75ನೇ ಭಾರತ ಬಿಟ್ಟು ತೊಲಗಿ ದಿನಾಚರಣೆ: ಸಂಸತ್ತಿನಲ್ಲಿ ವಿಶೇಷ ಅಧಿವೇಶನ

ನವದೆಹಲಿ: 75ನೇ ವರ್ಷದ ಭಾರತ ಬಿಟ್ಟು ತೊಲಗಿ ದಿನಾಚರಣೆ ಪ್ರಯುಕ್ತ ಮುಂಗಾರು ಅಧಿವೇಶನದ 17ನೇ ದಿನದ ಉಭಯ ಸದನಗಳ ಕಲಾಪವನ್ನು ರದ್ದುಗೊಳಿಸಲಾಗಿದೆ. ಸಂಸತ್ತಿನ ಉಭಯ ಸದನಗಳಲ್ಲಿ ಇಂದು ವಿಶೇಷ ಅಧಿವೇಶನ ನಡೆಯಲಿದೆ.ರಾಜ್ಯಸಭೆಯಲ್ಲಿ ಹಣಕಾಸು ಸಚಿವ ಅರುಣ್ ಜೇಟ್ಲಿ ಮತ್ತು ಲೋಕಸಭೆಯಲ್ಲಿ ವಿದೇಶಾಂಗ ಸಚಿವ ಸುಷ್ಮಾ ಸ್ವರಾಜ್ ನೇತೃತ್ವದಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಇಂದಿನ ಪ್ರಶ್ನೋತ್ತರ ಮತ್ತು ಶೂನ್ಯವೇಳೆಯ ಕಲಾಪಗಳನ್ನು ಕೂಡ ರದ್ದುಗೊಳಿಸಲಾಗಿದೆ. ಆಡಳಿತ ಮತ್ತು ವಿಪಕ್ಷಗಳ ಸದಸ್ಯರು ಕಾರ್ಯಕ್ರಮದಲ್ಲಿ ಭಾಗಿಯಾಗುವ ನಿರೀಕ್ಷೆ ಇದೆ. ಎರಡನೇ ಮಹಾಯುದ್ಧದ ವೇಳೆ ಆಗಸ್ಟ್ 8, 1942ರಂದು ಬ್ರಿಟಿಷರೇ ಭಾರತ ಬಿಟ್ಟು ತೊಲಗಿ ಆಂದೋಲನವನ್ನು ದೇಶದಾದ್ಯಂತ ನಡೆಸಲಾಗಿತ್ತು. ಈ ಹಿನ್ನೆಲೆಯಲ್ಲಿ ಇಂದು 75ನೇ ವರ್ಷಾಚರಣೆಯನ್ನು ಆಯೋಜಿಸಲಾಗಿದೆ.

0

Leave a Reply

Your email address will not be published. Required fields are marked *