ಚಿಕ್ಕಬಳ್ಳಾಪುರ: ಆ ಮುದ್ದಾದ ಹೆಣ್ಣು ಮಗುವನ್ನ ನೋಡಿದ್ರೇ ಎಂತವರಿಗೂ ಒಂದ್ಸಲ ಮುದ್ದಾಡಬೇಕು ಅನಿಸುತ್ತೆ ಆದರೆ ಆದ್ಯಾಕೋ ಏನೋ ಹೆತ್ತವರಿಗೆ ಮಾತ್ರ ಆ ಮಗು ಬೇಡವಾಗಿ ಹೋಗಿದೆ. 4 ತಿಂಗಳ ಮುದ್ದಾದ ಹಾಲುಗಲ್ಲದ ಹಸುಗೂಸನ್ನ ಹೆತ್ತವರು ಅಂಗಡಿ ಬಳಿ ಬಿಟ್ಟು ಹೋಗಿರುವ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ಪೋಶೆಟ್ಟಿಹಳ್ಳಿ ಬಳಿ ನಡೆದಿದೆ. ಗ್ರಾಮದ ಪೆಟ್ಟಿಗೆ ಅಂಗಡಿಯೊಂದರ ಬಳಿ 4 ತಿಂಗಳ ಹಸುಗೂಸನ್ನ ಬಟ್ಟೆಯಲ್ಲಿ ಸುತ್ತಿ ಮಗುವನ್ನ ಯಾರೋ ಬಿಟ್ಟು ಹೋಗಿದ್ದು, ಲಕ್ಷ್ಮೀನಾರಾಯಣಪ್ಪ ಎಂಬುವವರು ಮಗುವಿನ ಆಕ್ರಂದನ ಕೇಳಿ ಮಗುವನ್ನ ರಕ್ಷಣೆ ಮಾಡಿದ್ದಾರೆ. ಸದ್ಯ ಮಗುವನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖಾಧಿಕಾರಿಗಳು ವಶಕ್ಕೆ ಪಡೆದಿದ್ದು, ಮಗುವಿಗೆ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯಲ್ಲಿ ಆರೈಕೆ ಮಾಡಲಾಗುತ್ತಿದೆ.
ಹೆತ್ತವರಿಗೆ ಬೇಡವಾದ ಹಸುಗೂಸು..!!
Posted on by mustakahmed