ಹೈಕೋರ್ಟ್ ನಾಗರಿಕರ ಆಯ್ಕೆಯ ಹಕ್ಕನ್ನು ಎತ್ತಿ ಹಿಡಿದಿದೆ: ಪ್ರಕಾಶ್ ರೈ

ಕಾಲಾ ಚಿತ್ರ ಬಿಡುಗಡೆ ಕುರಿತು ಪ್ರಕಾಶ್ ರೈ ಟ್ವೀಟ್ ಮಾಡಿದ್ದು, ಹೈಕೋರ್ಟ್ ತೀರ್ಪನ್ನು ಉಲ್ಲೇಖಿಸಿ, ಈಗ ಕೋರ್ಟ್ ನಾಗರಿಕರ ಆಯ್ಕೆಯ ಹಕ್ಕನ್ನು ಎತ್ತಿಹಿಡಿದಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಅಲ್ಲದೇ, ಹೋರಾಟಗಾರರಿಗೆ ಜವಾಬ್ದಾರಿಯಿಂದ ವರ್ತಿಸಲು ಕೋರ್ಟ್ ಸೂಚಿಸಿದೆ ಎಂದಿದ್ದಾರೆ. ಜೊತೆಗೆ, ನಾನು ಅರ್ಥಪೂರ್ಣವಾಗಿ ಹೋರಾಡಿ ಎಂದು ಮನವಿ ಮಾಡುತ್ತೇನೆ. ಹಿಂಸಾಚಾರ ಮಾಡಬೇಡಿ. ಸಾಮರಸ್ಯ ಹಾಳು ಮಾಡಬೇಡಿ ಎಂದು ಟ್ವೀಟ್ ಮಾಡಿದ್ದಾರೆ. ಕಾವೇರಿ ಸಮಸ್ಯೆ ಪರಿಹರಿಸಲು ಸರ್ಕಾರದ ಮೇಲೆ ಒತ್ತಡ ಹೇರಿ ಎಂದಿರುವ ಅವರು ಸುಮ್ಮನೇ ಕೇಳುತ್ತಿದ್ದೇನೆ ಹ್ಯಾಶ್​ಟ್ಯಾಗ್​​ನಡಿ ಟ್ವೀಟ್ ಮಾಡಿದ್ದಾರೆ.

1+

Leave a Reply

Your email address will not be published. Required fields are marked *