ವಿದ್ಯುತ್ ಕಂಬಕ್ಕೆ ಬೈಕ್ ಬಡಿದು ಓರ್ವ ಸಾವು

ಮೈಸೂರು: ಬೆಂಗಳೂರು ರಸ್ತೆಯಲ್ಲಿ ಬೈಕ್ ಸವಾರನೋರ್ವ ಅಪಘಾತಕ್ಕೀಡಾಗಿ ಸಾವನ್ನಪ್ಪಿದ ಘಟನೆ ನಡೆದಿದೆ. ಮೃತನನ್ನು ಕುಶಾಲನಗರ ಟಿಬೆಟಿಯನ್ ಕಾಲನಿಯ ತೆಂಜಿನ್ ಖೆಂಟ್ಸೆ (26) ಎಂದು ಗುರುತಿಸಲಾಗಿದೆ. ಇವರು ಬನ್ನಿಮಂಟಪದ ಬಳಿ ಬಾಡಿಗೆಗೆ ರೂಮ್​ ಪಡೆದು ವಾಸವಿದ್ದರು. ಅಲ್ಲಿಯೇ ಕಂಪ್ಯೂಟರ್ ತರಬೇತಿ ಪಡೆಯುತ್ತಿದ್ದರು. ಗುರುವಾರ ಮುಂಜಾನೆ ಬನ್ನಿ ಮಂಟಪದ ಬಳಿ ಬೈಕ್ ನಲ್ಲಿ ತೆರಳುವಾಗ ಮಂಜು ಕವಿದ ವಾತಾವರಣವಿತ್ತು. ರಸ್ತೆಯಲ್ಲಿರುವ ಹಂಪ್ಸ್ ನೋಡದೆ ವೇಗವಾಗಿ ಚಾಲನೆ ಮಾಡಿಕೊಂಡು ಹೋದ ಪರಿಣಾಮ ವಿದ್ಯುತ್ ಕಂಬಕ್ಕೆ ಬೈಕ್ ಬಡಿದು  100ಮೀ.ದೂರ ಮಣ್ಣು ರಾಶಿಯ ಮೇಲೆ ಬಿದ್ದು ಸಾವನ್ನಪ್ಪಿದ್ದಾರೆ. ಎನ್.ಆರ್ ಪೊಲೀಸರು ಸ್ಥಳಕ್ಕಾಗಮಿಸಿ ಪ್ರಕರಣ ದಾಖಲಿಸಿಕೊಂಡು ಶವವನ್ನು ಕೆ.ಆರ್.ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಿದ್ದಾರೆ.

0

Leave a Reply

Your email address will not be published. Required fields are marked *