ಅಳುವ ಶಿಶುವಿನ ಅಗತ್ಯತೆಗಳೇನು ಗೊತ್ತಾ..??

ಶಿಶುವು ಹುಟ್ಟಿದಾಗಿನಿಂದ ಅಳುವುದು ಸಾಮಾನ್ಯ. ಆದರೆ ಏನೂ ಅರಿಯದ ನಿಮ್ಮ ಶಿಶುವಿಗೂ ಕೆಲವು ಅಗತ್ಯತೆಗಳು ಇರುತ್ತವೆ ಎಂಬುದು ನಿಮಗೆ ಗೊತ್ತಾ. ಹೌದು ಯಾವುದೇ ಮನಷ್ಯ ಆಗಲಿ ತನ್ನ ಅಗತ್ಯತೆಗಳು ಪೂರ್ಣಗೊಳ್ಳದಿದ್ದಾಗ ಮರಗುವುದು ಸಹಜ, ಕೆಲವರು ಅಳುವುದೂ ಉಂಟು. ನಿಮ್ಮ ಅಗತ್ಯತೆ, ಅವಶ್ಯಕತೆಗಳನ್ನು ನೀವು ಇನ್ನೊಬ್ಬರಿಗೆ ಹೇಳಿಯಾದರೂ ಪೂರ್ಣಗೊಳಿಸಿಕೊಳ್ಳುತ್ತಿರಿ. ಆದರೆ ಮಾತನಾಡಲು ಬರದ ಶಿಶುವು ಅಳುವುದರ ಮೂಲಕ ತನಗೆ ಏನೋ ಬೇಕು ಎಂಬುವುದನ್ನು ಸೂಚಿಸುತ್ತದೆ. ನಿಮ್ಮ ಮಗುವು ಅಳುವಾಗ ನೀವು ಮಾಡಬೇಕಾದ ಕೆಲವು ಅಂಶಗಳು ಇಲ್ಲಿವೆ ನೋಡಿ.

1. ದೈಹಿಕ ಸ್ಪರ್ಶ ಒದಗಿಸಿ: ಕೆಲವು ಬಾರಿ ಶಿಶುಗಳು ಸುಮ್ಮನೆ ಅಳುವುದುಂಟು, ಏಕೆಂದರೆ ಒಂಭತ್ತು ತಿಂಗಳುಗಳ ಕಾಲ ಅನುಭವಿಸಿದ ತಾಯಿಯ ಸ್ಪರ್ಶ ದೂರವಾದಾದ. ಈ ಸಮಯದಲ್ಲಿ ಶಿಶುವಿಗೆ ತಾಯಿಯ ಸ್ಪರ್ಶದ ಅಗತ್ಯತೆ ಇರುತ್ತದೆ.

2. ಪ್ರಾಮಾಣಿಕವಾಗಿ ಪ್ರತಿಕ್ರಿಯಿಸಿ: ಮಗುವು ತನ್ನ ಸುತ್ತಲಿನ ಜಗತ್ತಿನೊಂದಿಗೆ ಸಂವಹನ ನಡೆಸಲು ಇರುವ ಏಕೈಕ ಮಾರ್ಗವೆಂದರೆ ಅದು ಅಳುವುದು. ನಿಮ್ಮ ಮಗುವಿನ ಅಳುವಿಗೆ ನೀವು ತಕ್ಷಣ ಪ್ರತಿಕ್ರಿಯಿಸಿದಾಗ, ನೀವು ಮಗುವಿನ ಸುತ್ತಲಿನ ಪ್ರದೇಶದ ಮೇಲೆ ನಿಯಂತ್ರಣವನ್ನು ನೀಡುತ್ತೀರಿ ಹಾಗೂ ಶಿಶುವಿಗೆ ನೀವು ಮುಖ್ಯವೆಂದು ಅದು ಭಾವಿಸುತ್ತದೆ.

3. ಶಿಶು ಹಸಿದಿದ್ದರೆ ಹಾಲುಣಿಸಿ: ಮಗುವು ಹಸಿದಾಗ ಅಳುವುದಕ್ಕೆ ಶುರು ಮಾಡುತ್ತದೆ ಆ ಸಮಯದಲ್ಲಿ ಹಾಳುಣಿಸಿ ಈ ಸಮಯದಲ್ಲಿ ಮಗುವಿಗೆ ಶಾಂತಿಯ ಜೊತೆಗೆ ತಾಯಿಯ ಸ್ಪರ್ಶವೂ ಸಿಗುತ್ತದೆ.

4. ಮಗುವಿನ ಗಮನ ಸೆಳೆಯಿರಿ: ಮಗುವು ಅಳುವಾಗ ನಿರಂತರ ಮತ್ತು ಏಕರೂಪದ ಶಬ್ದವನ್ನು ಮಾಡಿ ಇದು ಮಗುವಿನ ಗಮನ ಸೆಳೆಯುವುದಕ್ಕೆ ಸಹಾಯ ಮಾಡುತ್ತದೆ. ಉದಾಹರಣೆಗೆ: ಹೃದಯ ಬಡಿತದ ಶಬ್ಧ, ಮಳೆ, ವ್ಯಾಕ್ಯೂಮ್​​ ಕ್ಲೀನರ್​​, ಮಿಕ್ಸರ್ ಮುಂತಾದ ಯಾವುದೇ ಸ್ಥಿರ ಶಬ್ದ ಮಾಡಿ.

5. ನಿಮ್ಮ ಮಗುವು ಒಂದೇ ಪರಿಸರದಲ್ಲಿ ಇದ್ದು ಆಯಾಸಗೊಂಡಿರುವ ಸಾಧ್ಯತೆ ಇರುತ್ತದೆ ಹಾಗಾಗಿ ನಿಮ್ಮ ಮಗುವನ್ನು ಹೊರಗಿನ ಪರಿಸರದಲ್ಲಿ ಎತ್ತುಕೊಂಡು ಹೋಗಿ.

6. ನಿಮ್ಮ ಮಗುವು ಅಳುವಾಗ ಸಮಾಧಾನಗೊಳಿಸುವ ಎಲ್ಲಾ ಪ್ರಯತ್ನಗಳನ್ನು ಮಾಡಿದರೂ ಅಳು ನಿಲ್ಲಿಸದಿದ್ದರೆ, ನಿಮ್ಮ ವೈದ್ಯರನ್ನು ಸಂಪರ್ಕಿಸಿ.

0

Leave a Reply

Your email address will not be published. Required fields are marked *