ಭಾರತದ ಉಪ ಕಮೀಷನ​​ರ್​ಗೆ ನೊಟೀಸ್ ನೀಡಿದ ಪಾಕಿಸ್ತಾನ

ಎಲ್​ಒಸಿಯಲ್ಲಿ ಕದನ ವಿರಾಮ ಉಲ್ಲಂಘನೆ ಆರೋಪ
ಭಾರತದ ಉಪ ಹೈಕಮೀಷನರ್​​ಗೆ ಸಮನ್ಸ್ ನೀಡಿದ ಪಾಕ್
ಭಾರತದ ವಿರುದ್ಧ ಕಿಡಿಗೇಡಿತನಕ್ಕೆ ಮುಂದಾದ ಪಾಕಿಸ್ತಾನ

ದೆಹಲಿ: ಇಂಡೋ – ಪಾಕ್ ಗಡಿ ನಿಯಂತ್ರಣ ರೇಖೆಯ ಬಳಿ ಭಾರತ ಕದನ ವಿರಾಮ ಉಲ್ಲಂಘನೆ ಮಾಡುತ್ತಿದೆ ಎಂದು ಆರೋಪಿಸಿರುವ ಪಾಕಿಸ್ತಾನ ಭಾರತದ ಉಪ ಹೈಕಮೀಷನರ್​​ಗೆ ಸಮನ್ಸ್ ನೀಡಿದೆ. ಈ ಮೂಲಕ ಭಾರತದ ವಿರುದ್ಧ ಕಿಡಿಗೇಡಿತನಕ್ಕೆ ಮುಂದಾಗಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಜಮ್ಮುವಿನ ಎಡಿಜಿ ಕಮಲ್​​ನಾಥ್ ಚೌಬೆ, ಕದನವಿರಾಮ ಉಲ್ಲಂಘನೆ ಕುರಿತು ದ್ವಿಪಕ್ಷೀಯ ಮಾತುಕತೆ ಮೂಲಕ ಚರ್ಚಿಸಬೇಕು. ನಾವು ಕದನ ವಿರಾಮ ಕುರಿತ ಪಾವಿತ್ರ್ಯತೆಯನ್ನು ಕಾಪಾಡಿಕೊಂಡಿದ್ದೇವೆ. ಆದರೆ, ಪಾಕಿಸ್ತಾನವೇ ಕದನ ವಿರಾಮವನ್ನು ಉಲ್ಲಂಘಿಸಿದೆ ಎಂದು ಅವರು ಹೇಳಿದ್ದಾರೆ.

ಅಲ್ಲದೇ, ಕದನ ವಿರಾಮ ಉಲ್ಲಂಘನೆ ನಡೆಯಲಿ ಅಥವಾ ನಡೆಯದಿರಲಿ, ನಾವು ಎಲ್ಲ ಪರಿಸ್ಥಿತಿಗಳ ನಿರ್ವಹಣೆಗೆ ಸನ್ನದ್ಧರಾಗಿದ್ದೇವೆ. ಗಡಿಯ ಸಾರ್ವಭೌಮತೆ ಕಾಪಾಡಲು ಅಗತ್ಯವಾದ ಎಲ್ಲ ಸಲಕರಣೆಗಳನ್ನೂ ಸನ್ನದ್ಧಗೊಳಿಸಲಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

0

Leave a Reply

Your email address will not be published. Required fields are marked *