ಒಂದು ದೇಶ ಒಂದು ತೆರಿಗೆಗೆ ಚಾಲನೆ

ನವದೆಹಲಿ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಸರಕು ಮತ್ತು ಸೇವಾ ತೆರಿಗೆ ನಿನ್ನೆ ಮಧ್ಯರಾತ್ರಿಯಿಂದ ಜಾರಿಯಾಗಿದೆ. ಸಂಸತ್ತಿನ ಸೆಂಟ್ರಲ್‌ ಹಾಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಧ್ಯರಾತ್ರಿ 12 ಗಂಟೆಗೆ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಮತ್ತು ಪ್ರಧಾನಿ ನರೇಂದ್ರ ಮೋದಿಯ ನೂತನ ತೆರಿಗೆ ವ್ಯವಸ್ಥೆಗೆ ಚಾಲನೆ ನೀಡಿದರು.ನೂತನ ತೆರಿಗೆ ಪದ್ಧತಿಯ ಜಾರಿಯಿಂದ ದೇಶದಲ್ಲಿ ಭಾರಿ ಬದಲಾವಣೆಯಾಗಲಿದೆ. ಡಿಜಿಟಲ್‌ ಮತ್ತು ಮಾಹಿತಿ ತಂತ್ರಜ್ಞಾನದಿಂದ ಜಿಎಸ್‌ಟಿ ಜಾರಿ ಸುಲಭವಾಗಲಿದೆ ಎಂದು ಪ್ರಣವ್‌ ಮುಖರ್ಜಿ ಅಭಿಪ್ರಾಯಪಟ್ಟರು. ಅಲ್ಲದೇ, ವ್ಯಾಟ್‌ ಜಾರಿ ಸಮಯದಲ್ಲಿ ಎದರಾದ ತೊಡಕಿನಂತೆಯೇ ಜಿಎಸ್​ಟಿ ಜಾರಿ ವೇಳೆಯಲ್ಲೂ ತೊಂದರೆಯಾಗಬಹುದು. ಈ ವ್ಯವಸ್ಥೆಗೆ ಒಗ್ಗಿಕೊಳ್ಳಲು ಸ್ವಲ್ಪ ಸಮಯ ಬೇಕು ಎಂದರು.

ನೂತನ ತೆರಿಗೆ ಪದ್ಧತಿಗೆ ಚಾಲನೆ ನೀಡಿದ ನಂತರ ಮಾತನಾಡಿದ ನರೇಂದ್ರ ಮೋದಿ, ಸರ್ದಾರ್‌ ವಲ್ಲಭಭಾಯ್‌ ಪಟೇಲ್ ಅವರು ಎಲ್ಲ ಸಂಸ್ಥಾನಗಳನ್ನು ಒಕ್ಕೂಟ ವ್ಯವಸ್ಥೆಗೆ ಸೇರಿಸುವ ಮೂಲಕ ಭಾರತದ ಏಕೀಕರಣಕ್ಕೆ ಕಾರಣರಾದರು. ಇಂದು ಸರಕು ಮತ್ತು ಸೇವಾ ತೆರಿಗೆಯ ಮೂಲಕ ದೇಶದ ಆರ್ಥಿಕ ಏಕೀಕರಣಕ್ಕೆ ನಾಂದಿ ಹಾಡಿದ್ದೇವೆ ಎಂದರು.

ಮೊಬೈಲ್‌ ಬಿಲ್‌ ತುಟ್ಟಿ

ಜಿಎಸ್‌ಟಿಯಿಂದಾಗಿ ಇಂದಿನಿಂದ ಮೊಬೈಲ್ ಬಿಲ್ ದುಬಾರಿಯಾಗಲಿದೆ. ಅಲ್ಲದೇ, ಪ್ರೀಪೇಯ್ಡ್​ ಚಂದಾದಾರರ ಟಾಕ್​​ಟೈಮ್​​ಗೆ ಕೂಡ ಕಡಿತವಾಗಲಿದೆ. ಇಂದಿನಿಂದ ಮೊಬೈಲ್ ಸೇವಾ ತೆರಿಗೆ ಶೇ. 15 – 18ಕ್ಕೆ ಏರಿಕೆಯಾಗಿದೆ. ಆದ್ದರಿಂದ 100 ರೂ. ರೀಚಾರ್ಜ್ ಮಾಡಿಸಿದರೆ 80 ರೂ. ಮಾತ್ರ ಟಾಕ್‌ಟೈಮ್ ಲಭ್ಯವಾಗಲಿದೆ. ಇಷ್ಟು ದಿನಗಳವರೆಗೆ 100 ರೂ.ಗೆ 83 ರೂ. ಟಾಕ್‌ಟೈಮ್ ಲಭಿಸುತ್ತಿತ್ತು. ಇದರೊಂದಿಗೆ ಪೋಸ್ಟ್​​ ಪೇಯ್ಡ್ ದರ ಕೂಡ ಏರಿಕೆಯಾಗಲಿದೆ.

ಮುಖ್ಯಾಂಶಗಳು

ಆಹಾರ ಧಾನ್ಯಗಳು ತೆರಿಗೆ ಮುಕ್ತ

ಸಕ್ಕರೆ, ಟೀ ಮುಂತಾದ ದಿನಬಳಕೆಯ ವಸ್ತುಗಳ ಮೇಲೆ ಶೇ. 5

ಬೆಣ್ಣೆ, ತುಪ್ಪ, ಮೊಬೈಲ್ ಮೇಲೆ ಶೇ. 12

ಹೇರ್ ಆಯಿಲ್, ಟೂತ್ ಪೇಸ್ಟ್ ಮಾದರಿಯ ಸರಕುಗಳ ಮೇಲೆ ಶೇ.18

ಕಾರು, ಬೈಕು, ಶಾಂಪೂ, ಪಟಾಕಿ, ಹೈರ್ ಡೈ ಮುಂತಾದ ವಸ್ತುಗಳ ಮೇಲೆ ಶೇ. 28

ಐಷಾರಾಮಿ ವಸ್ತುಗಳ ಬೆಲೆಯಲ್ಲಿ ಏರಿಕೆ 

ದಿನಬಳಕೆಯ ಶೇ 50ರಷ್ಟು ವಸ್ತುಗಳನ್ನು ತೆರಿಗೆ ವ್ಯಾಪ್ತಿಯಿಂದ ಹೊರಗಿಡಲಾಗಿದೆ
ದಿನಬಳಕೆಯ ಉಳಿದ ವಸ್ತುಗಳಿಗೆ ಶೇ 5, ಶೇ 12, ಶೇ 18ರಷ್ಟು ತೆರಿಗೆ
ಐಷಾರಾಮಿ ಮತ್ತು ಆರೋಗ್ಯಕ್ಕೆ ಹಾನಿಕಾರಕ ವಸ್ತುಗಳಿಗೆ ಶೇ. 28ರಷ್ಟು ತೆರಿಗೆ
ದೂರವಾಣಿ, ಬ್ಯಾಂಕಿಂಗ್‌ ಮತ್ತು ವಿಮಾ ಕ್ಷೇತ್ರದ ಸೇವೆಗಳು ದುಬಾರಿ
ಆರೋಗ್ಯ ಮತ್ತು ಶಿಕ್ಷಣ ಸೇವೆಗಳು ಜಿಎಸ್​​ಟಿಯಿಂದ ಮುಕ್ತ                                                   ಶೇ. 81ರಷ್ಟು ದಿನಬಳಕೆಯ ವಸ್ತುಗಳ ಮೇಲೆ ಶೇ.18ರ ಒಳಗೆ ತೆರಿಗೆ                                 ನೂತನ ವ್ಯವಸ್ಥೆಯಿಂದ ಹಳೆಯ 16 ಸ್ವರೂಪದ ಕೇಂದ್ರ ಮತ್ತು ರಾಜ್ಯ ತೆರಿಗೆಗಳ ರದ್ದು

ಜಾರಿಗೂ ಮುನ್ನ ತೆರಿಗೆ ಇಳಿಕೆ 

ಟ್ರ್ಯಾಕ್ಟರ್‌ನ ಆಯ್ದ ಬಿಡಿಭಾಗಗಳ ಮೇಲಿನ ಜಿಎಸ್‌ಟಿಯನ್ನು ಶೇ 28ರಿಂದ 18ಕ್ಕೆ ಇಳಿಸಲಾಗಿದೆ. ರಸಗೊಬ್ಬರಗಳಿಗೆ ನಿಗದಿಗೊಳಿಸಿದ್ದ ಶೇ. 12ರಷ್ಟು ತೆರಿಗೆಯನ್ನು ಶೇ. 5ಕ್ಕೆ ಇಳಿಕೆ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ. ಈ ಮೂಲಕ ರೈತರ ಮೇಲಿನ ಹೊರೆಯನ್ನು ಇಳಿಸಿದೆ.

ತೆರಿಗೆ ಮತ್ತು ವಿನಾಯಿತಿ

ಮೊತ್ತ (ಲಕ್ಷ ರೂ.ಗಳಲ್ಲಿ)                   ಪ್ರಮಾಣ

10 – 20                                     ತೆರಿಗೆ ವಿನಾಯಿತಿ (ಇದುವರೆಗೆ ವ್ಯಾಟ್‌ ಕಡ್ಡಾಯವಾಗಿತ್ತು)

20 – 75                                     ಶೇ 2.5

ವಿವಿಧ ಸೇವೆಗಳಿಗೆ ಶೇಕಡಾ 5,12, 18 ಮತ್ತು ಶೇಕಡಾ 28ರ ನಾಲ್ಕು ಹಂತದದಲ್ಲಿ ತೆರಿಗೆ ವಿಧಿಸಲಾಗುತ್ತದೆ.

ಯಾವ ವಸ್ತುಗಳಿಗೆ ಎಷ್ಟು ತೆರಿಗೆ? 
ಟೆಲಿಕಾಂ, ಹಣಕಾಸು ಸೇವೆಗಳಿಗೆ ಶೇ. 18
ಸಿನಿಮಾ ಸೇವೆಗಳಿಗೆ ಶೇ. 28
ಓಲಾ, ಉಬರ್ ಕ್ಯಾಬ್ ಗಳ ಮೇಲೆ ಶೇ. 5
ಎಸಿ ರೆಸ್ಟೋರೆಂಟ್, ಮದ್ಯ ಮಾರಾಟ ಮಾಡುವ ಬಾರ್ ಗಳಿಗೆ ಶೇಕಡಾ 18                            ಫೈವ್ ಸ್ಟಾರ್ ಹೊಟೇಲ್ ಗಳಿಗೆ ಶೇ. 28
ಆರೋಗ್ಯ ಮತ್ತು ಶಿಕ್ಷಣ ಜಿಎಸ್​​ಟಿ ಮುಕ್ತ
ವಿಮಾನಯಾನದ ಎಕಾನಮಿ ಕ್ಲಾಸ್ ಗೆ ಶೇಕಡಾ 5 ತೆರಿಗೆ
ಬ್ಯುಸಿನೆಸ್ ಕ್ಲಾಸ್ ಗೆ ಶೇಕಡಾ 12
ಮೆಟ್ರೊ, ಲೋಕಲ್ ಟ್ರೈನ್, ಧಾರ್ಮಿಕ ಪ್ರಯಾಣ, ಹಜ್ ಯಾತ್ರೆಗಳಿಗೆ ತೆರಿಗೆ ವಿನಾಯಿತಿ
ಗುತ್ತಿಗೆ ಕೆಲಸಗಳಿಗೆ ಶೇ. 12
ದಿನಕ್ಕೆ 1,000 ರೂಪಾಯಿ ದರ ವಿಧಿಸುವ ಹೊಟೇಲ್​​, ಲಾಡ್ಜ್​​ಗಳಿಗೆ ವಿನಾಯಿತಿ
ಸಾವಿರದಿಂದ ಎರಡು ಸಾವಿರ ದರ ವಿಧಿಸುವ ಹೊಟೇಲ್​​, ಲಾಡ್ಜ್​​ಗಳಿಗೆ ಶೇ. 12
2,500 – 5,000ವರೆಗಿನ ದರ ವಿಧಿಸುವ ಹೊಟೇಲ್​​, ಲಾಡ್ಜ್​​ಗಳಿಗೆ 18
5,000ಕ್ಕಿಂತ ಹೆಚ್ಚು ದರ ವಿಧಿಸುವ ಹೊಟೇಲ್​​, ಲಾಡ್ಜ್​​ಗಳಿಗೆ ಶೇ. 28
ಸಣ್ಣ ರೆಸ್ಟೋರೆಂಟ್​ಗಳಿಗೆ ಶೇ. 5
ಲಾಟರಿ ತೆರಿಗೆ ಮುಕ್ತ
ಧಾನ್ಯಗಳು, ಮೊಟ್ಟೆಗಳು ಮತ್ತು ಮಾಂಸದಂತಹ ಆಹಾರ ಪದಾರ್ಥಗಳು ತೆರಿಗೆ ಮುಕ್ತ
ಸಂಸ್ಕರಿತ ಆಹಾರ ಪದಾರ್ಥಗಳಿಗೆ ಶೇ. 12 – 28
ಬಹುತೇಕ ಸಾರಿಗೆ ಸೇವೆಗಳಿಗೆ ಶೇ. 5
ಏಸಿ ರಹಿತ ರೈಲುಗಳಿಗೆ ತೆರಿಗೆ ವಿನಾಯಿತಿ
ಏಸಿ ರೈಲು ಪ್ರಯಾಣಿಕರಿಗೆ ಶೇ. 5
ಸೋಪು, ಎಣ್ಣೆಗಳಿಗೆ ಶೇ. 18

0

Leave a Reply

Your email address will not be published. Required fields are marked *