ಸಂಚಾರ ದಟ್ಟಣೆಗೆ ಸಿಲುಕಿ ಆಂಬುಲೆನ್ಸ್​​ನಲ್ಲೇ ಮಡಿದ ಬಾಲಕ

ಭೋಪಾಲ್: ಸತತ ಒಂದೂವರೆ ಗಂಟೆಗಳ ಕಾಲ ಸಂಚಾರ ದಟ್ಟಣೆಯಲ್ಲಿ ಸಿಲುಕಿದ್ದ ಆಂಬುಲೆನ್ಸ್​​ನಲ್ಲಿದ್ದ ಒಂದೂವರೆ ಬಾಲಕ ಚಿಕಿತ್ಸೆ ಸಿಗದೆ ಸಾವಿಗೀಡಾದ ದುರ್ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

ದಾಮೋಹ್​​​ನ ಘಂಟಾ ಘರ್​​ನಲ್ಲಿ ಬಾರಾತ್ ಮೆರವಣಿಗೆ ನಡೆಯುತ್ತಿದ್ದ ಕಾರಣದಿಂದಾಗಿ ರಸ್ತೆಯಲ್ಲೇ ಆಂಬುಲೆನ್ಸ್ ಸಿಲುಕಿತ್ತು. ಈ ಕುರಿತು ಪ್ರತಿಕ್ರಿಯಿಸಿರುವ ಸಾಗರ್ ವಲಯದ ಐಜಿ ಸತೀಶ್ ಚಂದ್ ಸಕ್ಸೇನಾ, ಸ್ವಯಂಪ್ರೇರಿತ ದೂರು ದಾಖಲಿಸಿಕೊಳ್ಳಲಾಗಿದೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ. ಅಲ್ಲದೇ, ಭವಿಷ್ಯದ ದಿನಗಳಲ್ಲಿ ಆಂಬುಲೆನ್ಸ್ ಸೇರಿದಂತೆ ತುರ್ತು ವಾಹನಗಳ ಸರಾಗ ಸಂಚಾರಕ್ಕೆ ಅನುಕೂಲ ಮಾಡಿಕೊಡುವುದು ಎಂದು ಭರವಸೆ ನೀಡಿದ್ದಾರೆ.

0

Leave a Reply

Your email address will not be published. Required fields are marked *