ಲಖ್ನೋ: ಪಾಕಿಸ್ತಾನದಿಂದ ಬಂದವರು ಉತ್ತರಪ್ರದೇಶದ ಕಾಸ್ಗಂಜ್ನಲ್ಲಿ ನಡೆದ ಗಲಭೆಗೆ ಕಾರಣರಾಗಿದ್ದಾರೆ ಎಂದು ಬಿಜೆಪಿ ನಾಯಕ ವಿನಯ್ ಕಟಿಯಾರ್ ಹೇಳಿದ್ದಾರೆ. ಪಾಕ್ ಬೆಂಬಲಿಗರು ಪಾಕ್ ಧ್ವಜವನ್ನು ಪ್ರದರ್ಶಿಸಿದ್ದಾರೆ ಮತ್ತು ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗಿದ್ದಾರೆ ಎಂದ ಅವರು, ಇದೇ ಜನ ನಮ್ಮ ಕಾರ್ಯಕರ್ತನೊಬ್ಬನನ್ನು ಹತ್ಯೆಗೈದಿದ್ದಾರೆ ಎಂದರು. ಜೊತೆಗೆ, ಇವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಇನ್ನು ಜಮ್ಮು ಕಾಶ್ಮೀರದ ಜನತೆ ಭಯೋತ್ಪಾದರೊಂದಿಗೆ ಗುರುತಿಸಿಕೊಳ್ಳಬಾರದು. ಶೊಪೇನ್ನಲ್ಲಿ ಹತ್ಯೆಯಾಗಿರುವ ವ್ಯಕ್ತಿ ನಾಗರಿಕನೋ ಅಥವಾ ಭಯೋತ್ಪಾದಕನೋ ಎಂಬುದು ಗೊತ್ತಿಲ್ಲ. ಪ್ರತಿದಿನ ಕಾಶ್ಮೀರದಲ್ಲಿ ಭಯೋತ್ಪಾದಕ ಕೃತ್ಯಗಳು ಘಟಿಸುತ್ತಿವೆ ಎಂದರು.