ಆಪರೇಶನ್ ಕಮಲದ ಮುನ್ಸೂಚನೆ ನೀಡಿದ್ರು ಬಿ.ಎಸ್. ಯಡಿಯೂರಪ್ಪ

ಕಾಂಗ್ರೆಸ್​ ಮುಖಂಡ ಸಿ.ಎಂ.ಲಿಂಗಪ್ಪ ಪುತ್ರ ಬಿಜೆಪಿಗೆ, ಬಿಜೆಪಿ ಸೇರ್ಪಡೆಯಾದ ಸಿಎಂ ಲಿಂಗಪ್ಪ ಪುತ್ರ ಚಂದ್ರಶೇಖರ್​. ಯಡಿಯೂರಪ್ಪ ನಿವಾಸದಲ್ಲಿ ಬಿಜೆಪಿಗೆ ಸೇರ್ಪಡೆ, ರಾಮನಗರ ವಿಧಾನಸಭೆ ಉಪಚುನಾವಣೆಗೆ ಸ್ಪರ್ಧೆ ಸಾಧ್ಯತೆ. ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿರುವ ಸಿಎಂ ಲಿಂಗಪ್ಪ ಪುತ್ರ, ಯೋಗೇಶ್ವರ್​ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಯಾದ ಚಂದ್ರಶೇಖರ್​.

ಆಪರೇಶನ್ ಕಮಲದ ಮುನ್ಸೂಚನೆ ನೀಡಿದ್ರು ಬಿ.ಎಸ್.ವೈ, ಚಂದ್ರಶೇಖರ್ ಜೊತೆ ಇನ್ನಷ್ಟು ಜನ ಬಿಜೆಪಿ ಸೇರ್ಪಡೆ. ಸಧ್ಯದಲ್ಲೇ ರಾಮನಗರದಲ್ಲಿ ಬೃಹತ್ ಸಭೆ, ಲಿಂಗಪ್ಪ ಪುತ್ರ ಚಂದ್ರಶೇಖರ್ ಯಾವುದೇ ಷರತ್ತುಗಳಿಲ್ಲದೇ ಬಿಜೆಪಿ ಸೇರಿದ್ದಾರೆ. ಚಂದ್ರಶೇಖರ್ ಬಿಜೆಪಿ ಸೇರ್ಪಡೆ ವೇಳೆ ಯಡಿಯೂರಪ್ಪ ಹೇಳಿಕೆ, ಚಂದ್ರಶೇಖರ್ ಸೇರ್ಪಡೆಯಿಂದ ರಾಮನಗರ ಜಿಲ್ಲೆಯಲ್ಲಿ ಅನೆಬಲ ಬಂದಂತಾಗಿದೆ. ಉಪಚುನಾವಣೆಯಲ್ಲಿ ಬಿಜೆಪಿಯನ್ನು ಗೆಲ್ಲಿಸಲು ಚಂದ್ರಶೇಖರ್ ಸೇರ್ಪಡೆ ಸಹಕಾರಿ, ರಾಮನಗರದಲ್ಲಿ ನಮಗೆ ಸಮರ್ಥ ಅಭ್ಯರ್ಥಿಗಳಿದ್ದಾರೆ. ಮಂಡ್ಯದಲ್ಲಿ ಸೂಕ್ತ ಅಭ್ಯರ್ಥಿ ಇಲ್ಲ, ಕಾಂಗ್ರೆಸ್ ಮತ್ತು ಜೆಡಿಎಸ್ ನ ಹಲವು ಮುಖಂಡರು ಬಿಜೆಪಿಗೆ ಬರಲು ಮುಂದಾಗಿದ್ದಾರೆ. ಮೂರು ದಿನಗಳಲ್ಲಿ ಮಂಡ್ಯ ಮತ್ತು ರಾಮನಗರ ಕ್ಷೇತ್ರಗಳ ಅಭ್ಯರ್ಥಿ ಆಯ್ಕೆ ಘೋಷಣೆ, ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಹೇಳಿಕೆ.

ಕಾಂಗ್ರೆಸ್ ನಲ್ಲಿ ನನಗೆ ಉಸಿರು ಕಟ್ಟಿದ ವಾತಾವರಣವಿತ್ತು, ಜೆಡಿಎಸ್ ಜತೆ ಮಾಡಿಕೊಂಡ ಅಪವಿತ್ರ ಮೈತ್ರಿಯ ಬಗ್ಗೆ ಬೇಸರವಿತ್ತು, ಹಾಗಾಗಿ ಬಿಜೆಪಿಗೆ ಸೇರ್ಪಡೆಯಾಗಿದ್ದೇನೆ, ಬಿಜೆಪಿ ಸೇರ್ಪಡೆ ಬಳಿಕ ಚಂದ್ರಶೇಖರ್ ಹೇಳಿಕೆ. ನಾನು ಬಿಜೆಪಿ ಸೇರುವುದಕ್ಕೆ ತಂದೆ ಲಿಂಗಪ್ಪನವರ ಆಶೀರ್ವಾದ ಇದ್ದೇ ಇದೆ, ಆದರೆ ಅವರು ಮಾತ್ರ ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಬರುವುದಿಲ್ಲ. ನಾನು ಬಿಜೆಪಿ ಸೇರುತ್ತಿರುವುದು ನನ್ನ ವೈಯಕ್ತಿಕ ತೀರ್ಮಾನ, ಬಿಜೆಪಿ ಸೇರ್ಪಡೆ ಬಳಿಕ ಚಂದ್ರಶೇಖರ್ ಸ್ಪಷನೆ.

0

Leave a Reply

Your email address will not be published. Required fields are marked *