ಈಶ್ವರಪ್ಪ, ಆದಿತ್ಯನಾಥ್ ಕುರಿತು ಸಿಎಂ ಟ್ವೀಟ್

ಬೆಂಗಳೂರು: ಬಿಜೆಪಿ ಕಾರ್ಯಕರ್ತರಿಗೆ ಸುಳ್ಳೋಪಳ್ಳೋ ಹೇಳಿ ಎಂದಿದ್ದ ವಿಡಿಯೋ ಮತ್ತು ಸ್ವತಃ ತಾವು ತಮ್ಮ ಪಕ್ಷದ ಕಾರ್ಯಕರ್ತರಿಗೆ ನೀಡಿರುವ ಕರೆಯ ವಿಡಿಯೋವನ್ನು ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಸರ್, ದಯಮಾಡಿ ನಾನು ನನ್ನ ಪಕ್ಷದ ಕಾರ್ಯಕರ್ತರಿಗೆ ನೀಡಿರುವ ಸಲಹೆಯನ್ನು ನೋಡಿ. ಜೊತೆಗೆ ನಿಮ್ಮ ಸುಳ್ಳುಗಳಿಂದ ನಿಮ್ಮ ಅನುಯಾಯಿ ಕೆ ಎಸ್ ಈಶ್ವರಪ್ಪ ಅವರ ಮೇಲೆ ಆಗಿರುವ ಪ್ರಭಾವವನ್ನು ನೋಡಿ. ಅವರು ಬಿಜೆಪಿ ಕಾರ್ಯಕರ್ತರಿಗೆ ಜನರಿಗೆ ಸುಳ್ಳು ಹೇಳಿ ಎಂದು ಕರೆ ನೀಡಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.

ಉತ್ತರಪ್ರದೇಶದಲ್ಲಿ 64 ಜನ ಧೂಳಿನ ಚಂಡಮಾರುತದಿಂದ ಬಲಿಯಾಗಿರುವ ಕುರಿತು ಸಿಎಂ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದಾರೆ. 64 ಜನ ಉತ್ತರಪ್ರದೇಶದಲ್ಲಿ ಸಾವಿಗೀಡಾಗಿದ್ದಾರೆ. ಮಡಿದವರ ಕುಟುಂಬಕ್ಕೆ ಭಾವಪೂರ್ಣ ಶ್ರದ್ಧಾಂಜಲಿ ಎಂದು ಸಿಎಂ ಹೇಳಿದ್ದಾರೆ. ನಿಮ್ಮ ಸಿಎಂ ಕರ್ನಾಟಕದಲ್ಲಿದ್ದಾರೆ. ಅವರು ಶೀಘ್ರದಲ್ಲೇ ಯುಪಿಗೆ ಮರಳುತ್ತಾರೆ. ತಮ್ಮ ಕಾರ್ಯವನ್ನು ನೆರವೇರೆಸುತ್ತಾರೆ ಎನ್ನುವ ಮೂಲಕ ಉತ್ತರಪ್ರದೇಶ ಸಿಎಂ ಆದಿತ್ಯನಾಥ್ ಕಾಲೆಳೆದಿದ್ದಾರೆ. ಇಂದು ರಾಜ್ಯದ ಶಿರಸಿ ಸೇರಿದಂತೆ ಅನೇಕ ಕಡೆ ಆದಿತ್ಯನಾಥ್ ಪಕ್ಷದ ಅಭ್ಯರ್ಥಿಗಳ ಪರವಾಗಿ ಮತ ಯಾಚಿಸಿದ್ದರು.

0

Leave a Reply

Your email address will not be published. Required fields are marked *