ಕುಟುಂಬ ರಾಜಕಾರಣ ವಿರೋಧಿಸಿ ಜೆಡಿಎಸ್ ವಕ್ತಾರ ಹುದ್ದೆಗೆ ರಾಜಿನಾಮೆ ನೀಡಿದ ರೋಹಿತ್ ಸಿಂಹ

ಬೆಂಗಳೂರು: ರಾಮನಗರದಲ್ಲಿ ಸಿಎಂ ಎಚ್​​ ಡಿ ಕುಮಾರಸ್ವಾಮಿ ಪತ್ನಿ ಅನಿತಾ ಕುಮಾರಸ್ವಾಮಿ ಸ್ಪರ್ಧಿಸುವ ವಿಚಾರದಲ್ಲಿ ಸ್ವಪಕ್ಷದಲ್ಲೇ ಅಸಮಾಧಾನ ವ್ಯಕ್ತವಾಗಿದ್ದು, ವಕ್ತಾರ ರೋಹಿತ್ ಸಿಂಹ ತಮ್ಮ ಹುದ್ದೆಗೆ ರಾಜಿನಾಮೆ ನೀಡಿರುವುದಾಗಿ ಫೇಸ್​ಬುಕ್​ನಲ್ಲಿ ಘೋಷಿಸಿದ್ದಾರೆ. ತಮ್ಮ ಫೇಸ್​​ಬುಕ್​​ನಲ್ಲಿ, ರಾಮನಗರದ ಅಭ್ಯರ್ಥಿಯ ಆಯ್ಕೆ ತೀವ್ರ ಬೇಸರ ಉಂಟುಮಾಡಿದೆ. ಕುಟುಂಬ ರಾಜಕಾರಣ ಯಾವುದೇ ಕಾರಣಕ್ಕೂ ಸಮರ್ಥನೆ ಮಾಡಲು ಆಗುವುದಿಲ್ಲ, ವಯಕ್ತಿಕವಾಗಿ ನಾನು ಮಾಡುವುದಿಲ್ಲ ಎಂದಿರುವ ಅವರು, ಕುಟುಂಬ ರಾಜಕಾರಣ ಸರ್ಕಾರಗಳ ವಿಫಲ ನೀತಿಗಳಿಗಿಂತಲೂ ಕ್ರೂರ, ವಿಷಾದನೀಯ ಮತ್ತು ಪ್ರಜಾ ಪ್ರಭುತ್ವಕ್ಕೆ ಮಾರಕ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಲದೇ., ಪ್ರತಿಭೆ, ಅರ್ಹತೆ ಮತ್ತು ಅಷ್ಟೇ ಯೋಗ್ಯತೆ ಇರುವ ಜನರು ಸಿಗುವುದಿಲ್ಲ ಎಂಬುದು ಸುಳ್ಳು. ಒಂದು ಹಂತದ ಕುಟುಂಬ ರಾಜಕಾರಣ ಈಗ ಸಾಮಾನ್ಯವಾಗಿದೆ. ಆದರೆ ಎರಡನೇ ಮತ್ತು ಮೂರನೇ ಹಂತ ಸಮಾಜದ ಸ್ವಾಸ್ಥ್ಯಕ್ಕೆ ಉತ್ತಮವಲ್ಲ. ಆದ್ದರಿಂದ ಇನ್ನು ಮುಂದೆ ನಾನು ವಕ್ತಾರನಾಗಿ ಮುಂದುವರೆಯದಿರಲು ನಿರ್ಧರಿಸಿದ್ದೇನೆ ಎಂದು ಬರೆದುಕೊಂಡಿದ್ದಾರೆ.

0

Leave a Reply

Your email address will not be published. Required fields are marked *