ರಾಜ್ಯ ಬಜೆಟ್ 2017 – 18: ಪಂಚಾಯತ್​ರಾಜ್​

ಪಂಚಾಯತ್​ರಾಜ್​
ನಮ್ಮ ಗ್ರಾಮ ನಮ್ಮ ಯೋಜನೆಗೆ 20 ಕೋಟಿ ರೂ.
ಗ್ರಾಮೀಣ ನೀರು ಸರಬರಾಜು ಯೋಜನೆಗೆ 2,200 ಕೋಟಿ ರೂ.
2,500 ಶುದ್ಧ ಕುಡಿಯುವ ನೀರು ಘಟಕಗಳ ಸ್ಥಾಪನೆ
ಗ್ರಾಮ ನೈರ್ಮಲ್ಯ ಹಾಗೂ ಬಯಲು ಬಹಿರ್ದೆಸೆ ಮುಕ್ತ ಯೋಜನೆಗೆ 1,585 ಕೋಟಿ ರೂ.
ಗ್ರಾಮೀಣ ಕುಟುಂಬಗಳಿಗೆ ಶೌಚಾಲಯಕ್ಕಾಗಿ ಪ್ರೋತ್ಸಾಹಧನ
ಸಾಮೂಹಿಕ ಶೌಚಾಲಯ ಸಂಕೀರ್ಣಗಳ ನಿರ್ಮಾಣಕ್ಕೆ ತೀರ್ಮಾನ
ಗ್ರಾಮ ಸ್ವಚ್ಛತೆ ಕಾಪಾಡಲು ಘನ ಹಾಗೂ ದ್ರವ ತ್ಯಾಜ್ಯಗಳ ನಿರ್ವಹಣೆ
ಗ್ರಾಮೀಣ ರಸ್ತೆ ಅಭಿವೃದ್ಧಿ ಸಂಸ್ಥೆ ಮಾರ್ಗಸೂಚಿಯಂತೆ ಗ್ರಾಮೀಣ ರಸ್ತೆ ನಿರ್ವಹಣಾ ನೀತಿ ಜಾರಿ
ನಮ್ಮ ಹೊಲ ನಮ್ಮ ದಾರಿ ಯೋಜನೆಯಡಿ ಗ್ರಾಮಗಳಿಗೆ 25 ಕಿ.ಮೀ ಉದ್ದದ ಮಣ್ಣಿನ ರಸ್ತೆ ಅಭಿವೃದ್ಧಿಗೆ 100 ಕೋಟಿ
1000 ಗ್ರಾಮಗಳ ಸರ್ವತೋಮುಖ ಅಭಿವೃದ್ಧಿಗೆ ಮುಖ್ಯಮಂತ್ರಿಗಳ 21 ಅಂಶಗಳ ಕಾರ್ಯಕ್ರಮ ಜಾರಿ
ಮುಖ್ಯಮಂತ್ರಿಗಳ ಗ್ರಾಮ ವಿಕಾಸ್ ಯೋಜನೆಯಡಿ 1000 ಗ್ರಾಮಗಳಿಗೆ ಪ್ರತಿ ಗ್ರಾಮಕ್ಕೆ 1 ಕೋಟಿ ರೂ. ಅನುದಾನ
ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆ 4ನೇ ಹಂತ ಜಾರಿಗೆ 1,765 ಕೋಟಿ ರೂ.
ಈ ಯೋಜನೆಯಡಿ 4,386 ಕಿ.ಮೀ ಗ್ರಾಮೀಣ ರಸ್ತೆಗಳ ಅಭಿವೃದ್ಧಿ
1000 ಲೀಟರ್​ ಸಾಮರ್ಥ್ಯದ ಜೈವಿಕ ಇಂಧನ ಉತ್ಪಾದನಾ ಘಟಕಕ್ಕೆ 5 ಕೋಟಿ ರೂ.
ಕೇಂದ್ರೀಯ ಜೈವಿಕ ಇಂಧನ ಗುಣಮಟ್ಟ ಪರೀಕ್ಷಾ ಪ್ರಯೋಗಾಲಯ ಆರಂಭಿಸಲು ಪ್ರಸ್ತಾಪ

ನರೇಗಾ
ಮಹಾತ್ಮಾಗಾಂಧಿ ನರೇಗಾ ಯೋಜನೆಯಡಿ ವಿವಿಧ ಯೊಜನೆಗಳು
12 ಕೊಟಿ ಮಾನವ ದಿನಗಳ ಸೃಜನೆ ಗುರಿ
ಗ್ರಾಮಗಳಲ್ಲಿ ಸಮುದಾಯ ದನದ ಕೊಟ್ಟಿಗೆ ನಿರ್ಮಾಣಕ್ಕೆ ಅವಕಾಶ
ಪ್ರತಿ ತಾಲೂಕಿಗೆ ಕನಿಷ್ಠ 200 ತೋಟಗಾರಿಕೆ ಕ್ಷೇತ್ರದ ಅಭಿವೃದ್ಧಿ ಕಾಮಗಾರಿಗಳ ಅನುಷ್ಠಾನ
ಜಿಲ್ಲಾ ಪಂಚಾಯತ್ ಅಭಿವೃದ್ಧಿ ಅನುದಾನ 2 ಕೋಟಿಯಿಂದ 4 ಕೋಟಿಗೆ ಹೆಚ್ಚಳ
ಜಿಲ್ಲಾ, ತಾಲೂಕು, ಗ್ರಾಮ ಪಂಚಾಯತ್​ ಚುನಾಯಿತ ಸದಸ್ಯರ ಗೌರವಧನ ಹೆಚ್ಚಳ
ಜಿಲ್ಲಾ ಪಂಚಾಯತ್​ ಸದಸ್ಯರು -3000 – 5000 ರೂ.
ತಾಲೂಕು ಪಂಚಾಯಿತಿ ಅಧ್ಯಕ್ಷರು – 4,500 – 6,000 ರೂ.
ತಾಲೂಕು ಪಂಚಾಯಿತಿ ಉಪಾಧ್ಯಕ್ಷರು – 3,000 – 4,000 ರೂ.
ತಾಲೂಕು ಪಂಚಾಯ್ತಿ ಸದಸ್ಯರು –  1,500 – 3000 ರೂ.
ಗ್ರಾಮ ಪಂಚಾಯ್ತಿ ಅಧ್ಯಕ್ಷರು- 1,000 – 3,000 ರೂ.
ಗ್ರಾಮ ಪಂಚಾಯ್ತಿ ಉಪಾಧ್ಯಕ್ಷರು – 600 – 2000 ರೂ.
ಗ್ರಾಮ ಪಂಚಾಯ್ತಿ ಸದಸ್ಯರು – 500 – 1000 ರೂ.
2017-18 ರ ಸಾಲಿನಲ್ಲಿ ಪಂಚಾಯತ್​ರಾಜ್​ ಗ್ರಾಮೀಣಾಭಿವೃದ್ಧಿ ಇಲಾಖೆಗೆ 14,061 ಕೋಟಿ

0

Leave a Reply

Your email address will not be published. Required fields are marked *