ಬಾಹುಬಲಿ ಚಿತ್ರದ ಸೆಟ್​ನಿಂದ ಹೊರನಡೆದ ಪ್ರಭಾಸ್​ …!

ಬಹುನಿರೀಕ್ಷಿತ ಬಾಹುಬಲಿ ಚಿತ್ರದ ಸೆಟ್​​ನಿಂದ ಪ್ರಭಾಸ್​ ಹೊರಬಂದಿದ್ದಾರೆ. ಹಾಗಂತ ಪ್ರಭಾಸ್​ ಚಿತ್ರ ತಂಡದ ಮೇಲೆ ಏನು ಮುನಿಸಿಕೊಂಡಿಲ್ಲ. ಖುಷಿ ಖುಷಿಯಾಗಿ ಎಲ್ಲರಿಗೂ ಕೃತಜ್ಱತೆ ಹೇಳಿಯೇ ಹೊರಬಂದಿದ್ದಾರೆ. ಹೌದು, ಬಾಹುಬಲಿ ಚಿತ್ರಕ್ಕಾಗಿ ಪ್ರಭಾಸ್​ ಎಲ್ಲವನ್ನೂ ತ್ಯಾಗ ಮಾಡಿದ್ದಾರೆ. ಬಾಹುಬಲಿ-1, ಬಾಹುಬಲಿ-2 ಚಿತ್ರಕ್ಕಾಗಿ ಪ್ರಭಾಸ್​ ಒಟ್ಟು 613 ದಿನಗಳ ಕಾಲ್​ಶೀಟ್​ ಕೊಟ್ಟಿದ್ರು. ಇದೀಗ ಪ್ರಭಾಸ್​ ಭಾಗದ ಶೂಟಿಂಗ್​ ಎಲ್ಲಾ ಮುಗಿದಿರುವುದರಿಂದ ಪ್ರಭಾಸ್​ ಸೆಟ್​ನಿಂದ ಹೊರನಡೆದಿದ್ದಾರೆ. ಈ ಬಗ್ಗೆ ಚಿತ್ರದ ನಿರ್ದೇಶಕ ರಾಜಮೌಳಿ ಭಾವುಕತೆಯಿಂದಲೇ ಟ್ವಿಟ್ ಮಾಡಿದ್ದಾರೆ. ಮೂರುವರೆ ವರ್ಷಗಳ ಮಹಾ ಪಯಣ ಕೊನೆಗೊಂಡಿದೆ. ಧನ್ಯವಾದಗಳು ಡಾರ್ಲಿಂಗ್​. ಈ ಪ್ರಾಜೆಕ್ಟ್​ ಮೇಲೆ ನಿನ್ನಷ್ಟು ನಂಬಿಕೆ ಇಟ್ಟವರು ಬೇರೆ ಯಾರು ಇಲ್ಲ. ಹ್ಯಾಟ್ಸ್​ ಅಪ್​ ಪ್ರಭಾಸ್​ ಎಂದು ರಾಜಮೌಳಿ ಟ್ವಿಟ್​ ಮಾಡಿದ್ದಾರೆ. ಬಾಹುಬಲಿ ಚಿತ್ರಕ್ಕಾಗಿ ಪ್ರಭಾಸ್​ ಕಳೆದ ಮೂರುವರೆ ವರ್ಷಗಳಿಂದ ಯಾವುದೇ ಚಿತ್ರದಲ್ಲಿ ಕಾಣಿಸಿಕೊಂಡಿರಲಿಲ್ಲ. ಬಾಹುಬಲಿ ಚಿತ್ರದ ಮೇಲೆ ಅಪಾರ ನಂಬಿಕೆಯನ್ನಿಟ್ಟುಕೊಂಡಿರುವ ಪ್ರಭಾಸ್​ ಬದ್ಧತೆಯನ್ನು ಪ್ರಶ್ನೆ ಮಾಡುವಂಗಿಲ್ಲ. ಏಪ್ರಿಲ್ 28ರಂದು ಬಿಡುಗಡೆಯಾಗಲಿರುವ ಬಾಹುಬಲಿ ಚಿತ್ರದ ಪ್ರಚಾರಕ್ಕಾಗಿ ನಿರ್ದೇಶಕ ರಾಜಮೌಳಿ ಎಲ್ಲಾ ರೀತಿಯ ಪ್ಲಾನ್​ಗಳನ್ನು ಮಾಡಿಕೊಂಡಿದ್ದಾರೆ. ಅಲ್ಲದೆ ಚಿತ್ರದ ಪ್ರಚಾರಕ್ಕಾಗಿ ಬಾಲಿವುಡ್ ಬಾದ್​ಶಾ ಶಾರೂಕ್​ ಖಾನ್​ರನ್ನು ಬಳಸಿಕೊಳ್ಳಲು ಮುಂದಾಗಿದ್ದಾರೆ. ಜನವರಿ 25 ರಂದು ಬಿಡುಗಡೆಯಾಗಲಿರುವ ರಯೀಸ್​ ಚಿತ್ರದ ಬಿಡುಗಡೆಯ ವೇಳೆ ಬಾಹುಬಲಿ -2 ಚಿತ್ರದ ಟೀಸರ್ ಬಿಡುಗಡೆ ಮಾಡುವ ಪ್ಲಾನ್ ರಾಜಮೌಳಿಯವರದ್ದು. ಇನ್ನೊಂದೆಡೆ, ಪ್ರಭಾಸ್​ ಚಿತ್ರತಂಡದಿಂದ ಹೊರಬಂದಿರುವುದರಿಂದ ಬಾಹುಬಲಿ -3 ಚಿತ್ರದ ನಾಯಕ ಯಾರು ಅನ್ನೋದು ಈಗ ಪ್ರಶ್ನೆಯಾಗಿ ಕಾಡುತ್ತಿದೆ.

0

Leave a Reply

Your email address will not be published. Required fields are marked *