ಪರಿನಿರ್ವಾಹಣ ದಿನವನ್ನು ಮೌಢ್ಯ ವಿರೋಧಿ ಸಂಕಲ್ಪ ದಿನವನ್ನಾಗಿ ಆಚರಣೆ

ಬೆಳಗಾವಿ: ಡಾ.ಬಿ.ಆರ್ ಅಂಬೇಡ್ಕರ್ ಮಹಾ ಪರಿನಿರ್ವಾಹಣ ದಿನದ ಹಿನ್ನೆಲೆ ಶಾಸಕ ಸತೀಶ ಜಾರಿಕಿಹೊಳಿ ನೇತೃತ್ವದಲ್ಲಿ ಮಾನವ ಬಂಧುತ್ವ ವೇದಿಕೆಯಿಂದ ಬೆಳಗಾವಿಯ ಸದಾಶಿವ ನಗರದ ಸ್ಮಶಾನದಲ್ಲಿ ಕಾರ್ಯಕ್ರಮ ನಡೆಸಲಾಯಿತು. ಸ್ಮಶಾನದಲ್ಲಿ ನಿರಂತರ 24 ಗಂಟೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಪರಿನಿರ್ವಾಹಣ ದಿನವನ್ನು ಮೌಢ್ಯ ವಿರೋಧಿ ಸಂಕಲ್ಪ ದಿನವನ್ನಾಗಿ ಆಚರಣೆ ಮಾಡಲಾಯಿತು. ಬಹುಭಾಷ ನಟ ಪ್ರಕಾಶ ರೈ, ಶಾಸಕರಾದ ವೈ ಎಸ್ ವಿ ದತ್ತಾ, ಕೆ‌.ಎಸ್ ಪುಟ್ಟಣ್ಣಯ್ಯ ಸೇರಿ ವಿವಿಧ ಮಠಾಧೀಶರು ಭಾಗಿಯಾಗಿದ್ದರು. ಸತೀಶ ಜಾರಕಿಹೊಳಿ ರಾತ್ರಿ ಸ್ಮಶಾನದಲ್ಲಿ ವಾಸ್ತವ್ಯ ಹೂಡಿದ್ದರು.

0

Leave a Reply

Your email address will not be published. Required fields are marked *