ಗೃಹ ಸಚಿವ ಪರಮೇಶ್ವರ್ ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ಸಭೆ

ಬೆಂಗಳೂರಿನ ಕಮ್ಮನಹಳ್ಳಿಯಲ್ಲಿ ನಡೆಯ ಯುವತಿ ಮೇಲಿನ ದೌರ್ಜನ್ಯ ಬಳಿಕ ನಗರದಲ್ಲಿನ ಭದ್ರತಾ ಪ್ರಕ್ರೀಯೆಗಳನ್ನ ಇನ್ನಷ್ಟು ಬಲಪಡಿಸಲು ಗೃಹ ಇಲಾಖೆ ಮುಂದಾಗಿದೆ. ಈ ನಿಟ್ಟಿನಲ್ಲಿ ಇಂದು ಗೃಹ ಸಚಿವ ಪರಮೇಶ್ವರ್ ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ಸಭೆ ಆರಂಭಿಸಿದ್ದಾರೆ.ಪೊಲೀಸ್ ಮಹಾನಿರ್ದೇಶಕರು ಸೇರಿದಂತೆ ಇತರ ಪ್ರಮುಖ ಪೊಲೀಸ್ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದಾರೆ. ಈ ಸಭೆಯಲ್ಲಿ ,ರಾತ್ರಿ ವೇಳೆ ಪೊಲೀಸ್ ಗಸ್ತು ಹೆಚ್ಚಿಸೋದು , ಗಸ್ತಿಗಾಗಿ ಹೆಚ್ಚುವರಿ ವಾಹನಗಳ ನಿಯೋಜನೆ, ಮಫ್ತಿಯಲ್ಲೂ ಹೆಚ್ಚುವರಿ ಸಿಬ್ಬಂದಿಗಳ ನಿಯೋಜನೆ,ರಾತ್ರಿ ಪಾಳಿ ಇರುವ ಕಂಪನಿಗಳ ಬಳಿ ಮತ್ತಷ್ಟು ಭದ್ರತೆ , ರಾತ್ರಿ ವೇಳೆ ಅನಗತ್ಯವಾಗಿ ಸಂಚರಿಸುವವರಿಗೆ ಬ್ರೇಕ್ ಇವುಗಳ ಜೊತೆಗೆ ರಾತ್ರಿ ಪಾಳಿಗೆ ಹಿರಿಯ ಅಧಿಕಾರಿಗಳದ್ದೇ ಮೇಲ್ವಿಚಾರಣೆ ಹೊರಿಸೋದರ ಬಗ್ಗೆ ಚರ್ಚೆ ನಡೆಯುತ್ತಿದೆ.

0

Leave a Reply

Your email address will not be published. Required fields are marked *