ಅರಮನೆ ಮೈದಾನದಲ್ಲಿ ‘ನಮ್ಮ ಕ್ಷೇತ್ರ-ನಮ್ಮ ಹೊಣೆ’ ಸಭೆ

ಬೆಂಗಳೂರು: ಮುಂಬರುವ ವಿಧಾನಸಭಾ ಚುನಾವಣೆ ಹಿನ್ನೆಲೆ ಕಾಂಗ್ರೆಸ್ ನಾಯಕರಿಂದ‌ ಮಹತ್ವದ ಸಿದ್ಧತಾ ಸಭೆ ಆರಂಭವಾಗಿದೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ನಮ್ಮ ಕ್ಷೇತ್ರ – ನಮ್ಮ ಹೊಣೆ ಎಂಬ ಹೆಸರಿನಲ್ಲಿ ಸಭೆ ನಡೆಯುತ್ತಿದೆ. ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್‌ ನೇತೃತ್ವದಲ್ಲಿ ಸಭೆ ನಡೆಯುತ್ತಿದ್ದು, ಸಭೆಯಲ್ಲಿ ಜಿಲ್ಲಾಧ್ಯಕ್ಷರುಗಳು, ಬ್ಲಾಕ್ ಸಮಿತಿ ಅಧ್ಯಕ್ಷರುಗಳು, ಕೆಪಿಸಿಸಿ ಪದಾಧಿಕಾರಿಗಳು, ಕಾರ್ಯಕಾರಿಣಿ ಸದಸ್ಯರುಗಳು, ಭಾಗಿಯಾಗಿದ್ದಾರೆ. ಚುನಾವಣೆಯ ರಣತಂತ್ರ, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯ ರಾಜ್ಯ ಪ್ರವಾಸ, ಬಿಜೆಪಿ -ಜೆಡಿಎಸ್ ತಂತ್ರಕ್ಕೆ ಪ್ರತಿತಂತ್ರ, ಮತದಾರರ ಮನವೊಲಿಕೆಗೆ ಮಾಡಿಕೊಳ್ಳಬೇಕಾದ ಕಾರ್ಯ, ಸರ್ಕಾರದ ಅಭಿವೃದ್ಧಿ ಕಾರ್ಯಗಳ ಪ್ರಚಾರ, ಪಕ್ಷ ಸಂಘಟನೆಯ ಕುರಿತು ಸಭೆಯಲ್ಲಿ ಚರ್ಚೆ ನಡೆಸಲಾಗುತ್ತದೆ.

0

Leave a Reply

Your email address will not be published. Required fields are marked *