ಹಳೆ ಬೈಕ್​​ಗಳಿಗೆ ನ್ಯೂ ಲುಕ್​..

ಮಾರ್ಕೆಟ್​ನಲ್ಲಿ ಹೊಸ ಹೊಸ ಬೈಕ್ ಬಂದ್ರೆ ಸಾಕು ಬೈಕ್ ಕ್ರೇಜ್ ಇರೊರು ಅದನ್ನಾ ಖರೀದಿ ಮಾಡೋ ಶೋಕಿ ಒಂದು ಕಡೆಯಾದ್ರೆ … ಖರೀದಿ ಮಾಡಿರೋ ಬೈಕ್ ಗಳನ್ನಾ ಅಲ್ಟ್ರೇಷನ್ ಮಾಡ್ಸಿ ಓಡ್ಸೋರು ಮತ್ತೊಂದು ಕಡೆ…. ಅದೇ ರೀತಿ ಇಲ್ಲೋಬ್ಬ ವ್ಯಕ್ತಿ ತನ್ನ ಹಳೇ ಗಾಡಿಗಳನ್ನ ಅಲ್ಟ್ರೇಷನ್ ಮಾಡಿ ಹೊಸ ಲುಕ್ ಕೊಟ್ಟಿದ್ದಾನೆ.ಯಾರಿಗಾದ್ರು ಅಷ್ಟೆ… ಬೈಕ್ , ಕಾರು ಅಂದ್ರೆ ಕ್ರೇಜ್ ಇದ್ದೆ ಇರತ್ತೆ. ಯಾರಾದ್ರು ಡಿಫರೆಂಟ್ ಆಗಿರೊ ಗಾಡಿಲಿ ಹೋಗ್ತಾಯಿದ್ರೆ ಎಲ್ರೂ ಬಾಯಿ ಮೇಲೆ ಕೈಯಿಟ್ಟಕೊಂಡು ನೋಡ್ತಾರೆ…. ವಾವ್ ಎಷ್ಟು ಸಕ್ಕತಾಗಿದೆ. ನಾವು ಯಾವಾಗ ಇಂತ ಗಾಡಿಲಿ ಹೋಗೊದಪ್ಪ ಅಂತಾ ಯೋಚನೆ ಮಾಡ್ತಾರೆ… ಹಾಗೇ ಇವತ್ತು ನಾವು ನಿಮಗೆ ತೋರಿಸೊಕೆ ಹೊರಟಿರುವ ಗಾಡಿಗಳನ್ನಾ ನೀವೆನಾದ್ರು ನೋಡಿದ್ರೆ, ಅಬ್ಬಾ ನಾನು ಒಂದು ಸಲ ಈ ಗಾಡಿನ ಓಡಿಸಬೇಕಾಲ್ಲಪ್ಪ. ಏನು ಮಾಡೊದು ಅಂತೀರಾ…. ಹೌದು ರೀ ಇವತ್ತು ನಾವು ನಿಮಗೆ ಓಲ್ಡ್ ಗಾಡಿಗಳಿಗೆ ನ್ಯೂ ಲುಕ್ ನೀಡಿರುವುದನ್ನ ತೋರುಸ್ತೀವಿ ಎಸ್.. ಒಂದಕ್ಕಿಂತ ಒಂದು ಡಿಫರೆಂಟ್ ಗಾಡಿಗಳು ನಮಗೆ ಕಂಡುಬಂದಿದ್ದು ನಗರದ ಅಡುಗೊಡಿಯಲ್ಲಿ….

ಯಾರೊ ಒಂದು ಸುಂದರವಾಗಿರುವ ಹುಡುಗಿ ಕಾಣಿಸಿತ ಇದೆ ಅಲ್ವಾ ಯಾರು ಅದು…. ಅಂತಾ ಯೋಚನೆ ಮಾಡ್ತಾಯಿದ್ದರಾ.. ಅಯ್ಯೋ ಇದು ರಿಯಲ್ ಹುಡುಗಿ ಅಲ್ಲಾರಿ ಗಾಡಿ ಮೇಲೆ ಮೂಡಿರುವಂತಹ ಹುಡುಗಿಯ ಚಿತ್ತಾರ… ವಾವ್ ನೋಡೊಕೆ ಎಷ್ಟು ಸುಂದರವಾಗಿದೆ ಅಲ್ವಾ … ಇಷ್ಟು ಸುಂದರವಾಗಿ ಚಿತ್ರವನ್ನು ಮೂಡಿಸಿರೊರು ಯಾರು ಅಂತಾ ಕೇಳ್ತೀರಾ… ಅವ್ರೆ ಮುರುಳಿ. ಇವರ ಹೆಸ್ರು ಬರಿ ಮುರುಳಿ ಅಂದ್ರೆ ಯಾರಿಗು ಗೊತ್ತಾಗಲ್ಲ. ಓಲೆ ಮುರುಳಿ ಅಂತ ಖ್ಯಾತಿ ಪಡೆದಿರುವ ಇವರು ಸುಮಾರು 20 ವರ್ಷಗಳಿಂದ ಈ ಓಲ್ಡ್ ಬೈಕ್ ಗಳಿಗೆ ನ್ಯೂಲುಕ್ ಕೋಡೊದನ್ನಾ ಹವ್ಯಾಸವನ್ನಾಗಿ ಮಾಡಿಕೊಂಡಿದ್ದಾರೆ…. ಇವರ ಹತ್ತಿರ ಸದ್ಯಕ್ಕೆ 8 ರಿಂದ10 ಡಿಫರೆಂಟ್ ಆಗಿರೊ ಗಾಡಿಗಳಿವೆ.. ಮುಂದೆ ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ಡಿಫರೆಂಟ್ ಡಿಫರೆಂಟ್ ಆಗಿ ಗಾಡಿಗಳನ್ನ ವಿನ್ಯಾಸ ಮಾಡಿ, ಇದರಿಂದ ದೊಡ್ಡ ಹೆಸರು ಮಾಡಬೇಕು ಎಂಬುದು ಮುರುಳಿಯವರ ಆಸೆ…

ಇನ್ನಾ ಮುರುಳಿಯವರು ಗ್ರಾಫಿಕ್ಸ್ ಡಿಸೈನ್ಸ್,ಪೈಟಿಂಗ್,ಮೆಕಾನಿಕಲ್, ಮಾಡ್ತಾಯಿದ್ದಾರೆ…ಈ ಗಾಡಿಗಳನ್ನ ಶೂಟಿಂಗ್ ಗಳಿಗೂ ಬಾಡಿಗೆಗೂ ಸಹ ನೀಡುತ್ತಾರೆ.. ಉಪೇಂದ್ರ ಅವರ ಉಪ್ಪಿ2 ಚಿತ್ರಕ್ಕೂ ಇವರು ತಮ್ಮದೇ ಆದ ಶೈಲಿಯಲ್ಲಿ ಗಾಡಿಯನ್ನು ಡಿಸೈನ್ ಮಾಡಿದ್ದರು ಆದ್ರೆ ಶೂಟಿಂಗ್ ಶುರುವಾಗೊ ಸಮಯಕ್ಕೆ ಸರಿಯಾಗಿ ಗಾಡಿ ಸಿಗದ ಕಾರಣ ಇವರೆ ಶೂಟಿಂಗ್ ಗೆ ಗಾಡಿಯನ್ನಾ ಕ್ಯಾಂನ್ಸಲ್ ಮಾಡಿದ್ದರಂತೆ… ಇವರ ಹತ್ತಿರ ಸುಮಾರು 8 ರಿಂದ9 ಓಲ್ಡ್ ಗಾಡಿಗಳಿದ್ದು ಬುಲೇಟ್, ನೇವಿ, ಲೂನಾ, ಒಂದು ಅಡಿ ಗಾಡಿ,ಎಂಟು ಅಡಿ ಗಾಡಿ ಹೀಗೆ ವೆರೈಟಿ ಗಾಡಿಗಳನ್ನು ಇಲ್ಲಿ ನೋಡಬಹುದು…ಒಂದು ಗಾಡಿ ರೇಡಿ ಮಾಡೊದಕ್ಕೆ ಸುಮಾರು2ರಿಂದ3 ತಿಂಗಳು ಬೇಕಾಗಿದ್ದು ..ಸುಮಾರು 30 ಸಾವಿರದಿಂದ 50 ಸಾವಿರದವರಿಗೂ ಖರ್ಚಾಗಳಿದಿಯಂತೆ……ಇನ್ನಾ ಈ ಗಾಡಿಗಳನ್ನಾ ಯಾರು ಬೇಕಾದ್ರು ಎಲ್ಲಿಗಾದರು ತೆಗೆದುಕೊಂಡು ಹೊಗಬಹುದು .. ಇಷ್ಟು ಡಿಫರೆಂಟ್ ಆಗಿ ಡಿಸೈನ್ ಮಾಡಿರೋ ಗಾಡಿಗಳನ್ನಾ ಓಡಿಸೊದಕ್ಕೆ ಆರ್.ಟಿ.ಓ ದಿಂದ ಕೂಡ ಪರ್ಮಿಶನ್ ಸಿಕ್ಕಿಂದಿಯಂತೆ… ಈ ಗಾಡಿಗಳು ಬೇರೆ ಗಾಡಿಗೆ ಕಂಪೆರ್ ಮಾಡಿದರೆ ಮೈಲೇಜ್ ಸ್ವಲ್ಪ ಕಡಿಮೆಯಿದೆ..ನಿಮ್ಮ ಹತ್ತಿರ ಯಾವುದಾದ್ರು ಹಳೆಯ ಗಾಡಿಯಿದ್ರೆ ನೀವು ಕೂಡ ನಿಮ್ಮ ಗಾಡಿಯನ್ನಾ ಡಿಫರೆಂಟ್ ಆಗಿ ನ್ಯೂಲುಕ್ ನೀಡಿ ಓಡಿಸಬಹುದು.. ಜನ್ರು ಯಾವ ಡಿಸೈನ್ಸ್ ಕೇಳುತ್ತಾರೆ ಆ ಡಿಸೈಂನ್ಸ್ ಗಾಡಿಗಳನ್ನು ಇಲ್ಲಿ ರೆಡಿ ಮಾಡಿಕೊಡಲಾಗುತ್ತದೆ….ಒಟ್ನಲ್ಲಿ ಜನ್ರಿಗೆ ಯಾವ ಯಾವ ತರ ಕ್ರೇಜ್ ಇರತ್ತೆ ಅದುನ್ನ ಯಾವ ಯಾವ ತರ ತೋರಿಸಿಕೊಳ್ಳುತ್ತಾರೆ ಅನ್ನೊದ್ದನ್ನಾ ನೀವು ನೊಡಿದ್ದಿರಾ….ಜನ ಮರುಳೋ ಜಾತ್ರೆ ಮರುಳೋ ಅನ್ನೊದು ಇದುನ್ನಾ ನೊಡಿದಾಗ ನಿಜ ಅನ್ನಿಸುತ್ತೆ ಅಲ್ವಾ….

ಸುಪ್ರಿಯಾಶರ್ಮಾ ಸುದ್ದಿ ಟಿ.ವಿ ಬೆಂಗಳೂರು…

0

Leave a Reply

Your email address will not be published. Required fields are marked *