ಫೇಮಸ್ ಆದ “ಅಮ್ಮಾ ಐ ಲವ್ ಯೂ” ಟೀಸರ್….

ನಿನ್ನೆ ಅಮ್ಮಂದಿರ ದಿನಾಚರಣೆ.ಹಾಗಾಗಿ ಎಲ್ಲರ ವಾಟ್ಸ್ ಅಪ್,ಡಿ.ಪಿ ಗಳಲ್ಲೂ ಅವರ ಅಮ್ಮನದ್ದೇ ಫೋಟೋ ಜೊತೆಗೆ ವಿಶಸ್ ಗಳು…ಆದ್ರೆ ಕೊಂಚ ಢಿಫರೆಂಟ್ ಆಗಿ ಅಮ್ಮಾ ಐ ಲವ್ ಯೂ ಚಿತ್ರತಂಡ ಮದರ್ಸ್ ಡೇ ನಾ ಸೆಲಬ್ರೇಟ್ ಮಾಡ್ತು..ಚಿತ್ರದ ಟೀಸರ್ ಲೋಕಾರ್ಪಣೆ ಮಾಡೋ ಮೂಲಕ ಎಲ್ಲೆಡೆ ಹವಾನ ಕ್ರಿಯೇಟ್ ಮಾಡಿದೆ.ಚಿರಂಜೀವಿ ಸರ್ಜಾ ಎಂದ ತಕ್ಷಣ ತಟ್​ ಅಂತ ನೆನಪಾಗುವುದು ‘ವಾಯುಪುತ್ರ’, ‘ಗಂಡೆದೆ’, ‘ದಂಡಂ ದಶಗುಣಂ’, ,ಸಂಹಾರ. ಹೀಗೆ ಒಂದಿಷ್ಟು..ಹೊಸತನದೊಂದಿಗೆ ಸಂಚಲನ ಉಂಟುಮಾಡುವ ಈ ಕಲಾವಿದನ ಸಿನಿಮಾಗಳು ಬಿಡುಗಡೆ ಆಗ್ತಾ ಇವೆ ಅಂದ್ರೆ..ಸುಮ್ನೆನಾ … ಅಭಿಮಾನಿಗಳಿಗಂತು ಫುಲ್​ ಮೀಲ್ಸ್​ ಸಿಕ್ಕಿದ ಹಾಗೆ ಖುಷಿ ಆಗುತ್ವೆ. ಅದ್ರಲ್ಲೂ ಈಗ ಚಿರು ದ್ವಾರಕೀಶ್​ ಸಂಸ್ಥೆ ಅಡಿಯಲ್ಲಿ ತಯಾರುತ್ತಿರುವ ಚಿತ್ರದಲ್ಲಿ ನಟಿಸ್ತಿದ್ದಾರೆ ಅನ್ನೋ ವಿಷ್ಯ ಕೇಳಿನೇ ಅಭಿಮಾನಿಗಳು ಕುಣಿದು ಕುಪ್ಪಳಿಸಿದ್ದಾರೆ. ಪಕ್ಕಾ ಇದೊಂದು ಬಿಗ್​ ಪ್ರಾಜೆಕ್ಟ್​ ಸಿನಿಮಾ ಅಂತ ಗಾಂಧಿನಗರದಲ್ಲಿ ಟಾಕ್​ ಕ್ರಿಯೇಟ್​ ಆಗಿದೆ.

ಅಮ್ಮಾ ಐ ಲವ್ ಯೂ… ಸಿನಿಮಾ ಬಿಡುಗಡೆಗೆ ತಯಾರಾಗಿದ್ದು, ಸಿನಿಮಾದ ವಿಶೇಷ ಟೀಸರ್ ವೊಂದನ್ನು ಅಮ್ಮಂದಿರ ದಿನದಂದು ನಿನ್ನೆ ಚಿತ್ರತಂಡ ಬಿಡುಗಡೆ ಮಾಡಿದೆ. ಈ ಟೀಸರ್ ನಲ್ಲಿ ತಾಯಿಯಿಂದ ನಾವು ಏನು ಬಯಸುತ್ತೇವೆ? ಮತ್ತು ಆಕೆಗೆ ಪ್ರತಿಫಲವಾಗಿ ಏನನ್ನು ನೀಡುತ್ತೇವೆ ಎಂಬ ಅಂಶವಿದೆ. ಅಲ್ಲದೇ ತಂದೆಯಾಗಲು ಒಂದು ಕ್ಷಣ ಸಾಕು, ತಾಯಿಯಾಗಲು ಒಂದು ಜೀವನ ಬೇಕು ಎಂಬ ಸಂದೇಶ ಈ ಟೀಸರ್ ನಲ್ಲಿದೆ.ಕೌಟಂಭಿಕ ಸಿನಿಮಾ ಕಥೆ ಹೊಂದಿರುವ ಈ ಸಿನಿಮಾವನ್ನು ಕೆ.ಎಂ. ಚೈತನ್ಯ ನಿರ್ದೇಶನ ಮಾಡಿದ್ದು, ಒಟ್ಟು ಎರಡು ನಿಮಿಷ ಇರುವ ಈ ಟೀಸರ್ ಅನ್ನು ದುನಿಯಾದ ಎಲ್ಲಾ ಸಮಸ್ತ ತಾಯಂದಿರರಿಗೆ ಅರ್ಪಿಸಲಾಗಿದೆ.ಟೀಸರ್ ಗೆ ನಟ ಧೃವಸರ್ಜಾ ಹಿನ್ನಲೆ ಧ್ವನಿಯನ್ನು ಕೊಟ್ಟಿದ್ದಾರೆ. ಅಲ್ಲದೇ ಈ ಟೀಸರ್ ಮದರ್ಸ್ ಗೆ ಅತ್ಯಂತ ಸೂಕ್ತ ಎಂದು ಅಮ್ಮಂದಿರ ದಿನದಂದೇ ಬಿಡುಗಡೆ ಮಾಡಿದ್ದು, ಈಗಾಗಲೇ ಈ ಟೀಸರ್ ವೀಕ್ಷಿಸಿದ ಸಾಕಷ್ಟು ಮಂದಿ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಇನ್ನು ಈ ಟೀಸರ್ ನೋಡಿದ ಪ್ರತಿಯೊಬ್ಬರೂ ತನ್ನ ತಾಯಿಯ ಮೇಲಿರುವ ಪ್ರೀತಿ ಇನ್ನಷ್ಟು ಹೆಚ್ಚಾಗುತ್ತದೆ. ಪ್ರತಿದಿನ ಎಲ್ಲರ ಜೀವನದಲ್ಲಿ ತಾಯಿಯ ಜೊತೆಗೆ ನಡೆಯುವ ಸಂಭಾಷಣೆಗಳನ್ನು ತೋರಿಸಲಾಗದೆ.

ಟೀಸರ್ ಬಿಡುಗಡೆಯಾದ ಕೆಲವೇ ಸಮಯದಲ್ಲಿ ಎಲ್ಲಾ ಕಡೆ ಫೇಮಸ್ ಆಗಿ,ಎಲ್ಲರ ವಾಟ್ಸ್ ಅಪ್ ಸ್ಟೇಟಸ್ ನಲ್ಲಿ ಹರಿದಾಡೋ ಮೂಲಕ ಅಮ್ಮಂದಿರ ದಿನಕ್ಕೆ ವಿಶ್ ಮಾಡಿದೆ.ದ್ವಾರಕೀಶ್ ಚಿತ್ರ ಬ್ಯಾನರ್ ನಡಿ ಈ ಚಿತ್ರ ತಯಾರಾಗಿದ್ದು, ಚಿರಂಜೀವಿ ಜತೆ, ನಿಶ್ವಿಕಾ ನಾಯ್ಡು, ರವಿಕಾಳೆ, ಸಿತಾರ ಸೇರಿದಂತೆ ಸಾಕಷ್ಟು ಮಂದಿ ನಟಿಸಿದ್ದಾರೆ. ಹಾಗೂ ಚಿರಂಜೀವಿ ಸರ್ಜಾ, ಯೋಗೀಶ್ ದ್ವಾರಕೀಶ್, ಕೆ.ಎಂ. ಚೈತನ್ಯ ಅವರ ಹ್ಯಾಟ್ರಿಕ್ ಕಾಂಭೀನೇಷನ್ನಿನ ಚಿತ್ರ ಇದಾಗಿದ್ದು ಚಿತ್ರದ ಕುರಿತು ಇದ್ದ ನಿರಿಕ್ಷೆಯನ್ನ ಇನ್ನೂ ಜಾಸ್ತಿ ಮಾಡಿದೆ.

ಅಕ್ಷತಾ ಗೌಡ,ಫಿಲ್ಮಂ ಬ್ಯೂರೋ ಸುದ್ದಿ ಟಿ.ವಿ

0

Leave a Reply

Your email address will not be published. Required fields are marked *