ಪಾಕಿಸ್ತಾನಿ ಪತ್ರಕರ್ತೆ ಮರವಿ ಮನೆ ದರೋಡೆ

ಇಸ್ಲಮಬಾದ್: ಪಾಕಿಸ್ತಾನಿ ಪತ್ರಕರ್ತೆ ಮರವಿ ಸಿರ್ಮ್ಡ್ ಮನೆಯಲ್ಲಿ ಮತ್ತೊಮ್ಮೆ ಲೂಟಿಯಾಗಿದೆ. 2010ರಲ್ಲಿ ಲೂಟಿ ಮಾಡಿದ್ದ ಮಾದರಿಯಲ್ಲೇ ಈ ಬಾರಿ ಕೂಡ ಲೂಟಿ ಮಾಡಲಾಗಿದೆ ಎಂದು ಸ್ಥಳೀಯ ಸುದ್ದಿ ಸಂಸ್ಥೆಗಳು ವರದಿ ಮಾಡಿವೆ. ಕುಟುಂಬಸ್ಥರೊಡನೆ ಪ್ರವಾಸಕ್ಕೆ ತೆರಳಿದ ಸಂದರ್ಭದಲ್ಲಿ ಈ ಘಟನೆ ನಡೆದಿದ್ದು, ಎರಡು ಲ್ಯಾಪ್​ಟಾಪ್, ಒಂದು ಸ್ಮಾರ್ಟ್ ಫೋನ್, ಕುಟುಂಬಸ್ಥರ ಪಾಸ್​ಪೋರ್ಟ್​​ಗಳು ಮ್ತು ಅನೇಕ ದಾಖಲೆಗಳು ನಾಪತ್ತೆಯಾಗಿವೆ.

ಈ ಕುರಿತು ಪ್ರತಿಕ್ರಿಯಿಸಿರುವ ಮರವಿ ಸಿರ್ಮ್ಡ್ ನನ್ನ ಮನೆಯಲ್ಲಿ ಬೆಲೆ ಬಾಳುವ ಯಾವುದೇ ವಸ್ತುಗಳಿಲ್ಲ. ಬೆಲೆ ಬಾಳುವ ಆಭರಣಗಳು ಕೂಡ ಇಲ್ಲಿ ಇಲ್ಲ. ಈ ಕುರಿತು ಪೊಲೀಸರಿಗೆ ದೂರು ನೀಡಿದ್ದೇನೆ ಎಂದಿದ್ದಾರೆ. ಜೊತೆಗೆ, ಲೂಟಿ ವೇಳೆ ತಮ್ಮ ವಿವಹಾದ ಸಂದರ್ಭದ ಉಂಗುರ ಮತ್ತು ಎರಡು ಬಳೆಗಳು ಕೂಡ ಕಾಣೆಯಾಗಿವೆ ಎಂದು ಅವರು ಹೇಳಿದ್ದಾರೆ.

0

Leave a Reply

Your email address will not be published. Required fields are marked *