ಧ್ವನಿ ಎತ್ತುವವರು ಮಡಿದಾಗ ಸಮಾಧಿ ಮಾಡಲ್ಲ ನಾವು ಅವರನ್ನು ಬಿತ್ತುತ್ತೇವೆ. ಅದು ಮೊಳಕೆ ಒಡೆದು ಮರವಾಗಬೇಕು. ಗೌರಿ ಹಂತಕರಿಗೆ ನಾನು ಹೇಳೋದಿಷ್ಟೆ. ಗೌರಿಯನ್ನು ನಾವು ಸಮಾಧಿ ಮಾಡಿಲ್ಲ, ಬಿತ್ತಿದ್ದೇವೆ. ವೇಮುಲನ ಮರಣ ಕನ್ಹಯ್ಯಾರನ್ನು ಹುಟ್ಟಿಸಿದೆ, ದಲಿತರನ್ನು ಕೊಂದಾಗ ಜಿಗ್ನೇಶ್ ಹುಟ್ಟಿದ್ದು ಗೌರಿ ಕೊಂದಾಗ ನಾನು, ನನ್ನಂತವರು ಹುಟ್ಟಿದ್ದು ಎಂದರು.

0

Leave a Reply

Your email address will not be published. Required fields are marked *