ನನ್ನ ಸಾವಿನ ಕುರಿತು ಸುಳ್ಳು ವದಂತಿ ಹರಡಲಾಗಿತ್ತು: ರಾಹುಲ್ ಉಪಾಧ್ಯಾಯ

ಲಖ್ನೋ: ನಾನು ಸಾವಿಗೀಡಾಗಿದ್ದೇನೆ ಎಂಬ ಸುಳ್ಳು ವದಂತಿಯನ್ನು ನನ್ನ ಸ್ನೇಹಿತನೊಬ್ಬ ಹರಡಿದ್ದ ಎಂದು ರಾಹುಲ್ ಉಪಾಧ್ಯಾಯ ಹೇಳಿದ್ದಾರೆ. ಉತ್ತರ ಪ್ರದೇಶದ ಕಾಸ್​ಗಂಜ್​​ನಲ್ಲಿ ಕೋಮುಗಲಭೆ ವೇಳೆ ಉಪಾಧ್ಯಾಯ ಸಾವಿಗೀಡಾಗಿದ್ದಾರೆ ಎಂಬ ವದಂತಿಯ ಕಾರಣದಿಂದಾಗಿ ನಿಷೇಧಾಜ್ಞೆ ಜಾರಿಗೊಳಿಸಲಾಗಿತ್ತು. ಅನೇಕ ಅಂಗಡಿ, ಮುಂಗಟ್ಟು, ಬಸ್​ಗಳು ಸೇರಿದಂತೆ ಅನೇಕ ವಾಹನಗಳು ಮನೆಗಳಿಗೂ ಬೆಂಕಿ ಹಚ್ಚಿ ಅಪಾರ ಆಸ್ತಿಪಾಸ್ತಿಗೆ ನಷ್ಟ ಉಂಟಾಗಿತ್ತು. ಸುಳ್ಳು ವದಂತಿಗಳನ್ನು ಹರಡುವುದನ್ನು ತಡೆಯುವ ಸಲುವಾಗಿ ಅಂತರ್ಜಾಲ ಸೇವೆಯನ್ನು ಕೂಡ ಸ್ಥಗಿತಗೊಳಿಸಲಾಗಿತ್ತು. ಈ ನಡುವೆ ನಿನ್ನೆ ರಾತ್ರಿ ಮತ್ತೆ ಮಾಲ್​ಗೋದಾಮ್ ರಸ್ತೆಯಲ್ಲಿ ಅಂಗಡಿಯೊಂದಕ್ಕೆ ಬೆಂಕಿ ಹಚ್ಚಲಾಗಿತ್ತು. ಇಂದು ಮುಂಜಾನೆಯಿಂದ ಅಂತರ್ಜಾಲ ಸೇವೆ ನಿರ್ಬಂಧವನ್ನು ತೆರವುಗೊಳಿಸಲಾಗಿದೆ.

ಕಾಸ್​ಗಂಜ್ ಗಲಭೆಗೆ ಕಾರಣರಾದ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಸೂರ್ಯ ಪ್ರಾತಾಪ್ ಶಾಹಿ ಹೇಳಿದ್ದಾರೆ. ಇಂಥ ಘಟನೆಗಳಲ್ಲಿ ಯಾರೊಬ್ಬರೂ ಪಾಲ್ಗೊಳ್ಳಬಾರದು ಎಂದು ಮನವಿ ಮಾಡಿಕೊಂಡಿರುವ ಅವರು, ಈ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ ಮತ್ತು ಸರ್ಕಾರ ಕಠಿಣ ಕ್ರಮ ಕೈಗೊಳ್ಳುತ್ತದೆ ಎಂದರು. ಜೊತೆಗೆ, ಈ ಘಟನೆಯನ್ನು ಕಾಶ್ಮೀರದಲ್ಲಿ ನಡೆಯುತ್ತಿರುವ ಘಟನೆಗಳೊಂದಿಗೆ ಹೋಲಿಕೆ ಮಾಡಬಾರದು ಎಂದು ಕೂಡ ಅವರು ಅಭಿಪ್ರಾಯಪಟ್ಟಿದ್ದಾರೆ.

0

Leave a Reply

Your email address will not be published. Required fields are marked *