ಬಾಹುಬಲಿ ಅಂದ್ರೆ ದೇವಸೇನಾಗೆ ಅಷ್ಟೊಂದು ಗೌರವಾನಾ..?

ತೆಲುಗು ಚಿತ್ರರಂಗದಲ್ಲಿ ಮೋಸ್ಟ್​ ಫೇವರೀಟ್​ ಜೋಡಿ, ಸಖತ್​ ಕ್ಯೂಟ್​ ಜೋಡಿ ಅಂದ್ರೆ ವೆರಿ ಗಾರ್ಜಿಯಸ್​ ಅನುಷ್ಕಾ ಶೆಟ್ಟಿ ಹಾಗೂ ಹಾಂಡ್ಸಮ್​ ಹಂಕ್​ ಪ್ರಭಾಸ್​. ಇವರಿಬ್ಬರ ಹೈಟ್​, ಪರ್ಸನಾಲಿಟಿ, ಕೆಮಿಸ್ಟ್ರೀಗೆ ಪ್ರೇಕ್ಷಕರು ಕ್ಲೀನ್​ ಬೋಲ್ಡ್​​. ಲುಕ್, ಸ್ಟೈಲ್​, ಆಕ್ಟಿಂಗ್, ಡೆಡಿಕೇಷನ್​ನಲ್ಲಿ ಪ್ರಭಾಸ್​ ತುಂಬಾನೇ ಪ್ರತಿಭಾನ್ವಿತ ನಟ. ತೆಲುಗು ಚಿತ್ರರಂಗದ ಸೂಪರ್​ ಸ್ಟಾರ್​. ಮಿರ್ಚಿ, ಡಾರ್ಲಿಂಗ್, ಬಿಲ್ಲಾ ಹೀಗೆ ಸಾಕಷ್ಟು ಜನಪ್ರಿಯ ಚಿತ್ರಗಳನ್ನ ನೀಡಿ ಖ್ಯಾತಿ ಪಡೆದಿರುವ ಹೀರೋ. ಇನ್ನು ಅನಷ್ಕಾ ಶೆಟ್ಟಿ ಕೂಡ ಆಕ್ಟಿಂಗ್​ನಲ್ಲಿ ಯಾರಿಗೇನು ಕಮ್ಮಿಯಿಲ್ಲ. ರೊಮ್ಯಾನ್ಸ್​, ಆಕ್ಷನ್​, ಸೆಂಟಿಮೆಂಟ್​ ಹೀಗೆ ಎಲ್ಲದರಲ್ಲಿಯೂ ನುಂಗಿ ನೀರುಕುಡಿಯುವಂತಹ ನಟನೆ​ ಮಾಡ್ತಾರೆ ಈ ಬೆಡಗಿ. ಹೀಗಾಗಿ ತೆಲುಗು ಚಿತ್ರರಂಗದಲ್ಲಿ ಇವರಿಬ್ಬರದ್ದು ಹೇಳಿ ಮಾಡಿಸಿದ ಸೂಪರ್​ ಜೋಡಿ ಎಂಬ ಟಾಕ್​ ಇದೆ. ಬಾಹುಬಲಿ ಚಿತ್ರಕ್ಕುಮೊದಲೇ ಯಾವುದಾದ್ರು ನಿರ್ದೇಶಕರು ಪ್ರಬಾಸ್​ನ ಹೀರೋ ಆಗಿ ಸಲೆಕ್ಟ್​ ಮಾಡುದ್ರೆ ಮುಗೀತು, ಹೀರೋಯಿನ್​ ಆಗಿ ಅನುಷ್ಕಾ ಫಿಕ್ಸ್​. ನಿರ್ದೇಶಕರು ಸಲೆಕ್ಟ್​ ಮಾಡೋದಿರ್ಲಿ , ಅಭಿಮಾನಿಗಳೆ ಫಿಕ್ಸ್​ ಮಾಡ್ಬಿಟ್ತಿದ್ರು. ಅಷ್ಟೊಂದು ಕ್ರೇಜ್​ ಕ್ರಿಯೇಟ್​ ಮಾಡಿದ್ವು ಈ ಜೋಡಿ.

ಬಿಲ್ಲಾ ಚಿತ್ರದಿಂದ ಹಿಡಿದು ಬಾಹುಬಲಿವರೆಗೂ ಸತತ ಐದು ಚಿತ್ರಗಳಲ್ಲೂ ಬ್ಯಾಕ್​ ಟು ಬ್ಯಾಕ್​ ಸಕ್ಸಸ್​ ಕಂಡ್ರು ಅನುಷ್ಕಾ ಹಾಗೂ ಪ್ರಭಾಸ್​. ಈ ಜೋಡಿ ಎಷ್ಟು ಫೆಮಸ್​ ಆಗಿತ್ತು ಅಂದ್ರೆ, ಇವರಿಬ್ರ ಸಿನಿಮಾಗಳಲ್ಲೀನ ಕೆಮಿಸ್ಟ್ರೀ ನೋಡಿ ಮದ್ವೆ ಆಗ್ತಾರೆ ಅನ್ನೋ ವದಂತಿಗಳು ಹರಿದಾಡ್ತಾ ಇದ್ವು. ಇದೀಗ ಹೊಸ ನ್ಯೂಸ್​ ಕೂಡ ಈ ವರದಂತಿಗೆ ಪುಷ್ಟಿ ಕೊಟ್ಟಂತಿದೆ. ಅನುಷ್ಕಾಗೆ ಬಾಲಿವುಡ್ ನಿಂದ ಸಾಕಷ್ಟು ಬಾರಿ ಬುಲಾವ್​ ಬಂದಿದೆ. ನಟಿಯರಿಗೆ ಬಾಲಿವುಡ್​ ಫ್ಲೈಟ್​ ಏರುವ ಚಾನ್ಸ್​ ಸಿಕ್ಕರೇ ಯಾರ್ತಾನೇ ಬಿಡ್ತಾರೆ ಹೇಳಿ. ಆದ್ರೆ ಅನುಷ್ಕಾ ಮಾತ್ರ ತನ್ನ ನೆಚ್ಚಿನ ಫ್ರೆಂಡ್​ ಪ್ರಭಾಸ್​ ಗೋಸ್ಕರ ಈ ಚಾನ್ಸ್​​ ಮಿಸ್​ ಮಾಡಿಕೊಂಡಿದ್ದಾರೆ. ದೊಡ್ಡ ದೊಡ್ಡ ಪ್ರಜೆಕ್ಟ್​ಗಳನ್ನು ಕೈ ಬಿಟ್ಟಿದ್ದಾರೆ ಈ ಬೆಡಗಿ… ಕಾರಣ ಪ್ರಭಾಸ್​ ಹೇಳಿದ ಮಾತಿನಿಂದ..ಸದ್ಯ ಪ್ರಭಾಸ್​ ಈಗ ಸಾಹೋ ಚಿತ್ರದಲ್ಲಿ ಬ್ಯೂಸಿ ಆಗಿದ್ದು, ಬಾಲಿವುಡ್​ ಆಫರ್​ ಸಿಕ್ಕಿರುವ ವಿಷ್ಯವನ್ನ ಅನುಷ್ಕಾ ಪ್ರಭಾಸ್​ ಬಳಿ ಹೇಳಿದ್ದಾರೆ. ಆದ್ರೇ ಈ ಹಾಂಡಸಂ ಹಂಕ್​ ಅನುಷ್ಕಾಗೆ ಒಟ್ಟಿಗೆ ಬಾಲಿವುಡ್​ ಸ್ಕ್ರೀನ್​ ಶೇರ್​ ಮಾಡೋಣ ಅಲ್ಲಿವರೆಗೂ ವೇಯ್ಟ್​ ಮಾಡು ಅಂದಿದ್ದಾರಂತೆ. ಹೀಗಾಗಿ ಬಾಲಿವುಡ್​ನಲ್ಲಿ ಸಿನಿಮಾ ಮಾಡೋದ್ರಿದ್ರೆ ಫಸ್ಟ್​ ಫಿಲ್ಮ್​ ಪ್ರಭಾಸ್​ ಜೊತೆನೆ ಮಾಡಬೇಕೆನ್ನುವುದು ಅನುಷ್ಕಾ ಬಯಕೆ.ಹೀಗಾಗಿ ಮತ್ತೊಮ್ಮೆ ಇವರಿಬ್ಬರ ಮೇಲೆ ರೂಮರ್ಸ್​ ಸ್ಟಾರ್ಟ್​ ಆಗಿದ್ದು, ಅಭಿಮಾನಿಗಳು ಮಾತ್ರ ಇಷ್ಟೊಂದು ಅಂಡರ್ಸ್ಟಾಂಡಿಂಗ್​ ಚನ್ನಾಗಿದೆ. ರಿಯಲ್​ ಲೈಫ್​ನಲ್ಲೂ ಒಂದಾಗ್ಲೀ ಅಂತ ಆಶಿಸ್ತಿದ್ದಾರೆ..

ರೆನಿಟ ಮೆಂಡೋನ್ಸಾ ಫಿಲ್ಮ್​ ಬ್ಯೂರೊ ಸುದ್ದಿಟಿವಿ

0

Leave a Reply

Your email address will not be published. Required fields are marked *