ಆಪರೇಷನ್​ ಕಮಲಕ್ಕೆ ‘ವಿಘ್ನ’..!

ಬಿಜೆಪಿಯಲ್ಲಿ ಮರಳಿ ಅಧಿಕಾರಕ್ಕೆ ಬರುವ ಪ್ರಯತ್ನಗಳ ಹಿನ್ನೆಲೆ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪರ ಪ್ರಯತ್ನಗಳಿಗೆ ಸಂಘ ಪರಿವಾರ ವಿರೋಧ. ಆಪರೇಷನ್ ಕಮಲ ನಡೆಸಲು ಆರೆಸೆಸ್ ತೀವ್ರ ವಿರೋಧ, ಮುಂಬರುವ ಲೋಕಸಭೆ ಚುನಾವಣೆಗೆ ಆಪರೇಷನ್ ಕಮಲದಿಂದ ಕೆಟ್ಟ ಹೆಸರು ಬರಲಿದೆ. ಮೊದಲು ಲೋಕಸಭೆ ಚುನಾವಣೆಯಲ್ಲಿ ಹೆಚ್ಚು ಸ್ಥಾನಗಳನ್ನು ಗೆಲ್ಲುವತ್ತ ಗಮನ ಕೊಡಿ, ಬೆಳಗಾವಿ ಕಾಂಗ್ರೆಸ್ ನಾಯಕರು ಅಷ್ಟು ಸುಲಭಕ್ಕೆ ಪಕ್ಷಕ್ಕೆ ಬರುವವರಲ್ಲ. ನಿಮ್ಮ ನೆಪದಲ್ಲಿ ಜಾರಕಿಹೊಳಿ ಸಹೋದರರು ತಮ್ಮ ಬೇಳೆ ಬೇಯಿಸಿಕೊಳ್ತಿದ್ದಾರೆ, ಜಾರಕಿಹೊಳಿ ಸಹೋದರರನ್ನು ನಂಬಿ ಎಡವಬೇಡಿ, ಬಿ.ಎಸ್.ಯಡಿಯೂರಪ್ಪರಿಗೆ ಸಂಘ ಪರಿವಾರದಿಂದ ಸಂದೇಶ. ಸಂಘಕ್ಕೆ ನಿಷ್ಠರಾಗಿರುವವರಿಗೂ ಆರೆಸೆಸ್ ಸೂಚನೆ, ಯಡಿಯೂರಪ್ಪರವರಿಂದ ಅಂತರ ಕಾಯ್ದುಕೊಂಡಿರುವ ಅನಂತ್ ಕುಮಾರ್, ಡಿವಿಎಸ್, ಅನಂತ್ ಕುಮಾರ್ ಹೆಗಡೆ, ಈಶ್ವರಪ್ಪ, ಸಿ.ಟಿ.ರವಿ.

0

Leave a Reply

Your email address will not be published. Required fields are marked *