ಭಯೋತ್ಪಾದನೆ ನಿಗ್ರಹಕ್ಕೆ 11 ಅಂಶಗಲ ಕಾರ್ಯಸೂಚಿ ನೀಡಿದ ಪ್ರಧಾನಿ

ಹ್ಯಾಂಬರ್ಗ್​​: ಜಿ – 20 ಶೃಂಗ ಸಭೆಯಲ್ಲಿ ಭಯೋತ್ಪಾದನೆ ನಿಗ್ರಹಕ್ಕೆ 11 ಅಂಶಗಳ ಕಾರ್ಯಸೂಚಿಯನ್ನು ಪ್ರಧಾನಿ ನರೇಂದ್ರ ಮೋದಿ ನೀಡಿದ್ದಾರೆ. ಈ ಮೂಲಕ ದೇಶ ಭಯೋತ್ಪಾದನೆ ವಿರೋಧಿ ಹೋರಾಟಕ್ಕೆ ಬೆಂಬಲ ನೀಡುತ್ತದೆ ಎಂಬ ಸಂದೇಶವನ್ನು ರವಾನಿಸಿದರು. ಅಲ್ಲದೇ, ನೆರೆಯ ಪಾಕಿಸ್ತಾನಕ್ಕೆ ಪರೋಕ್ಷವಾಗಿ ಸಂದೇಶವನ್ನು ನೀಡಿದರು.

ಭಯೋತ್ಪಾದನೆ ನಾವು ಎದುರಿಸುತ್ತಿರುವ ಗಂಭೀರವಾದ ಸವಾಲು. ಈ ವಿಷಯವನ್ನು ಅರಿತಿರುವ ಜರ್ಮನಿಯ ಚಾನ್ಸಲರ್ ಅಂಜೆಲಾ ಮರ್ಕಲ್ ಭಯೋತ್ಪಾದನೆ ವಿಷಯವನ್ನು ಆಯ್ಕೆ ಮಾಡಿದ್ದಾರೆ ಎಂದರು. 11 ಅಂಶಗಳನ್ನು ವಿಶ್ವ ಸಮುದಾಯದ ಮುಂದಿಟ್ಟ ಪ್ರಧಾನಿ ನರೇಂದ್ರ ಮೋದಿ, ಜಿ – 20 ದೇಶಗಳಿಂದ ಸಹಕಾರವನ್ನು ಕೋರಿದರು.

ಭಯೋತ್ಪಾದನೆ ನಿಗ್ರಹಕ್ಕೆ ಪ್ರಧಾನಿ ಕಾರ್ಯಸೂಚಿ

ಭಯೋತ್ಪಾದನೆ ಬೆಂಬಲಿಸುವ ದೇಶದ ವಿರುದ್ಧ ಕಠಿಣ ಕ್ರಮ
ಜಿ – 20 ಸದಸ್ಯತ್ವದಿಂದ ಅಂಥ ದೇಶಗಳಿಗೆ ನಿರ್ಬಂಧ
ಶಂಕಿತ ಭಯೋತ್ಪಾದಕರು, ಬೆಂಬಲಿಗರ ಪಟ್ಟಿ ಪರಸ್ಪರ ಹಸ್ತಾಂತರ
ಗಡೀಪಾರಿಗೆ ನಿಯಮಗಳ ಸರಳೀಕರಣ
ಅಂತಾರಾಷ್ಟ್ರೀಯ ಭಯೋತ್ಪಾದನೆ ವ್ಯಾಪಕ ಕ್ರಮ ಕೈಗೊಳ್ಳುವುದು
ವಿಶ್ವಸಂಸ್ಥೆಯಲ್ಲಿ ಈ ಕುರಿತು ನಿರ್ಣಯ ಅಂಗೀಕರಿಸುವುದು
ಭಯೋತ್ಪಾದನೆಗೆ ನೀಡುವ ಆರ್ಥಿಕ ಬೆಂಬಲದ ನಿಯಂತ್ರಣ
ಸ್ಫೋಟಕಗಳ ನಿಯಂತ್ರಣಕ್ಕೆ ಕಾರ್ಯಪಡೆ ರಚನೆ

0

Leave a Reply

Your email address will not be published. Required fields are marked *