ಪದ್ಮಾವತ್​ ಸಿನಿಮಾ ಬಿಡುಗಡೆಗೆ ಮುಗಿಯದ ಸಂಕಷ್ಟ:ಮಹಾರಾಷ್ಟ್ರದಲ್ಲಿ ಸೆನ್ಸಾರ್​ ಬೋರ್ಡ್​ ವಿರುದ್ಧ ಪ್ರತಿಭಟನೆ

ಮಹಾರಾಷ್ಟ್ರ:ಪದ್ಮಾವತ್​ ಸಿನಿಮಾ ಬಿಡುಗಡೆ ಹೊಸ್ತಿಲಲ್ಲೇ ಇರುವಾಗ ಇದೀಗ ಮತ್ತೆ ಪ್ರತಿಭಟನೆಯ ಬಿಸಿ ತಟ್ಟಿದೆ.ಈಗಾಗಲೇ ರಾಜಸ್ಥಾನ,ಹಿಮಾಚಲ ಪ್ರದೇಶ,ಮಧ್ಯಪ್ರದೇಶ ಸರ್ಕಾರ ಪದ್ಮಾವತ್​ ಸಿನಿಮಾ ಪ್ರಸಾರಕ್ಕೆ ನಿಷೇಧ ಹಾಕಿದೆ..ಅದ್ರ ಬೆನ್ನಲ್ಲೇ ಮಹಾರಾಷ್ಟ್ರದಲ್ಲೂ ಸಿನಿಮಾ ಬಿಡುಗಡೆಗೆ ತೀವ್ರ ವಿರೋಧ ವ್ಯಕ್ತವಾಗಿದೆ.ಮಹಾರಾಷ್ಟ್ರದಲ್ಲಿ ಸಿನಿಮಾ ಬಿಡುಗಡೆ ವಿರೋಧಿಸಿ ರಜಪೂತ ಕರ್ಣಿ ಸೇನಾ ಪ್ರತಿಭಟನೆ ನಡೆಸ್ತು.
ಕರ್ಣಿ ಸೇನಾ ಮುಖ್ಯಸ್ಥ ಲೋಕೇಂದ್ರ ಸಿಂಗ್​ ಕಲ್ವಿ ನೇತೃತ್ವದಲ್ಲಿ ಕರ್ಣಿ ಸೇನಾ ಸೆನ್ಸಾರ್​ ಬೋರ್ಡ್​​ ಮುಂದೆ ಘೇರಾವ್​ ಹಾಕಿ ಪ್ರತಿಭಟನೆ ನಡೆಸ್ತು.ಸಲಹಾ ಸಮಿತಿ ವಿರೋಧದ ನಡುವೆಯೂ ಸೆನ್ಸಾರ್​ ಕೆಲ ಸಣ್ಣ ಪುಟ್ಟ ದೃಶ್ಯಗಳಿಗೆ ಕತ್ತರಿ ಹಾಕಲು ಸೂಚಿಸಿ,ಸಿನಿಮಾಗೆ ಯು/ಎ ಪ್ರಮಾಣ ಪತ್ರ ನೀಡಿದೆ.ಸೆನ್ಸಾರ್​ ಬೋರ್ಡ್​​ನ ಈ ನಡೆ ವಿರುದ್ಧ ಕರ್ಣಿ ಸೇನಾ ಪ್ರತಿಭಟನೆ ಮಾಡುವುದರ ಮೂಲಕ ಆಕ್ರೋಶ ಹೊರಹಾಕಿದೆ.ಇದೇ ಜನವರಿ 25 ರಂದು ಪದ್ಮಾವತ್​ ಸಿನಿಮಾ ತೆರೆ ಕಾಣಲು ಸಿದ್ಧವಾಗಿದ್ದು,ಪದ್ಮಾವತಿ ಶೀರ್ಷಿಕೆ ಬದಲಾದ್ರೂ ಮಾತ್ರ ಸಂಕಷ್ಟ ಮಾತ್ರ ತಪ್ಪುತ್ತಿಲ್ಲ.

0

Leave a Reply

Your email address will not be published. Required fields are marked *