ಪೇಜಾವರ ಶ್ರೀಗಳಿಗೆ ಹರ್ನಿಯಾ ಶಸ್ತ್ರಚಿಕಿತ್ಸೆ ನಡೆಯಲಿದೆ….

ಇಂದು ಪೇಜಾವರ ಶ್ರೀಗಳಿಗೆ ಹರ್ನಿಯಾ ಶಸ್ತ್ರಚಿಕಿತ್ಸೆ ನಡೆಯಲಿದೆ. ಉಡುಪಿ ತಾಲೂಕಿನ ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ಆಪರೇಷನ್ ಮಾಡಲಾಗ್ತಿದೆ. ಈ ಬಗ್ಗೆ ಮಾತನಾಡಿದ ವಿಶ್ವೇಶ್ವ ತೀರ್ಥ ಶ್ರೀಗಳು, ಇಷ್ಟರವರೆಗೆ ಹೆಚ್ಚು ತೊಂದರೆಯಾಗಿಲ್ಲ, ಇತ್ತೀಚೆಗೆ ಸ್ವಲ್ಪ ತೊಂದರೆ ಜಾಸ್ತಿಯಾಗಿದೆ. ವೈದ್ಯರ ಸಲಹೆಯಂತೆ ಉಪಶಮನಕ್ಕೆ ಮುಂದಾಗಿದ್ದೇನೆ. ಯಾರೂ ಆತಂಕ ಪಡಬೇಕಾದ ಅಗತ್ಯ ಇಲ್ಲ.ವೈದ್ಯರು ವಿಶೇಷ ಗಮನ ಕೊಟ್ಟು ಶಸ್ತ್ರಚಿಕಿತ್ಸೆ ಮಾಡುವುದಾಗಿ ಹೇಳಿದ್ದಾರೆ ಎಂದ್ರು. ಇನ್ನು ತಮ್ಮ ಅನುಪಸ್ಥಿತಿಯಲ್ಲಿ ಶ್ರೀಕೃಷ್ಣನ ಪೂಜೆಯನ್ನ ಕಿರಿಯ ಶ್ರೀಗಳು ಮಾಡ್ತಾರೆ ಎಂದು ಇದೇ ವೇಳೆ ತಿಳಿಸಿದ್ದಾರೆ.

0

Leave a Reply

Your email address will not be published. Required fields are marked *