ಪಾಕ್​ ಸೇನೆಯಿಂದ ಮತ್ತೆ ಕದನವಿರಾಮ ಉಲ್ಲಂಘನೆ…

ಜಮ್ಮು ಕಾಶ್ಮೀರದ ಗಡಿ ಭಾಗದ ಪೂಂಚ್​ ಸೆಕ್ಟರ್​ನಲ್ಲಿ ಪಾಕ್​ ಸೇನೆ ಕದನವಿರಾಮ ಉಲ್ಲಂಘಿಸಿ ಅಪ್ರಚೋದಿತ ಗುಂಡಿನ ದಾಳಿ ನಡೆಸಿದೆ. ಈ ದಾಳಿಯಲ್ಲಿ ಇಬ್ಬರು ನಾಗರಿಕರು ಪತಿ,ಪತ್ನಿ ಸಾವನ್ನಪ್ಪಿದ್ದು, ಮಕ್ಕಳು ಗಾಯಗೊಂಡಿದ್ದಾರೆ.. ಪಾಕ್​ ಗುಂಡಿನ ದಾಳಿಗೆ ಭಾರತೀಯ ಸೇನೆ ಪ್ರತಿದಾಳಿ ನಡೆಸಿ ತಕ್ಕ ಪ್ರತ್ಯುತ್ತರ ನೀಡಿದೆ.ಬುರ್ಹಾನ್ ವಾನಿ ಎನ್​​ಕೌಂಟರ್​ ಆಗಿ ಇಂದಿಗೆ ಒಂದು ವರ್ಷ. ಈ ಹಿನ್ನೆಲೆ ಗಡಿಯಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿತ್ತು. ಈ ಹತ್ಯೆಯಿಂದ ರೊಚ್ಚಿಗೆದ್ದಿರುವ ಪಾಕ್ ಮತ್ತೊಮ್ಮೆ ತನ್ನ ಪುಂಡಾಟವನ್ನು ಮೆರೆದಿದೆ. ಇಂದು ಬೆಳಗ್ಗೆ ಬಂಡಿಪೋರ್‌ನಲ್ಲಿ ಯೋಧರು ಗಸ್ತು ತಿರುಗುತ್ತಿದ್ದ ವೇಳೆ ಉಗ್ರರು ದಾಳಿ ನಡೆಸಿದ್ದಾರೆ. ಘಟನೆಯಲ್ಲಿ ಮೂವರು ಯೋಧರಿಗೆ ಗಾಯಗಳಾಗಿವೆ. ವಾನಿ ಹತ್ಯೆಗೆ ಪ್ರತಿಕಾರವಾಗಿ ಸೇನೆ ಮೇಲೆ ದಾಳಿ ನಡೆಸಲಾಗಿದೆ. ಉಗ್ರರು ಹಾಗೂ ಯೋಧರ ನಡುವೆ ಮುಂದುವರಿದ ಗುಂಡಿನ ಚಕಮಕಿ ಮುಂದುವರಿದಿದೆ.

0

Leave a Reply

Your email address will not be published. Required fields are marked *